HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                   ಎಣ್ಮಕಜೆ ಗ್ರಾ.ಪಂ. ಮುಂಗಡಪತ್ರ ಮಂಡನೆ
     ಪೆರ್ಲ : ಎಣ್ಮಕಜೆ ಗ್ರಾಮ ಪಂಚಾಯತಿನ 2018-19ರ ಚೊಚ್ಚಲ ಮುಂಗಡ ಪತ್ರವನ್ನು ಗ್ರಾಮ ಪಂಚಾಯತು ಅಧ್ಯಕ್ಷೆ ರೂಪವಾಣಿ ಆರ್ ಭಟ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತು ಉಪಾಧ್ಯಕ್ಷ ಪುಟ್ಟುಪ್ಪ .ಕೆ ಖಂಡಿಗೆ  ಮಂಡಿಸಿದರು.
  ಪ್ರಸ್ತುತ ಸಾಲಿನ ಮುಂಗಡ ಪತ್ರದಲ್ಲಿ ಕುಡಿನೀರು ,ವಸತಿ ಸೌಕರ್ಯ ರಸ್ತೆಗಳ ಪುನಾರಾಭಿವೃದ್ಧಿ ಹಾಗೂ ನೀರು ಇಂಗಿಸುವಿಕೆ ಜಲ ಮರುಪೂರಣಾ ಯೋಜನೆ , ಎಸ್ಸಿಎಸ್ಟಿ ಮಕ್ಕಳ ಶಿಕ್ಷಣ ಮತ್ತು ವೃದ್ಧರ ಶ್ರೇಯೋಭಿವೃದ್ಧಿಗೆ ಬೇಕಾಗಿ ಯೋಜನಾ ಮೊತ್ತವನ್ನು ಮೀಸಲಿರಿಸಲಾಗಿದೆ.ಜೊತೆಗೆ ಸಾವಯವ ಕೃಷಿಗೆ ಮತ್ತು ಸ್ವಾವಲಂಬನೆ ಜೀವನ ಕುರಿತಾಗಿ ಮುಂಗಡ ಪತ್ರದಲ್ಲಿ ಆದ್ಯತೆ ನೀಡಲಾಗಿದೆ.ಗ್ರಾಮ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ  ಜಯಶ್ರೀ ಕುಲಾಲ್, ಆಯಿಷಾ ಎ.ಎ , ಉದಯ ಚೆಟ್ಟಯಾರ್ , ಗ್ರಾಮ ಪಂಚಾಯತು ಸದಸ್ಯ ಅಬೂಬಕ್ಕರ್ ಸಿದ್ದೀಖ್ ,ಸಿದ್ದೀಕ್ ಒಳಮೊಗರು ,ಶಾರದಾ ಎಂ ಶೇಣಿ, ಪುಷ್ಪಾ ಎಂ , ಕು.ಚಂದ್ರಾವತಿ, ಅನೀಫ ನಡುಬೈಲು, ಮಮತ ಯು ರೈ, ಮಲ್ಲಿಕಾ ಜೆ ರೈ, ಶಶಿಕಲಾ ವೈ , ಸತೀಶ್ ಕುಲಾಲ್ ನಲ್ಕ ಮತ್ತು ಪಂಚಾಯತು ಎಚ್ ಸಿ ಸಂತೋಷ್ ಕುಮಾರ್, ಪಂಚಾಯತು ಸಿಬ್ಬಂದಿಗಳು ಹಾಗೂ ನಿರ್ವಹಣಾ ಉದ್ಯೋಗಸ್ಥರು ಸಭೆಯಲ್ಲಿ ಹಾಜರಿದ್ದರು. ಗ್ರಾಮ ಪಂಚಾಯತು ಕಾರ್ಯದಶರ್ಿ ರೆಜಿ ಮೋನ್ ಸ್ವಾಗತಿಸಿ, ಪಂಚಾಯತು ಸದಸ್ಯ ಅಬೂಬಕ್ಕರ್ ಸಿದ್ದೀಕ್ ಖಂಡಿಗೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries