HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                    ಮಹಿಳೆಯರಿಗೆ ಸ್ವ ರಕ್ಷಣಾ ತರಬೇತಿ
   ಕುಂಬಳೆ: ಇಂದಿನ ಸಂಕೀರ್ಣ ವಾತಾವರಣದಲ್ಲಿ ಮಹಿಳೆಯರು ಪ್ರಭಲರಾಗುವ ಅಗತ್ಯವಿದೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಗಮನಾರ್ಹ ಸಾಧನೆಗ್ಯದಿದ್ದರೂ ಸ್ವ ಸಂರಕ್ಷಣೆಯ ವಿಚಾರದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಹೆಚ್ಚಿನ ಮಾರ್ಗದರ್ಶನ ಅಗತ್ಯವಿದೆ ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಕುಂಬಳೆ ಜನಮೈತ್ರಿ ಪೊಲೀಸ್ ಹಾಗೂ ಅಕಾಡೆಮಿ ಕಾಲೇಜಿನ ಸಂಯುಕ್ತ  ಆಶ್ರಯದಲ್ಲಿ  ಮಹಿಳೆಯರಿಗೆ ಇತ್ತೀಚೆಗೆ ಆಯೋಜಿಸಲಾಗಿದ್ದ ಸ್ವ ರಕ್ಷಣಾ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
  ಮಹಿಳಾ ಸಂರಕ್ಷಣಾ ಕಾನೂನುಗಳ ಜೊತೆಗೆ ತಕ್ಷಣ ಕೈಗೊಳ್ಳಬಹುದಾದ ಕ್ರಮಗಳ ಬಗೆಗೂ ಅರಿವು ಗಳಿಸುವ ತರಬೇತಿ ಪ್ರಸ್ತುತ ಎಂದು ತಿಳಿಸಿದರು. 
    ಕುಂಬಳೆ ಪೊಲೀಸ್ ಠಾಣೆಯ ಎಸ್.ಐ. ಜಯಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮುನೀರ್ ಮಾಸ್ತರ್, ಶ್ರೀಜಾ ಟೀಚರ್, ಕೊಪ್ಪಲ್ ಚಂದ್ರಶೇಖರನ್, ಎಎಸ್ಐ ವಿಜಯನ್ ಮೇಲೋತ್ತ್  ಮೊದಲಾದವರು ಮಾತನಾಡಿದರು. ಅಕಾಡೆಮಿ ಪ್ರಾಂಶುಪಾಲ ಖಲೀಲ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries