HEALTH TIPS

No title

               ಕಾಸರಗೋಡಿನ ಸಾಹಿತ್ಯ ಸಮ್ಮೇಳನ ಆಶಯ ಬಿಂಬಿಸುವಿಕೆಯಿಂದ ವಿಭಿನ್ನ-ಡಾ.ಶರತ್ ಕುಮಾರ್   
      ಮುಳ್ಳೇರಿಯ: ಸಮಕಾಲೀನ ನೋವನ್ನು ಹೇಳುವ, ವರ್ತಮಾನದ ವಿಚಾರಗಳಿಗೆ ಕಣ್ಣಾಗಿ ಕಾವ್ಯ, ಸಾಹಿತ್ಯಗಳು ಸಮಾಜವನ್ನು ತಿದ್ದುವ ಕೆಲಸ ನಿರ್ವಹಿಸುತ್ತದೆ. ಗಡಿನಾಡಿನ ಬದುಕು, ಜನಜೀವನದ ಮನದಾಳದ ಬೇಗುದಿಗಳ ಸೂಚಕವಾಗಿ ಸಮ್ಮೇಳನ ಮೂಡಿಬಂದಿದೆ ಎಂದು ಬೆಳ್ತಂಗಡಿ ಸಹಕಾರೀ ಪ್ರಥಮ ದಜರ್ೆ ಕಾಲೇಜಿನ ಸಹ ಪ್ರಾಧ್ಯಾಪಕ, ಕವಿ ಡಾ.ಶರತ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
   ಮುಳ್ಳೇರಿಯದ ವಿದ್ಯಾಶ್ರೀ ಶಿಕ್ಷಣ ಕೇಂದ್ರದ ಆವರಣದಲ್ಲಿ ಶನಿವಾರದಿಂದ ಆರಂಭಗೊಂಡಿರುವ ಕಾಸರಗೋಡು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಭಾನುವಾರ ಸಮ್ಮೇಳನ ವೇದಿಕೆಯಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
   ವರ್ತಮಾನದ ಆಗುಹೋಗುಗಳು, ಬದಲಾವಣೆ ಮತ್ತು ಅದು  ಜನಜೀವನವನ್ನು ವಿವಿಧ ಸಂದರ್ಭಗಳಲ್ಲಿ ಬೀರುವ ಪ್ರಭಾವ, ಪರಿಣಾಮಗಳು ಕವಿಯ ಮೂಲಕ ಪ್ರತಿಬಿಂಬಿತಗೊಳ್ಳುವುದು ಸುಸ್ಥಿತರತೆಗೆ ತೆರೆದುಕೊಳ್ಳುತ್ತದೆ. ಅಂತಹ ತಪಸ್ಸು ಕವಿಯ ಮೇಲಿದೆ ಎಂದು ತಿಳಿಸಿದ ಅವರು, ಕನರ್ಾಟಕದ ಬೇರೆಡೆಗಳ ಸಮ್ಮೇಳನಕ್ಕಿಂತ ಗಡಿನಾಡಿನ ಸಾಹಿತ್ಯ ಸಮ್ಮೇಳನವು ಆಶಯ ಬಿಂಬಿಸುವಿಕೆಯಲ್ಲಿ ವಿಶೇಷವಾಗಿದೆ ಎಂದು ತಿಳಿಸಿದರು.
   ಕವಿಗಳಾದ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ವಿಜಯಲಕ್ಷ್ಮೀ ಶಾನುಭೋಗ್, ಡಾ.ರಾಧಾಕೃಷ್ಣ ಬೆಳ್ಳೂರು, ಶಂಕರನಾರಾಯಣ ಭಟ್ ಕಕ್ಕೆಪ್ಪಾಡಿ, ಕವಿತಾ ಕೂಡ್ಲು, ವಿರಾಜ್ ಅಡೂರು, ಪ್ರಭಾವತಿ ಕೆದಿಲಾಯ ಪುಂಡೂರು, ಪರಿಣಿತ ರವಿ ಎಡನಾಡು, ಪುರುಷೋತ್ತಮ ಭಟ್ ಕೆ, ವಿಜಯರಾಜ್ ಪುಣಿಚಿತ್ತಾಯ, ಶ್ಯಾಮಲಾ ರವಿರಾಜ್ ಕುಂಬಳೆ, ಶ್ರದ್ದಾ ನಾಯರ್ಪಳ್ಳ ಸ್ವರಚಿತ ಕವನಗಳನ್ನು ವಾಚಿಸಿದರು.
 ಕನ್ನಡ ಸಾಹಿತ್ಯ ಸಮ್ಮೇಳನದ ಸವರ್ಾಧ್ಯಕ್ಷ ಡಾ.ನಾ.ಮೊಗಸಾಲೆ ಉಪಸ್ಥಿತರಿದ್ದ ಗೋಷ್ಠಿಯಲ್ಲಿ ಸಮ್ಮೇಳನದ ಚಿತ್ರಕಲೆ ಮತ್ತು ಪುಸ್ತಕ ಪ್ರದರ್ಶನ ಸಮಿತಿ ಸದಸ್ಯ ಬಾಲ ಮಧುರಕಾನನ ಸ್ವಾಗತಿಸಿ, ಸ್ವಾಗತ ಸಮಿತಿ ಸದಸ್ಯ ಪಿ.ರಾಮಚಂದ್ರ ಪುಣಿಚಿತ್ತಾಯ ಕವನ ರೂಪದ ಸಾಲುಗಳ ಮೂಲಕ ವಂದಿಸಿದರು. ಚಿತ್ರಕಲೆ, ಪುಸ್ತಕ ಪ್ರದರ್ಶನ ಸಮಿತಿ ಸದಸ್ಯ ವೆಂಕಟ ಭಟ್ ಎಡನೀರು ಕಾರ್ಯಕ್ರಮ ನಿರೂಪಿಸಿದರು.
   ಬಳಿಕ ಜಿಲ್ಲೆಯ ನಾದ ಮಾಧುರ್ಯದ ವಿದ್ವನ್ಮಣಿಗಳಾದ ಕಲ್ಮಾಡಿ ಸದಾಶಿವ ಆಚಾರ್ಯ, ರಾಧಾ ಮುರಳೀಧರ್, ಉಷಾ ಈಶ್ವರ ಭಟ್, ಯೋಗೀಶ ಶಮರ್ಾ ಬಳ್ಳಪದವು ರಿಂದ ಸಂಗೀತ ಸಂಭ್ರಮ ಪ್ರಸ್ತುತಗೊಂಡಿತು. ಪಕ್ಕವಾದ್ಯದಲ್ಲಿ ಡಾ.ಶಂಕರರಾಜ್ ಕಾಸರಗೋಡು(ಮೃದಂಗ), ಪ್ರಭಾಕರ ಕುಂಜಾರು(ವಯಲಿನ್), ಕೆ.ಶ್ರೀಧರ ರೈ(ತಬಲ), ಈಶ್ವರ ಭಟ್ ವಿದ್ಯಾನಗರ(ಘಟಂ) ನಲ್ಲಿ ಸಹಕರಿಸಿದರು. ಕಾರ್ಯಕ್ರಮ ಸಂಯೋಜನಾ ಸಮಿತಿ ಸದಸ್ಯ ಬಾಲಸುಬ್ರಹಮಣ್ಯ ಕೋಳಿಕ್ಕಜೆ ಕಾರ್ಯಕ್ರಮ ನಿರ್ವಹಿಸಿದರು.
 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries