ಪೆರ್ಲ: ಯೆಣ್ಮಕಜೆ ತರವಾಡು ಮನೆಯಲ್ಲಿ ಇತ್ತೀಚೆಗೆ ಪಿಲಿಚಾಮುಂಡಿ, ರಕ್ತೇಶ್ವರೀ, ಪರಿವಾರ ದೈವಗಳ ವಷರ್ಾವಧಿ ನೇಮೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಗುರುವಾರ ಆರಂಭಗೊಂಡಿತು. ಕಾರ್ಯಕ್ರಮದ ಅಂಗವಾಗಿ ನಡೆದ ಯಕ್ಷ-ಗಾನ ವೈಭವ ಕಾರ್ಯಕ್ರಮದಲ್ಲಿ ಹೆಸರಾಂತ ಭಾಗವತರುಗಳಾದ ಗಿರೀಶ್ ರೈ ಕಕ್ಕೆಪದವು, ಸತೀಶ ಪುಣಿಂಚತ್ತಾಯ ಪೆರ್ಲ, ಮನೋಹರ ಬಲ್ಲಾಳ್, ಅಡ್ವಳ ಹಾಗೂ ಕಾವ್ಯಶ್ರೀ ಅಜೇರು ಗಾನ ಮಾಧುರ್ಯದಿಂದ ಗಮನ ಸೆಳೆದರು. ಹಿಮ್ಮೇಳದಲ್ಲಿ ಚೆಂಡೆ-ಮದ್ದಳೆ ಶ್ರೀಧರ ಪಡ್ರೆ ಹಾಗೂ ಶ್ರೀಧರ ವಿಟ್ಲ, ಚಕ್ರತಾಳದಲ್ಲಿ ರಾಜೇಂದ್ರ ಸಹಕರಿಸಿದರು. ವೇಣುಗೋಪಾಲ ಭಟ್ ಶೇಣಿ ಕಾರ್ಯಕ್ರಮ ನಿರೂಪಿಸಿದರು. ನೂರಾರು ಯಕ್ಷಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶುಕ್ರವಾರ ಖ್ಯಾತ ಸಂಗೀತ ನಿದರ್ೇಶಕ ಹಾಗೂ ಗಾಯಕ ಎಮ್.ಜಯಚಂದ್ರನ್ ಅವರ ಸಂಗೀತ ಕಚೇರಿ ಪ್ರೇಕ್ಷಕರನ್ನು ಸಂಗೀತಲೋಕದಲ್ಲಿ ತೇಲಾಡುವಂತೆ ಮಾಡಿತು. ವಯಲಿನ್ನಲ್ಲಿ ಅಟ್ಟುಕಾಲ್ ಬಾಲಸುಬ್ರಹ್ಮಣ್ಯನ್, ಮೃದಂಗನಲ್ಲಿ ಕೆ.ಯಮ್.ಎಸ್.ಮಣಿ, ಘಟಂ ಎ.ಶ್ರೀಜಿತ್ ಹಾಗೂ ಮೋಸರ್ಿಂಗ್ನಲ್ಲಿ ಪಯ್ಯನ್ನೂರು ಗೋವಿಂದ ಪ್ರಸಾದ್ ಸಾಥ್ ನೀಡಿದರು.
ಮಾ.3 ರಂದು ರಾತ್ರಿ 7ರಿಂದ ಶ್ರೀ ಗಣೇಶ ಭಜನಾ ಮಂಡಳಿ, ಬೆದ್ರಂಪಳ್ಳ ಇವರಿಂದ ಭಜನೆ ಆ ನಂತರ ಹರಿಸೇವೆ ನಡೆಯಲಿರುವುದು. ಮಾ.4ರಂದು ಪಿಲಿಚಾಮುಂಡಿ ದೈವದ ನೇಮ, ಪ್ರಸಾದ ವಿತರಣೆ ಹಾಗೂ ಸತ್ಯದೇವತೆ, ಕೊರತಿ, ಗುಳಿಗ ನೇಮ ನಡೆಯಲಿದೆ. ಮಾ.5ರಂದು ರಕ್ತೇಶ್ವರಿ ದೈವದ ನೇಮದೊಂದಿಗೆ ಸಂಪನ್ನಗೊಳ್ಳಲಿರುವುದು.





