HEALTH TIPS

No title

       ಭಾಷೆಗಳ ಮಧ್ಯೆ ಸಂಬಂಧಗಳು ಬೆಳೆದುಬರಬೇಕು-ಡಾ.ಎಸ್.ಆರ್.ವಿಜಯಶಂಕರ್
          ಎರಡು ದಿನಗಳ ಗಡಿನಾಡ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ                           
   ಮುಳ್ಳೇರಿಯ: ಗಡಿನಾಡಲ್ಲಿ ಭಾಷೆ, ಸಂಸ್ಕೃತಿಗೆ ಸಂಬಂಧಿಸಿದ ವಿಚಾರಗಳ ಉಳಿಸುವ ಯತ್ನಗಳು ಇಂದು ಪ್ರಮುಖವಾದುದು. ಸಂಸ್ಕೃತಿಯೊಂದಿಗೆ ಭಾಷೆ ಮಿಳಿತವಾಗಿದ್ದು ಅದು ಸಂಸ್ಕಾರದ ಲಕ್ಷಣ.  ಮನಸ್ಸು ಸೂಕ್ಷ್ಮವಾಗಲು ಭಾಷೆಯೂ ಸೂಕ್ಷ್ಮವಾಗಬೇಕು. ಜ್ಞಾನಕ್ಕೆ ಮನಸ್ಸು ಮತ್ತು ಕಣ್ಣುಗಳು ಬೇಕು. ಭಾಷೆ ಕಣ್ಣಿಗೆ ಕಾಣುವುದರಲ್ಲಿ ಮತ್ತು ಮನಸ್ಸಿಗೆ ತೋರುವುದರಲ್ಲಿದೆ ಎಂದು ಕನ್ನಡದ ಪ್ರಸಿದ್ದ ವಿಮರ್ಶಕ, ಅಂಕಣಕಾರ ಡಾ.ಎಸ್.ಆರ್.ವಿಜಯಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು.
    ಮುಳ್ಳೇರಿಯ ವಿದ್ಯಾಶ್ರೀ ಶಿಕ್ಷಣ ಕೇಂದ್ರ ಪರಿಸರದಲ್ಲಿ ನಡೆದ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಸಂಜೆ ನಡೆದ ಸಮಾರೋಪ ಸಮರಂಭದ ಸಮಾರೋಪ ಭಾಷಣಗೈದು ಅವರು ಮಾತನಾಡಿದರು.
   ಸಾಹಿತ್ಯವು ರೂಪಕಾತ್ಮಕವಾದುದಾಗಿದ್ದು ಇಂದು ಕನ್ನಡ ಭಾಷೆ ಸಾಹಿತ್ಯ ಸವಾಲುಗಳ ಸುಳಿಯಲ್ಲಿರುವುದು ಸುಳ್ಳಲ್ಲ ಎಂದು ತಿಳಿಸಿದರು.  ಮಾಹಿತಿ ಎಂದೂ ಜ್ಞಾನವಾಗದು. ಆಧುನಿಕ ತಂತ್ರಜ್ಞಾನದ ತಿಳುವಳಿಕೆ ಇದೆ ಎಂದ ಮಾತ್ರಕ್ಕೆ ಅದನ್ನೇ ಜ್ಞಾನ ಎಂದು ಪರಿಗಣಿಸುವಂತಿಲ್ಲ.  ಅನುಭವವೇ ಸತ್ಯವಾದುದು. ಭಾಷೆ ಈ ಅನುಭವ ನೀಡುತ್ತದೆ ಎಂದು ತಿಳಿಸಿದರು.
   ಯಾವ ಕಾಲಘಟ್ಟ, ಯಾವ ಭೂ ಪ್ರದೇಶವಾದರೂ ಭಾಷೆ ಭಾಷೆ ಅಗತ್ಯವಾಗಿದ್ದು, ಸಂಸ್ಕೃತಿ ಮತ್ತು ಭಾಷೆ ಪರಸ್ಪರ ಸಂಬಂಧಹೊಂದಿದೆ. ಭಾಷೆ, ಭಾಷೆಗಳ ಮಧ್ಯೆ ಸಂಬಂಧಗಳು ಮೂಡಿಬರಬೇಕು ಎಂದು ತಿಳಿಸಿದರು. 
      ಗಡಿನಾಡಿನ  ಎಲ್ಲಾ ಮಕ್ಕಳು ಭಾಷಾ ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಗಡಿನಾಡಿನ ಭಾಷಾ ಸಮಸ್ಯೆಗೆ ಸಾಂಸ್ಕೃತಿಕ ವಿನಿಮಯ, ಕೊಡುಕೊಳೆಯ ಸಂಬಂಧಗಳ ಮೂಲಕ ಕನರ್ಾಟಕ ಸರಕಾರ ಸಹಿತ ವಿವಿಗಳು ಕಾರ್ಯಯೋಜನೆ ಹಮ್ಮಿಕೊಳ್ಳಬೇಕು. ಸಾಂಸ್ಕೃತಿಕ ನೀತಿಯನ್ನು ಬಲಿಷ್ಠಗೊಳಿಸಬೇಕು. ಭಾಷೆ, ಸಂಸ್ಕೃತಿಗೆ ನಮ್ಮ ಜ್ಞಾನಕ್ಕೆ ಮತ್ತೆ ಹಿಂತಿರುಗಬೇಕು.ಇಂದುಜಗತ್ತಿನ ಎಲ್ಲಾ ವಿಷಯಗಳನ್ನು,ಗಣಕ ತಂತ್ರಜ್ಞಾನವನ್ನು ಕನ್ನಡದಲ್ಲೇ ಅಥರ್ೈಸುವಷ್ಟು ಕನ್ನಡ ಬೆಳೆದಿಲ್ಲ.ನಾಡಿನ ಕನ್ನಡ ಚಟುವಟಿಕೆಗಳು, ಸಮಗ್ರ ಕನರ್ಾಟಕದ ಮಟ್ಟಕ್ಕೆ ಅರಿವಾಗಬೇಕಿದ್ದು, ಇಂತಹ ಸಾಂಸ್ಕೃತಿಕ, ಭಾಷೆಗೆ ಸಂಬಂಧಿಸಿ ಕಾರ್ಯಕ್ರಮ ಆಗಬೇಕಾದ ಯತ್ನಗಳು ಆಗಬೇಕು. ಸಂಸ್ಕೃತಿ ಇಲಾಖೆ ಈ ನಿಟ್ಟಿನ ಕಾರ್ಯಯೋಜನೆ ಮಾಡಬೇಕು ಎಂದು ಅವರು ತಿಳಿಸಿದರು.
   ಸಮಾರೋಪದಲ್ಲಿ ಸಮ್ಮೇಳನದ ಸವರ್ಾಧ್ಯಕ್ಷ ಡಾ.ನಾ.ಮೊಗಸಾಲೆ ಅಧ್ಯಕ್ಷತೆ ವಹಿಸಿದ್ದರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಪಿ.ಎಸ್.ಪುಣಿಚಿತ್ತಾಯ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ಸುರೇಂದ್ರ ಅಡಿಗ ನೀಲಾವರ,ಕುಂದಾಪುರ ಕನ್ನಡ ವೇದಿಕೆಯ ಅಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದು ಶುಭಾಶಂಸನೆಗೈದರು.
   ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಸಮ್ಮೇಳನದ ಸಂಘಟನಾ ಸಮಿತಿ ಕಾಯರ್ಾಧ್ಯಕ್ಷ ರಂಗನಾಥ ಶೆಣೈ ಉಪಸ್ಥಿತರಿದ್ದರು.
 ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರೂ, ಕನ್ನಡ ಕಟ್ಟಾಳುಗಳಾದ  ನಾರಾಯಣ ಗಟ್ಟಿ.ಕೆ, ಕೀರಿಕ್ಕಾಡು ವನಮಾಲ ಕೇಶವ ಭಟ್, ಮಹಾಬಲ ಶೆಟ್ಟಿ, ಡಾ.ಗಣಪತಿ ಭಟ್ ಕುಳಮರ್ವ, ಮಹಮ್ಮದ್ ಅಲಿ ಪೆರ್ಲ, ಜಲಜಾಕ್ಷಿ ಟೀಚರ್ರನ್ನು ವಿಶೇಷವಾಗಿ ಗೌರವಿಸಲಾಯಿತು. ಈ ಸಂದರ್ಭ ಕಸಾಪ ಮಾಜಿ ಅಧ್ಯಕ್ಷ ನ್ಯಾಯವಾದಿ ಐ.ವಿ.ಭಟ್ ಠರಾವು ಮಂಡಿಸಿದರು. ಗೋವಿಂದ ಭಟ್ ಬಳ್ಳಮೂಲೆ ಸ್ವಾಗತಿಸಿ, ಪ್ರಕಾಶ್ ಕುಂಟಾರು ವಂದಿಸಿದರು. ಯತೀಶ್ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.
   ಬಳಿಕ  ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಇವರ ಶಿಷ್ಯವೃಂದದವರಿಂದ ನೃತ್ಯ ಸಿಂಚನ,  ಮಕ್ಕಳಿಂದ ಯಕ್ಷಗಾನ ಬಯಲಾಟ ಮಹಿಷಾಸುರ ವಧೆ ನಡೆಯಿತು. ಸಮಾರೋಪಕ್ಕೂ ಮೊದಲು ಪ್ರಸಿದ್ದ ಯಕ್ಷಗಾನ ಕಲಾವಿದರಿಂದ ಯಕ್ಷ ಹಾಸ್ಯ ಲಹರಿ ಜನಮನಸೂರೆಗೊಂಡಿತು.
 
   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries