HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ವಕರ್ಾಡಿ ಬಿಲ್ಲವ ಸಂಘದ ವಾಷರ್ಿಕೋತ್ಸವ- ನಿಧಿಕುಂಭ ಸಮರ್ಪಣೆ
    ಮಂಜೇಶ್ವರ: ವಕರ್ಾಡಿಯ ಬಿಲ್ಲವ ಸಮಾಜ ಸುಧಾರಕ ಸಂಘ ಹಾಗೂ ನಾರಾಯಣಗುರು ಯುವ ವೇದಿಕೆ ಇದರ ಜಂಟಿ ಆಶ್ರಯದಲ್ಲಿ ಸಂಘದ 18 ನೇ ವಾಷರ್ಿಕೋತ್ಸವವು ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
   ವಾಷರ್ಿಕೋತ್ಸವದ ಅಂಗವಾಗಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಗುರುಪೂಜೆಯು ನೆರವೇರಿತು. ಬಳಿಕ ಸಂಘದ ಕಟ್ಟಡ ನವೀಕರಣಕ್ಕಾಗಿ ನಿಧಿ ಕುಂಭ ಸಮರ್ಪಣೆಯನ್ನು ಕಣಿಯೂರು ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕರ್ಾಡಿ ಬಿಲ್ಲವ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಕೋಡಿ ವಹಿಸಿದ್ದರು.
   ಈ ಸಂದರ್ಭ ಶ್ರೀಮಹಾಬಲ ಸ್ವಾಮೀಜಿ  ಆಶೀರ್ವಚನ ನೀಡಿ 'ಯುವಕರು ಹಾಗೂ ಮಹಿಳೆಯರಿಂದ ಸಂಘಟನೆಯು ಇನ್ನಷ್ಟು ಬಲಯುತವಾಗಲು ಸಾಧ್ಯ. ಎಲ್ಲರಿಗೂ ಮಾದರಿಯಾಗುವಂತೆ ಒಗ್ಗಟ್ಟಿನಿಂದ ಮುಂದುವರಿದರೆ ಯಾವುದೇ ಕಾರ್ಯವನ್ನು ಸುಲಲಿತವಾಗಿ ಮಾಡಬಹುದು. ಹಾಗಾಗಿ ಸಂಘಟನೆಯಿಂದ ಬಲಯುತವಾಗಿರಿ' ಎಂದರು.
   ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಸರಗೋಡು ಜಿಲ್ಲಾ ಬಿಲ್ಲವ ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ಪೂಜಾರಿ ದೇರಂಬಳ, ಧಾಮರ್ಿಕ ಹಾಗೂ ಸಾಮಾಜಿಕ ಮುಂದಾಳು ವೀರೇಂದ್ರ ಅಂಬಾರ್, ಸಂಘದ ಗೌರವಾಧ್ಯಕ್ಷ ಬಂಟಪ್ಪ ಪೂಜಾರಿ ಕಳಿಯೂರು, ಬಿಲ್ಲವ ಸಂಘಟಕ ದಿನೇಶ್ ಚೆರುಗೋಳಿ ಉಪಸ್ಥಿತರಿದ್ದರು. ಬಿಲ್ಲವ ಸಂಘದ ಪ್ರಧಾನ ಕಾರ್ಯದಶರ್ಿ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಕೋಶಾಧಿಕಾರಿ ಪ್ರಮೀಳಾ ರಘುನಾಥ ವಕರ್ಾಡಿ ವಂದಿಸಿದರು. ಸುಖೇಶ್ ಮಾಸ್ಟರ್ ಅಡೆಕಳ ಕಾರ್ಯಕ್ರಮ ನಿರೂಪಿಸಿದರು. ಚಂದ್ರಹಾಸ ಪೂಜಾರಿ ಕಡಂಬಾರ್, ರವೀಂದ್ರ ಮಾಸ್ಟರ್ ಕಳಿಯೂರು, ಮೋನಪ್ಪ ಪೂಜಾರಿ ಕಳಿಯೂರು, ಶುಭಕರ ಪಾವಳ ಮೊದಲಾದವರು ಸಹಕರಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries