HEALTH TIPS

No title

                  ಪಟ್ಲ ಯಕ್ಷಾಶ್ರಯ ಯೋಜನೆ : 2ನೇ ಮನೆಯ ಹಸ್ತಾಂತರ
     ಪೆರ್ಲ: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಪಟ್ಲ ಯಕ್ಷಾಶ್ರಯ ಯೋಜನೆಯಂತೆ ಎರಡನೇಯ ಮನೆಯ ಗೃಹಪ್ರವೇಶವು ಕಾಟುಕುಕ್ಕೆ ಎಂಬಲ್ಲಿ ನೆರವೇರಿತು. ಬ್ರಹ್ಮಶ್ರೀ ರವೀಶ್ ತಂತ್ರಿ ಅವರು ಈ ಹಿಂದೆ ಕಟೀಲು ಮೇಳದಲ್ಲಿ 45 ವರ್ಷಗಳ ಕಾಲ ಕಲಾಸೇವೆಗೈದು ಇದೀಗ ಅಶಕ್ತರಾಗಿ ಪಾಶ್ರ್ವವಾಯು ಸಮಸ್ಯೆುಂದ ಬಳಲುತ್ತಿರುವ ಕೊರಗಪ್ಪ ನಾಯ್ಕ ಅವರಿಗೆ ಮನೆಯನ್ನು ಹಸ್ತಾಂತರಿಸಿದರು.
  ಆಶೀರ್ವಚನ ನೀಡಿದ ಶ್ರೀಧಾಮ ಮಾಣಿಲ ಕ್ಷೇತ್ರದ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು, ಒರ್ವ ಯಕ್ಷಗಾನದ ಕಲಾವಿದ ತನ್ನ ಕ್ಷೇತ್ರದ ಅಶಕ್ತ ಕಲಾವಿದರಿಗೆ ಮನೆಯನ್ನು ನಿಮರ್ಿಸಿಕೊಡುವುದು ಯಕ್ಷಗಾನದ ಇತಿಹಾಸದಲ್ಲೇ ಇದೇ ಪ್ರಥಮ. ಇಂತಹ ಸಮಾಜಮುಖೀ ಸತ್ಕಾರ್ಯಕ್ಕಾಗಿ ತಾನೂ ಕೂಡ ಮಾಣಿಲದಲ್ಲಿ ಪಟ್ಲ ಫೌಂಡೇಶನ್ ಘಟಕ ಸ್ಥಾಪಿಸುವ ಯೋಜನೆ ಹೊಂದಿರುವುದಾಗಿ ಎಂದು ಹೇಳಿದರು. 
  ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ, ಮಾರ್ಗದರ್ಶಕರಾದ ಪಟ್ಲಗುತ್ತು ಮಹಾಬಲ ಶೆಟ್ಟಿ, ಪಂಚಾಯತ್ ಸದಸ್ಯ ಸಂಜೀವ ರೈ, ಭೋಜನದ ವ್ಯವಸ್ಥೆಯನ್ನು ಮಾಡಿದ ಸತ್ಯಸಾಯಿ ಸೇವಾ ಸಮಿತಿ ಸಂಚಾಲಕ ಸಚ್ಚಿದಾನಂದ ಖಂಡೇರಿ, ಫಲಾಪೇಕ್ಷೆರಹಿತವಾಗಿ ಪೌರೋಹಿತ್ಯ ನೆರವೇರಿಸಿದ ನಾಗರಾಜ್ ಭಟ್ ಮತ್ತು ನಟರಾಜ್ ಭಟ್, ಮಂಗಳೂರು ನಗರ ಘಟಕದ ರಾಕೇಶ್ ಪೂಂಜ ಉಪಸ್ಥಿತರಿದ್ದರು. ಖ್ಯಾತ ಭಾಗವತರಾದ ಸತ್ಯನಾರಾಯಣ ಪುಣಿಂಚತ್ತಾಯರು ಸ್ವಾಗತಿಸಿ, ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಕಾರ್ಯಕ್ರಮ ನಿರೂಪಿಸಿದರು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries