HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಾರಡ್ಕ ಬ್ಲಾಕ್ ಪಂಚಾಯತ್ನ ನೂತನ ಕಾಯರ್ಾಲಯದ ಉದ್ಘಾಟನೆ
                     ಆಮಂತ್ರಣ ಪತ್ರಿಕೆ ಮಲಯಾಳದಲ್ಲಿ ಮಾತ್ರ ವಿತರಣೆ
     ಮುಳ್ಳೇರಿಯ: ಮುಳ್ಳೇರಿಯಾ ಸಮೀಪದ ಕರ್ಮಂತೋಡಿಯಲ್ಲಿ ಕಾರಡ್ಕ ಬ್ಲಾಕ್ ಪಂಚಾಯತಿಯ ನೂತನ ಕಾಯರ್ಾಲಯದ ಉದ್ಘಾಟನೆ ಎ.12 ರಂದು ನೆರವೇರಲಿದ್ದು ಮುಖ್ಯಮಂತ್ರಿ, ಸಚಿವರು, ಸಂಸದರು, ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿರುವರು. ಆದರೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಮಲಯಾಳದಲ್ಲಿ ಮಾತ್ರ ವಿತರಿಸಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
  ಕನ್ನಡದಲ್ಲಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಆದರೆ ಅದರಲ್ಲಿ ಹೇರಳ ತಪ್ಪುಗಳಿರುವ ಕಾರಣ ವಿತರಿಸದೆ ತಡೆಹಿಡಿಯಲಾಗಿದೆ ಎಂದು ಕೆಲವು ಮಂದಿ ನೌಕರರು ಅನಧಿಕೃತವಾಗಿ ಹೇಳುತ್ತಿದ್ದರೂ ಈ ಸಮಜಾಯಿಷಿ ಸಮಾಧಾನಕರವಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಕಾರ್ಯಕ್ರಮದ ಕುರಿತಾದ ಬೃಹತ್ ಪ್ರಚಾರ ಫಲಕಗಳನ್ನೂ ಮಲಯಾಳದಲ್ಲಿ ಮಾತ್ರ ಪ್ರದಶರ್ಿಸಲಾಗಿದ್ದು, ಕನ್ನಡದ ಬಗೆಗಿನ ನಿರ್ಲಕ್ಷ್ಯ ಎದ್ದು ಕಾಣಿಸುತ್ತದೆ. ರಾಜ್ಯ ಭಾಷಾ ಅಲ್ಪಸಂಖ್ಯಾಕ ಆಯೋಗದ ಮುಖ್ಯಸ್ಥರಾದ ಮುಖ್ಯಮಂತ್ರಿಯವರೂ, ಜಿಲ್ಲಾ ಭಾಷಾ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರೂ ಪಾಲ್ಗೊಳ್ಳಲಿರುವ ಈ ಸರಕಾರಿ ಸಮಾರಂಭದಲ್ಲಿ ಜಿಲ್ಲೆಯ ಅಧಿಕೃತ ಅಲ್ಪಸಂಖ್ಯಾಕ ಭಾಷೆಯಾದ ಕನ್ನಡವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದಂತೆ ಕಂಡುಬರುತ್ತಿದೆ. ಎಂದಿನಂತೆ ಕನ್ನಡದಲ್ಲಿ ಒಂದು ವಾಕ್ಯವೂ ಇಲ್ಲದೆ ಭಾಷಣಗಳೂ ಕೊನೆಗೊಳ್ಳಬಹುದು. ಕಚೇರಿಯ ನಾಮಫಲಕದಲ್ಲಿ ಮಾತ್ರ ಚಿಕ್ಕ ಅಕ್ಷರಗಳಲ್ಲಿ ಬರೆದಿದ್ದರೂ ಕನ್ನಡವೂ ಕಾಣಿಸುತ್ತಿರುವುದು ಸ್ವಲ್ಪ ಮಟ್ಟಿಗೆ ಸಮಾಧಾನಕರ ವಿಷಯ.
   ಕಾಸರಗೋಡಿನಲ್ಲಿ ಎಲ್ಲ ಸಾರ್ವಜನಿಕ ಮಾಹಿತಿಗಳನ್ನು ಕನ್ನಡದಲ್ಲೇ ನೀಡಬೇಕೆಂದು ಸರಕಾರದ ಆದೇಶವಿದೆ. ಜಿಲ್ಲಾಧಿಕಾರಿಗಳ ಸುತ್ತೋಲೆ ಇದೆ. ಆದರೆ ಸರಕಾರಿ ಕಚೇರಿಯೊಂದರ ಉದ್ಘಾಟನೆಯಿಂದ ತೊಡಗಿ ಮುಂದಿನ ವಿವಿಧ ಕಾರ್ಯನಿರ್ವಹಣೆಯಲ್ಲೂ ಕನ್ನಡದ ಬಗೆಗಿನ ತಾತ್ಸಾರ ಗೋಚರಿಸುವುದು ಸಾಮಾನ್ಯ. ಕನ್ನಡವನ್ನು ಕಡೆಗಣಿಸಿ ಮಲಯಾಳವನ್ನೇ ಮೆರೆಸುವುದರಿಂದ ಕನ್ನಡಿಗ ಜನಸಾಮಾನ್ಯರಿಗೆ ಮಾಹಿತಿಯನ್ನು ಪಡೆದು ವ್ಯವಹರಿಸಲು ತೊಂದರೆಯಾಗುತ್ತಿರುವುದು ಮಾತ್ರವಲ್ಲ ಅವರು ತಮ್ಮ ಭಾಷೆಯ ಬಗ್ಗೆ ಕೀಳರಿಮೆ ಪಟ್ಟುಕೊಂಡು ತಮ್ಮ ಮಾತೃ ಭಾಷೆಯಲ್ಲಿ ಮಾತನಾಡಲೂ ಹಿಂಜರಿಯುತ್ತಾರೆ. ಕನ್ನಡ ಶಾಲೆಗಳು ಹಾಗೂ ಸ್ಥಳೀಯ ಸಂಸ್ಕೃತಿ ನಾಶವಾಗಲು ಇದು ಕೂಡ ಮುಖ್ಯ ಕಾರಣವಾಗುತ್ತದೆ.
  ಕಾರಡ್ಕ ಭೀತಿಯಲ್ಲಿ:
   ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಲೆಯಾಳಿಕರಣದ ಪ್ರಕ್ರಿಯೆ ಕಳೆದ ಒಂದು ದಶಕದಿಂದ ಹೆಚ್ಚು ವೇಗ ಪಡೆದಿದ್ದು, ಈ ಪೈಕಿ ಕಾರಡ್ಕ ಬ್ಲಾಕ್ ಪಮಚಾಯತು ವ್ಯಾಪ್ತಿಯು ಹೆಚ್ಚು ಮಲೆಯಾಳೀಕರಣಗೊಳ್ಳುವ ಭೀತಿ ಎದುರಿಸುತ್ತಿದೆ. ಮುಳ್ಳೇರಿಯ, ದೇಲಂಪಾಡಿ, ಬೋವಿಕ್ಕಾನ, ಬೆಳ್ಳೂರು ಮೊದಲಾದ ಪ್ರದೇಶಗಳ ಬಹುತೇಕ ಜನರು ಸಾರ್ವಜನಿಕ ಸಮಪರ್ಕ ಭಾಷೆಯಾಗಿ ಹೆಚ್ಚೆಚ್ಚು ಮಲೆಯಾಳವನ್ನೇ ಈಗೀಗ ಬಳಸುತ್ತಿದ್ದಾರೆ. ಇಲ್ಲಿಯ ಸ್ಥಳ ನಾಮಗಳೂ ಮಲೆಯಾಳೀಕರಣಗೊಳ್ಳುತ್ತಿದೆ. ಕಾರಡ್ಕ ಕಾಡಗಂ ಎಂದು, ಮಲ್ಲ ಇದ್ದುದು ಮಲ್ಲಂ ಆಗಿ ಬಹುತೇಕ ಬದಲಾಗಿದೆ. ಇಲ್ಲಿಯ ಆಸುಪಾಸಿನ  ಶಾಲೆಗಳಲ್ಲಿ ಕನ್ನಡ ಮಾಧ್ಯಮ ವಿದ್ಯಾಥರ್ಿಗಳ ಸಂಖ್ಯೆ ಗಣನೀಯ ಕ್ಷೀಣಿಸಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries