HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಮನೆಯೇ ಮೊದಲ ಪಾಠ ಶಾಲೆ- ತಾಯಿಯೇ ಮೊದಲ ಗುರುವಾಗಬೇಕು-ಪುಂಡರೀಕಾಕ್ಷ ಆಚಾರ್ಯ
     ಮುಳ್ಳೇರಿಯ: ಭಾರತೀಯ ಪರಂಪರೆಯ ಪದ್ದತಿಗಳು ಯಾವತ್ತಿಗೂ ಮಾದರಿಯಾಗಿದ್ದು, ಉತ್ತಮ ಸಮಾಜ ನಿಮರ್ಾಣವನ್ನು ಸಾಕಾರಗೊಳಿಸುತ್ತದೆ. ಮನೆಯೇ ಮಕ್ಕಳಿಗೆ ಮೊದಲ ಪಾಠ ಶಾಲೆಯಾಗಬೇಕು. ತಾಯಿಯೇ ಮೊದಲ ಗುರುವಾಗಬೇಕು. ಗುರು ಹಿರಿಯರನ್ನು ನಾವು ಗೌರವಿಸಬೇಕು. ನಾವು ಮನೆಯಲ್ಲಿ ನಿತ್ಯವೂ ಭಜನೆಯನ್ನು ಮಾಡುವ ಸಂಪ್ರದಾಯವನ್ನು ಇಟ್ಟುಕೊಳ್ಳಬೇಕು ಎಂದು ಯೋಗಾಚಾರ್ಯ ಪುಂಡರೀಕಾಕ್ಷ ಬೆಳ್ಳೂರು ಹೇಳಿದರು.
    ಅವರು ಆದೂರು ಎಲಿಕ್ಕಳ ಜಗತ್ತಾಪ್ ಶ್ರೀ ಅಶ್ವಾರೂಢ ದುಗರ್ಾಪರಮೇಶ್ವರಿ ಶಾಕ್ದೇವಿ ದೇವರಮನೆಯಲ್ಲಿ ಇತ್ತೀಚೆಗೆ ನಡೆದ 10ನೇ ವರ್ಷದ ವಾಷರ್ಿಕೋತ್ಸವದ ಅಂಗವಾಗಿ ನಡೆದ ಧಾಮರ್ಿಕ ಸಭೆಯಲ್ಲಿ ಧಾಮರ್ಿಕ ಭಾಷಣಗೈದು ಮಾತನಾಡಿದರು. 
    ಧಾಮರ್ಿಕ ಸಭೆಯಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಆಶೀರ್ವಚನ ನೀಡುತ್ತಾ ನಮ್ಮಲ್ಲಿ ಪರಸ್ಪರ ಭಾವನಾತ್ಮಕ ಸಂಬಂಧ ಕಡಿಮೆಯಾಗುತ್ತಿದೆ. ಹೀಗಾಗಿ ಇಂತಹಾ ಕುಟುಂಬಗಳು ನಡೆಸುವ ಕಾರ್ಯಕ್ರಮಗಳು ಪ್ರಾಧಾನ್ಯತೆಯನ್ನು ಪಡೆಯುತ್ತವೆ. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದರು. ಜಗತ್ತಾಪ್ ಸಮಿತಿ ಅಧ್ಯಕ್ಷ ದಾಮೋದರ ರಾವ್ ಮಾಟೆ ಅಧ್ಯಕ್ಷತೆ ವಹಿಸಿದ್ದರು. ಕೆ.ಭಾಸ್ಕರ ರಾವ್ ಕಾರ್ಕಳ, ಯಕ್ಷಗಾನ ಕಲಾವಿದರಾದ ಕೊಲ್ರೋಜಿ ರಾವ್ ಮುಂಡೋಡು, ನಾಗೇಶ್ ರಾವ್ ಕಾಸರಗೋಡು, ನೀಲೋಜಿ ರಾವ್ ಬೇಕಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗುರುಗಳಾದ ಸದಾನಂದ ರಾವ್,  ಜಗತ್ತಾಪ್ ಸಮಿತಿ ಗೌರವಾಧ್ಯಕ್ಷ ಪುರುಷೋತ್ತಮ ರಾವ್ ಚೆರ್ಲಕೈ, ಹಿರಿಯರಾದ ರಾಮೋಜಿ ರಾವ್, ಯಾದವ ರಾವ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಿದ ನಯನ್ ಕುಮಾರ್ ಎಲಿಕ್ಕಳ, ನಯನ್ ಕುಮಾರ್ ಅತ್ತನಾಡಿ, ಗಿರೀಶ್ ಬಿ.ಎಂ., ಪೃಥ್ವಿರಾಜ್ ಮಂಗಳೂರು, ರವಿರಾಜ್ ಮಂಗಳೂರು, ಸತೀಶ್ ರಾವ್ ಅಂಬಿಕಾನಗರ, ಆಕಾಶ್ ಇಡುವಂಡೆ, ಸಂತೋಷ್ ರಾವ್ ಕುಂಡಂಗುಳಿ, ದಿವ್ಯ ಎಲಿಕ್ಕಳ, ಶಿವಪ್ರಸಾದ್ರನ್ನು ಅಭಿನಂದಿಸಲಾಯಿತು.
    ಸೋಮಶೇಖರ ರಾವ್ ಸ್ವಾಗತಿಸಿ, ಪ್ರ್ರಭಾಕರ ತಲ್ಪಚ್ಚೇರಿ ವಂದಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.  ನಾಗನ ಕಟ್ಟೆಯಲ್ಲಿ ತಂಬಿಲ, ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘದವರ ನೃತ್ಯ ಭಜನೆ, ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಿತು.
   
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries