HEALTH TIPS

No title

               ಬೊಳ್ಳೂರು ಶ್ರೀಸದಾಶಿವ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ-ಸಿದ್ದತೆಗಳು ಬಹುತೇಕ ಪೂರ್ಣ
     ಬದಿಯಡ್ಕ : ಮುನಿಗಳ ವಾಸಸ್ಥಳವಾದ ಕಾರಣ `ಮುನಿಯೂರು' ಎಂಬ ಹೆಸರಿನಿಂದ ಪ್ರಸಿದ್ಧವಾದ ಬಯಲು ಪ್ರದೇಶವು ಬದಿಯಡ್ಕ ಮತ್ತು ಕುಂಬ್ಡಾಜೆ ಗ್ರಾಮಗಳಲ್ಲಿ ವ್ಯಾಪಿಸಿಕೊಂಡಿದೆ. ಮುನಿಯೂರು ಬಯಲಿನ ಮೇಲಿನ ಭಾಗವಾದ ಬೊಳ್ಳೂರಿನಲ್ಲಿ ಶ್ರೀ ಸದಾಶಿವ ಕ್ಷೇತ್ರವು ನೆಲೆಗೊಂಡಿದೆ. ದೇವಸ್ಥಾನದಲ್ಲಿ ಉತ್ಸವ ಜರಗುವಾಗ ಈ ಪ್ರದೇಶವು ಬೆಳಗಿಸಲ್ಪಟ್ಟು ಬೊಳ್ಪುದ ಊರು ಮುಂದೆ ಬೊಳ್ಳೂರಾಯಿತು. ಬಯಲಿನ ಕೆಳಭಾಗದಲ್ಲಿ ಮುನಿಯೂರು ಶ್ರೀ ಗೋಪಾಲಕೃಷ್ಣ ಕ್ಷೇತ್ರವು ಇದರ ಬಡಗು ಭಾಗದಲ್ಲಿ ನೆಲಗೊಂಡಿದೆ. ಹಿಂದಿನ ಕಾಲದಲ್ಲಿ ಮುನಿಯೂರಿನಲ್ಲಿ ವಾಸಮಾಡುತ್ತಿದ್ದ ಋಷಿಮುನಿಗಳು ತಮ್ಮ ಹೋಮಧೇನುವನ್ನು ಮೇಯಲು ಗುಡ್ಡಕ್ಕೆ ಬಿಟ್ಟಾಗ ಅದು ದಕ್ಷಿಣ ಪಶ್ಚಿಮಾಭಿಮುಖವಾಗಿ ಚಲಿಸಿ ಅಲ್ಲಿನ (ಈಗಿನ ಬೊಳ್ಳೂರು ಬೆಟ್ಟದ ಬದಿಯಲ್ಲಿರುವ ಒಂದು ಕಲ್ಲುಬಂಡೆಯ ಮೇಲೆ ತನ್ನ ಕೆಚ್ಚಲಿನಿಂದ ಕ್ಷೀರ ಸುರಿಸುವುದನ್ನು ಕಂಡು ಆಶ್ಚರ್ಯಪಟ್ಟರು. ಇದನ್ನು ಮುನಿಗಳು ತಮ್ಮ ದಿವ್ಯ ದೃಷ್ಠಿಯಲ್ಲಿ ನೋಡಿದಾಗ ಆ ಬಂಡೆಯಲ್ಲಿ ಪರಶುರಾಮನಿಂದ ಪ್ರತಿಷ್ಠಾಪಿಸಲ್ಪಟ್ಟ 108 ಶಿವಸಾನ್ನಿಧ್ಯದಲ್ಲಿ ಒಂದು ಇದಾಗಿದೆಯೆಂದು ಮನಗಂಡರು.
ಕೆಲವು ಮುನಿಗಳು ಅವರ ವಾಸಸ್ಥಳವನ್ನು ಮುನಿಯೂರಿನಿಂದ ಬೊಳ್ಳೂರಿಗೆ ಬದಲಾಯಿಸಿ ಅಲ್ಲಿರುವ ಕೆರೆಯ ಸಮೀಪ ಆಶ್ರಮವಾಸಿಗಳಾಗಿದ್ದುಕೊಂಡು ಬಂಡೆಯಲ್ಲಿರುವ ಶಿವಚೈತನ್ಯವನ್ನು ಆರಾಧಿಸಿಕೊಂಡು ಪುನೀತರಾದರು. ಅವರು ಯಜ್ಞ ಯಾಗಾದಿಗಳನ್ನು ಮಾಡಿಕೊಂಡಿದ್ದ ಯಜ್ಞಕುಂಡಗಳ ಕುರುಹು ಕೆರೆಯ ಪರಿಸರದಲ್ಲಿ ಈಗಲು ಇದೆ.
ಹೀಗೆ ಶಿವನನ್ನು ಆರಾಧಿಸುತ್ತಿದ್ದ ಮುನಿಗಳು ವಿಷ್ಣುಭಕ್ತರಾದ ಕಾರಣ ಅವರು ನಮಗೊಂದು ವಿಷ್ಣುದೇವಾಲಯ ಬೇಕೆಂದು ಶಿವನಲ್ಲಿ ಪ್ರಾಥರ್ಿಸಿದಾಗ ಅಶರೀರವಾಣಿಯೊಂದು ಕೇಳಿಬಂತು. ಆ ಪ್ರಕಾರ ವಿಷ್ಣುದೇವರ ಮೂತರ್ಿಯನ್ನು ತಂದು ಶಿವನ ಆಜ್ಞಾನುಸಾರ ಶ್ರೀದೇವರ ಆಭರಣವಾದ ನಾಗರ ಹಾವು ಗರ್ಭಗುಡಿಯಿಂದ ಹೊರಬಂದು ಮುನಿಯೂರಿನಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸ್ಥಳವನ್ನು ತೋರಿಸಿಕೊಟ್ಟಿತು. ಇಲ್ಲಿರುವ ನಾಗಬನದಲ್ಲಿ ಈಗಲು ಆ ಸರ್ಪದ ಸಂತತಿಯಿದೆ. ಈ ಎರಡು ಕ್ಷೇತ್ರಗಳಲ್ಲಿ ಒಂದು ಪರಮಾತ್ಮನ ದೇಹವಾದರೆ ಇನ್ನೊಂದು ಆತ್ಮರೂಪದಲ್ಲಿ ಬೆಸೆಯಲ್ಪಟ್ಟಿದೆ. ಆದುದರಿಂದ ಈ ಎರಡು ಕ್ಷೇತ್ರಗಳನ್ನು ಬೇರೆ ಬೇರೆಯಾಗಿ ಪರಿಗಣಿಸಲು ಅವಕಾಶವಿಲ್ಲ.
ಶ್ರೀ ಸದಾಶಿವ ಕ್ಷೇತ್ರದ ಉಪದೇವರಾದ ವನಶಾಸ್ತಾರ ದೇವಸ್ಥಾನದ ಬಡಗು ಭಾಗದ ಬಯಲು ಪ್ರದೇಶದಲ್ಲಿದೆ. ಈ ಮೂರು ದೇವಸ್ಥಾನಗಳಿಗೆ ತಂತ್ರಿವರ್ಯರಾಗಿ ದೇಲಂಪಾಡಿ ತಾಂತ್ರಿಕ ಮನೆತನದವರು ತಂತ್ರಿಗಳಾಗಿರುತ್ತಾರೆ.
ಸುಮಾರು 50 ವರ್ಷಗಳ ಹಿಂದೆ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶಾದಿಗಳು ನಡೆದಿದ್ದು ಈ ತನಕ ದೈನಂದಿನ ಪೂಜಾವಿಧಿಗಳು ಮೀನ ಮಾಸ 23,24 ದಿನಾಂಕಗಳಲ್ಲಿ, ವಾಷರ್ಿಕ ಉತ್ಸವವು ನಡೆದುಬರುತ್ತಿದೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಕ್ಷೇತ್ರದ ಜೀಣರ್ೋದ್ಧಾರವು ನಡೆಯಿತು.
.........................
ಸ್ವಸ್ತಿ ಶ್ರೀ ವಿಲಂಬಿನಾಮ ಸಂವತ್ಸರದ ಚೈತ್ರಮಾಸ 21ರಿಂದ 29ರ ತನಕ, ದಿನಾಂಕ 2018 ಏಪ್ರಿಲ್ 04 ಬುಧವಾರದಿಂದ, ಏ.12 ಗುರುವಾರದ ವರೆಗೆ ಶ್ರೀ ಕ್ಷೇತ್ರದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ವೇದಮೂತರ್ಿ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾಮರ್ಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
........................
ಕಾರ್ಯಕ್ರಮಗಳು :
ಏ.4ರಂದು ಬೆಳಗ್ಗೆ 8 ಗಂಟೆಗೆ ಗಣಪತಿ ಹೋಮ, 10 ಗಂಟೆಯಿಂದ ಮುನಿಯೂರು ಶ್ರೀ ಗೋಪಾಲಕೃಷ್ಣ ಕ್ಷೇತ್ರದಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವುದು, ಸಾಯಂಕಾಲ 5 ಗಂಟೆಗೆ ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿಗಳ ಮತ್ತು ಋತ್ವಿಜರ ಆಗಮನ, ಪೂರ್ಣಕುಂಭ ಸ್ವಾಗತ, ಗಣಪತಿ ಪೂಜೆ, ಅಂಕುರಾರೋಪಣ, ಸ್ಥಳಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ವಾಸ್ತುಬಲಿ, ರಾಕ್ಷೊಘ್ನ ಹೋಮ, ರಾತ್ರಿಪೂಜೆ.
ಏ.5ರಂದು ಬೆಳಗ್ಗೆ ತಾಂತ್ರಿಕ ವಿಧಿವಿಧಾನಗಳು, ಭಜನೆ, ಇತ್ಯಾದಿ ಕಾರ್ಯಕ್ರಮಗಳು, ಸಂಜೆ 5 ಗಂಟೆಯಿಂದ ಧಾಮರ್ಿಕ ಸಭೆ, ಜೀಣರ್ೋದ್ಧಾರ ಸಮಿತಿ ಅಧ್ಯಕ್ಷ ವಸಂತ ಪೈ ಬದಿಯಡ್ಕ ಅಧ್ಯಕ್ಷತೆಯಲ್ಲಿ ಮಲ್ಲ ಶ್ರೀ ದುಗರ್ಾಪರಮೇಶ್ವರೀ ಕ್ಷೇತ್ರದ ಆಡಳಿತ ಮೊಕ್ತೇಸರ ಆನೆಮಜಲು ವಿಷ್ಣುಭಟ್ ಅವರಿಂದ ಉದ್ಘಾಟನೆ, ಬ್ರಹ್ಮಶ್ರೀ ವಿಷ್ಣು ಆಸ್ರ ಉಳಿಯ ಅವರಿಂದ ಧಾಮರ್ಿಕ ಭಾಷಣ, ರಾತ್ರಿ 7ಗಂಟೆಯಿಂದ ಊರ ಮಹಿಳೆಯರಿಂದ ಮೆಗಾ ತಿರವಾದಿರ ನೃತ್ಯ, ಏ.6 ರಂದು ತಾಂತ್ರಿಕ ಕಾರ್ಯಕ್ರಮಗಳು, ಭಜನೆ, ರಾತ್ರಿ ಊರ ಮಕ್ಕಳಿಂದ ನೃತ್ಯ ವಿಸ್ಮಯಂ, ಏ.7ರಂದು ತಾಂತ್ರಿಕ ವಿಧಾನಗಳು, ಭಜನೆ, ರಾತ್ರಿ 8 ಗಂಟೆಯಿಂದ ಬದಿಯಡ್ಕ ರಂಗಸಿರಿ ಸಾಂಸ್ಕೃತಿಕ ವೇದಿಕೆಯವರಿಂದ ಶ್ರೀಹರಿದರ್ಶನ ಯಕ್ಷಗಾನ ಬಯಲಾಟ, ಏ.8ರಂದು ತಾಂತ್ರಿಕ ಕ್ರಿಯೆಗಳು, ಭಜನೆ, ರಾತ್ರಿ 8 ಗಂಟೆಯಿಂದ ವಿದುಷಿ ಶ್ರೀಮತಿ ವಿದ್ಯಾಲಕ್ಷ್ಮಿ, ನಾಟ್ಯವಿದ್ಯಾಲಯ ಕುಂಬಳೆ ಇವರ ಶಿಷ್ಯೆಯರಿಂದ ನೃತ್ಯ ವೈವಿಧ್ಯ.
ಏ.9ರಂದು ವಿದ್ಯೇಶ್ವರ ಕಲಶಪೂಜೆ, ನಪುಂಸಕ ಶಿಲಾ ಪ್ರತಿಷ್ಠೆ, ಅಷ್ಟಬಂಧ ನಿಕ್ಷೇಪಣ, ಕುಂಭೇಶ ಕಲಶಾಭಿಷೇಕ, ಪೂವರ್ಾಹ್ನ 11.02ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಜೀವವಾಹನ, ಬಿಂಬ ಪ್ರತಿಷ್ಠೆ, ಮಧ್ಯಾಹ್ನ 2.30ರಿಂದ ಶ್ರೀಮತಿ ಸುಗುಣಾ ಬಿ. ತಂತ್ರಿ ಮತ್ತು ಬಳಗದವರಿಂದ ಶಾಸ್ತ್ರೀಯ ಸಂಗೀತ, ಸಂಜೆ 5 ಘಂಟೆಯಿಂದ ಧಾಮರ್ಿಕ ಸಭೆ, ಡಾ. ಶ್ರೀನಿಧಿ ಸರಳಾಯ ಅಧ್ಯಕ್ಷತೆಯಲ್ಲಿ ಶ್ರೀಮತಿ ಸುಗುಣಾ ಬಿ.ತಂತ್ರಿಯವರಿಂದ ಧಾಮರ್ಿಕ ಭಾಷಣ. ಏ.10ರಂದು ಬೆಳಗ್ಗೆ ತಾಂತ್ರಿಕ ವಿಧಾನಗಳು, ಭಜನೆ, ಅಪರಾಹ್ನ 3ರಿಂದ ಗೋವಿಂದ ಭಟ್ ಬೇಂದ್ರೋಡು ಮತ್ತು ಬಳಗದವರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 6 ಗಂಟೆಯಿಂದ ಧಾಮರ್ಿಕ ಸಭೆ, ಯಸ್.ಎನ್.ಮಯ್ಯ ಅಧ್ಯಕ್ಷತೆಯಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಕೋಡೋತ್ ಅವರಿಂದ ಧಾಮರ್ಿಕ ಭಾಷಣ, ಧ.ಗ್ರಾ.ಸಂ. ಯೋಜನಾಧಿಕಾರಿ ಚೇತನ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ರಾತ್ರಿ ಭಜನೆ, 9 ಗಂಟೆಯಿಂದ ಕಿಶೋರ್ ಪೆರ್ಲ ಮತ್ತು ಬಳಗದವರಿಂದ ಭಕ್ತಿಗಾನ ಸುಧಾ. ಏ.11ರಂದು ಬೆಳಗ್ಗೆ 6.30ರಿಂದ ತಾಂತ್ರಿಕ ವಿಧಾನಗಳು, ಭಜನೆ, ಮಧ್ಯಾಹ್ನ ಮಹಾಪೂಜೆ, ಸಾಯಂಕಾಲ 5.30ರಿಂದ ಅಧಿವಾಸ ಹೋಮ, ಅಧಿವಾಸ ಪ್ರಾರ್ಥನೆ, ಸೋಪಾನದಲ್ಲಿ ರಾತ್ರಿ ಪೂಜೆ, ರಾತ್ರಿ 8.30ರಿಂದ ಸ್ವಸ್ತಿಶ್ರೀ ಕಲಾ ಪ್ರತಿಷ್ಠಾನ ಸೂರಂಬೈಲು-ಎಡನಾಡು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ, ಏ.12ರಂದು ಬೆಳಗ್ಗೆ ಕವಾಟೋದ್ಘಾಟನೆ, ಕಣಿದರ್ಶನ, ನಿಮರ್ಾಲ್ಯ ದರ್ಶನ ತೈಲಪೂರ್ವಕ ಕಲಶಾಭಿಷೇಕ, ಸೃಷ್ಟಿತತ್ವ ಕಲಶಾಭಿಷೇಕ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ, ಸಪರಿವಾರ ಪೂಜೆ, ಮಹಾಪೂಜೆ, ಸಾಯಂಕಾಲ ಭಜನೆ, ರಾತ್ರಿ 8 ಗಂಟೆಯಿಂದ ಶ್ರೀ ಭೂತಬಲಿ ಉತ್ಸವ, ಮಂತ್ರಾಕ್ಷತೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲೂ ಭಗವದ್ಭಕ್ತರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಬೊಳ್ಳೂರು ಶ್ರೀ ಸದಾಶಿವ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಬಂಧಪಟ್ಟವರು ತಿಳಿಸಿರುತ್ತಾರೆ. ಆಡಳಿತ ಮೊಕ್ತೇಸರ ಎಂ.ಗೋಪಾಲಕೃಷ್ಣ ನಡ್ವಂತಿಲ್ಲಾಯ, ಪ್ರ.ಕಾರ್ಯದಶರ್ಿ ಎಂ.ಶ್ರೀನಿವಾಸ ನಡ್ವಂತಿಲ್ಲಾಯ, ಕೋಶಾಧಿಕಾರಿ ಉಮೇಶ್ ರೈ ಮೇಗಿನಕಡಾರು, ರಕ್ಷಾಧಿಕಾರಿ ಬಾಲಕೃಷ್ಣ ಶೆಟ್ಟಿ ಕಡಾರು, ಸ್ವಾಗತ ಸಮಿತಿಯ ಸಂಚಾಲಕ ಡಿ.ಕೆ. ನಾರಾಯಣನ್ ನಾಯರ್, ಆಹಾರ ಸಮಿತಿಯ ಅಧ್ಯಕ್ಷ ಚಂದ್ರಹಾಸ ನಂಬ್ಯಾರ್, ಸದಾಶಿವ ರೈ ಮುನಿಯೂರು ಉಪಸ್ಥಿತರಿದ್ದರು. ಪ್ರಚಾರ ಸಮಿತಿಯ ಸಂಚಾಲಕ ರಾಜೇಶ್ ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ವೇದಿಕೆ ನಿರ್ವಹಣಾ ಸಮಿತಿಯ ಅಧ್ಯಕ್ಷ ಗಿರೀಶ್ ಮಾಸ್ತರ್ ಮುನಿಯೂರು ವಂದಿಸಿದರು.
 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries