HEALTH TIPS

No title

              ಶಬರಿಮಲೆಯಲ್ಲಿ ಮದವೇರಿದ ಆನೆಯ ಆಟೋಪ-ಹಲವರಿಗೆ ಗಾಯ
   ಕಾಸರಗೋಡು: ಜಗತ್ ಪ್ರಸಿದ್ದ ತೀಥರ್ಾಟನಾ ಕ್ಷೇತ್ರವಾಗಿರುವ ಪತ್ತನಂತಿಟ್ಟು ಜಿಲ್ಲೆಯ ಶ್ರೀಶಬರಿಮಲೆ ಕ್ಷೇತ್ರದ ವಾಷರ್ಿಕ ಉತ್ಸವದ ಅಂಗವಾಗಿ ಶುಕ್ರವಾರ ನಡೆದ ಆರಾಟ್ ಉತ್ಸವದ ಸಂದರ್ಭ ಆನೆಯೊಂದು ಪ್ರಕ್ಷುಬ್ದಗೊಂಡು ಉಂಟಾದ ತುಳಿತದಲ್ಲಿ 12 ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
   ಶುಕ್ರವಾರ ಬೆಳಿಗ್ಗೆ 10.15ರ ವೇಳೆ ಚಶಬರಿಮಲೆ ನೀಲಿಮಲೆಯಲ್ಲಿ ಘಟನೆ ನಡೆದಿದೆ. ಆರಾಟ್ ಗಾಗಿ ಆನೆ ಹೊತ್ತಿದ್ದ ಅಯ್ಯಪ್ಪ ವಿಗ್ರಹವನ್ನು ಬಳಿಕ ಕೆಳಗಿಳಿಸಿ ಪಂಪಾನದಿಗೆ ಕೊಂಡೊಯ್ದು ವಿಧಿವಿಧಾನ ಕೈಗೊಳ್ಳಲಾಯಿತು.
    ಕಳೆದ ಹತ್ತು ದಿನಗಳಿಂದ ನಡೆಯುತ್ತಿದ್ದ ವಾಷರ್ಿಕ ಜಾತ್ರೋತ್ಸವದ ಸಮಾರೋಪ ದಿನವಾದ ಶುಕ್ರವಾರ ಅಯ್ಯಪ್ಪ ವಿಗ್ರಹವನ್ನು ಆರಾಟ್ ಗಾಗಿ ಪಂಪಾನದಿಗೆ ಆನೆಯ ಮೂಲಕ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿತ್ತು. ಪನ್ಮನ ಶರವಣನ್ ಎಂಬ ಆನೆಯ ಮೇಲೆ ವಿಗ್ರಹ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಆನೆಗೆ ಹಠಾತ್ ಮದವೇರಿ ತನ್ನ ಆಟೋಪಕ್ಕೆ ಶುರುಹಚ್ಚಿಕೊಳ್ಳುತ್ತಿರುವಂತೆ ಆನೆಯ ಮೇಲಿದ್ದ ಅರ್ಚಕರು ಕೆಳಬಿದ್ದರು. ಈ ವೇಳೆ ಗೊಂದಲಗೊಂಡು ಸೇರಿದ್ದ ಅಸಂಖ್ಯ ಸಂಖ್ಯೆಯ ಭಕ್ತರು ಗಲಿಬಿಲಿಗೊಂಡು ಓಟಕ್ಕಿತ್ತಾಗ  ನೂಕುನುಗ್ಗಲು ಉಂಟಾಯಿತು.
  ಆನೆಯ ಮೇಲಿತ್ತ ಅರ್ಚಕ ತೃಶೂರು ನಿವಾಸಿ ವಿನೀತ್, ಮಾವುತ ಕೊಲ್ಲಂ ನಿವಾಸಿ ಕೃಷ್ಣ ಕುಮಾರ್ ಎಂಬವರು ಗಂಭೀರವಾಗಿ ಗಾಯಗೊಂಡಿರುವರು. ಅವರನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೊತೆಗೆ ಇತರ 12 ಮಂದಿ ಕಾಲ್ತುಳಿತಕ್ಕೊಳಗಾಗಿ ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೆ ಕಾಡೊಳಗೆ ಓಡಿ ಮರೆಯಾಯಿತು.
  ವಿಗ್ರಹವನ್ನು ಬಳಿಕ ಮೆರವಣಿಗೆಯಲ್ಲಿ ಮುಖ್ಯ ಅರ್ಚಕ ಉಣ್ಣಿಕೃಷ್ಣನ್ ನಂಬೂದಿರಿಯವರ ನೇತೃತ್ವದಲ್ಲಿ  ಪಂಪಾನದಿಗೆ ಹೊತ್ತು ಕೊಂಡೊಯ್ದು ಅವಭೃತ ಸ್ನಾನವನ್ನು ನಡೆಸಿ ಮರಳಿ ತರಲಾಯಿತು. ಬಳಿಕ ಮಧ್ಯಾಹ್ನ ತಂತ್ರಿವರ್ಯ ಕಂಠರರ್ ಮಹೇಶ್ ಮೋಹನ್ ವಿಧಿವಿಧಾನಗಳನ್ನು ನಡೆಸಿ ಪೂಜಾಕರ್ಮ ನಿರ್ವಹಿಸಿದರು. ರಾಜ್ಯ ದೇವಸ್ವಂ ಸಚಿವ ಕಡನಪಳ್ಳಿ ರಾಮಚಂದ್ರನ್, ದೇವಸ್ವಂ ಬೋಡರ್್ ಅಧ್ಯಕ್ಷ ಎ.ಪದ್ಮಕುಮಾರ್ ಸಂದರ್ಶನ ನಡೆಸಿದರು.
 
     

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries