HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ಮಾರ್ಪನಡ್ಕದಲ್ಲಿ ಯಕ್ಷಗಾನ ತರಗತಿ ಆರಂಭ
    ಬದಿಯಡ್ಕ : ಮಾರ್ಪನಡ್ಕ ಜಯನಗರ ಯಕ್ಷಮಿತ್ರರ ನೇತೃತ್ವದಲ್ಲಿ ಯಕ್ಷಗಾನ ನಾಟ್ಯ ತರಬೇತಿ ಶಿಬಿರವು ಗುರುವಾರ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ಆರಂಭವಾಯಿತು. ಯಕ್ಷಗಾನ ನಾಟ್ಯ ಗುರುಗಳಾದ ಸಬ್ಬನಕೋಡಿ ರಾಮ ಭಟ್ ದೀಪಪ್ರಜ್ವಲನೆಗೈದು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕಲೆಗಳನ್ನು ಉಳಿಸುವಲ್ಲಿ ಊರಿನ ಜನರ, ಕಲಾಭಿಮಾನಿಗಳ ನಿರಂತರ ಪ್ರೋತ್ಸಾಹ ಅತೀ ಅಗತ್ಯವಾಗಿದೆ. ಯಕ್ಷಗಾನವು ಜನರನ್ನು ತನ್ನತ್ತ ಆಕಷರ್ಿಸುತ್ತಿದ್ದು, ಪುರಾತನ ಕಥೆಗಳನ್ನು ಜನರತ್ತ ತಲುಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ ಎಂದರು.
ಯಾದವ ಸೇವಾ ಸಂಘದ ಅಧ್ಯಕ್ಷ ಬಾಬು ಮಾಸ್ತರ್ ಅಗಲ್ಪಾಡಿ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ವಾಸುದೇವ ಭಟ್ ಚೋಕೆಮೂಲೆ, ಜ್ಯೋತ್ಸ್ನಾ ಕಡಂದೇಲು, ಅಶೋಕ ಮಾಸ್ತರ್, ಉದಯಕುಮಾರ್ ಕಲ್ಲಕಟ್ಟ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಯಕ್ಷಮಿತ್ರರು ಸಂಘಟನೆಯ ಪದಾಧಿಕಾರಿಗಳಾದ ಕೀರ್ತನ ಗೋವಿಂದ, ವಿನಯ ಭಾರದ್ವಾಜ್ ಉಪ್ಪಂಗಳ, ಶ್ರೀಕೃಷ್ಣ ಗುರುಸ್ವಾಮಿ, ಗಿರೀಶ್ ಅಗಲ್ಪಾಡಿ, ಗುರುಪ್ರಸಾದ್, ರತ್ನಾಕರ ಕಲ್ಲಕಟ್ಟ, ಸಂತೋಷ್ ಪುರುಷ ಉಪಸ್ಥಿತರಿದ್ದರು. ರಮೇಶ ಕೃಷ್ಣ ಪದ್ಮಾರು ಸ್ವಾಗತಿಸಿ, ಅಚ್ಚುತ ಮಾಸ್ತರ್ ಅಗಲ್ಪಾಡಿ ವಂದಿಸಿದರು.
ಯಕ್ಷಗಾನ ನಾಟ್ಯ ತರಬೇತಿಗೆ ಸೇರಲಿಚ್ಚಿಸುವವರು ಸಂಚಾಲಕ ವಿನಯ ಭಾರಧ್ವಾಜ್ (7559010890) ಅವರನ್ನು ಸಂಪಕರ್ಿಸಲು ಕೋರಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries