HEALTH TIPS

ಯಾವುದೇ ಶೀರ್ಷಿಕೆಯಿಲ್ಲ

         ಕುಂಬಳೆ ಕೋಟೆ ಕ್ಷೇತ್ರ- ವಾಷರ್ಿಕ ಜಾತ್ರಾ ಮಹೋತ್ಸವ ಸಂಪನ್ನ
      ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಹನುಮಾನ್ ನಗರದ ಇತಿಹಾಸ ಪ್ರಸಿದ್ದ ಕುಂಬಳೆ ಕೋಟೆಯೊಳಗಿನ ಆವರಣದಲ್ಲಿರುವ ಶ್ರೀ ಮಲ್ಲಿಕಾಜರ್ುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನ ವಾಷರ್ಿಕ ಜಾತ್ರಾ ಮಹೋತ್ಸವ ಸೋಮವಾರ ಹಾಗೂ ಮಂಗಳವಾರ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
      ಎ.22 ರಂದು ಪ್ರಾತ:ಕಾಲ 7 ಕ್ಕೆ ಗಣಹೋಮ, 9 ಕ್ಕೆ ನವಕಾಭಿಷೇಕ, 9.30 ಕ್ಕೆ ಶ್ರೀ ದುಗರ್ಾದೇವಿಯ ದೀಪ ಪ್ರತಿಷ್ಠೆ, 10 ಕ್ಕೆ ಕಾಸರಗೋಡಿನ ಸಂಕೀರ್ತನಾ ತಂಡದವರಿಂದ ಭಜನಾ ಸಂಕೀರ್ತನೆ ನಡೆಯಿತು. ಮಧ್ಯಾಹ್ನ 12.30 ರಿಂದ ಮಹಾಪೂಜೆ, ಅನ್ನಸಂತರ್ಪಣೆಗಳು ಜರಗಿದವು. ಬಳಿಕ 2.30 ರಿಂದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಆಟೋಟ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು. ಸಂಜೆ 6.30 ಕ್ಕೆ ತಾಯಂಬಕ ಮತ್ತು ಸ್ಯಾಕ್ಸೊಫೋನ್ ವಾದನ, ರಾತ್ರಿ 7 ಕ್ಕೆ ರಾಮಕೃಷ್ಣ ಕಾಟುಕುಕ್ಕೆ ಮತ್ತು ತಂಡದವರಿಂದ ದಾಸವಾಣಿ ಭಕ್ತಿಗೀತೆ ಕಾರ್ಯಕ್ರಮ, 10 ಕ್ಕೆ ಉತ್ಸವ, ಶ್ರೀ ಭೂತ ಬಲಿ, ಸಿಡಿಮದ್ದು ಪ್ರದರ್ಶನಗಳು ನಡೆಯಿತು. 
     ಎ.23 ರಂದು ಬೆಳಗ್ಗೆ 7.30 ಕ್ಕೆ ಶ್ರೀ ಭೂತಬಲಿ, ದರ್ಶನಬಲಿ, ರಾಜಾಂಗಣ, ಗಂಧ ಪ್ರಸಾದ ವಿತರಣೆ, 10.30 ಶ್ರೀ ಮಲ್ಲಿಕಾಜರ್ುನ ಸನ್ನಿಧಿಯಲ್ಲಿ ವಿಶೇಷ ಪಂಚಗವ್ಯ, ಪುಣ್ಯಾಹ, ವಿಶೇಷ ನೈವೇದ್ಯ, ಮಹಾಪೂಜೆ,  ಶ್ರೀ ರಕ್ತೇಶ್ವರೀ, ಗುಳಿಗನ ಕೋಲ, ಮಧ್ಯಾಹ್ನ 1.30 ಕ್ಕೆ ಅನ್ನಸಂತರ್ಪಣೆಗಳು ನೂರಾರು ಭಗವದ್ಬಕ್ತರ ಪಾಲ್ಗೊಳ್ಳುವಿಕೆಯೊಂದಿಗೆ ನಡೆದು ಉತ್ಸವ ಸಮಾರೋಪಗೊಂಡಿತು.
 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries