HEALTH TIPS

No title

                ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ 2018ರ 'ಚಾಂಪಿಯನ್ಸ್'
           ಫೈನಲ್ ನಲ್ಲಿ ಸನ್ ರೈಸಸರ್್ ಹೈದರಾಬಾದ್ ವಿರುದ್ಧ ಧೋನಿ ಪಡೆಗೆ 8 ವಿಕೆಟ್ ಗಳ ಭರ್ಜರಿ
     ಮುಂಬೈ: ತೀವ್ರ ಕುತೂಹಲೆ ಕೆರಳಿಸಿದ್ದ ಐಪಿಎಲ್ 2018ರ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ 8 ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿ, ಐಪಿಎಲ್ ಪ್ರಶಸ್ತಿಗೆ ಭಾಜನವಾಯಿತು.
    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪೈನಲ್ ಹಣಾಹಣಿಯಲ್ಲಿ ಸನ್ ರೈಸಸರ್್ ಹೈದರಾಬಾದ್ ನೀಡಿದ 179 ರನ್ ಗಳ ಸವಾಲಿನ ಗುರಿಯನ್ನು ಮೆಟ್ಟಿನಿಂತ ಧೋನಿ ಪಡೆ ಭರ್ಜರಿ ಗೆಲುವು ದಾಖಲಿಸಿತು. ಚೆನ್ನೈ ಗೆಲುವಿನಲ್ಲಿ ತಂಡದ ಸ್ಫೋಟಕ ಬ್ಯಾಟ್ಸಮನ್ ಶೇನ್ ವಾಟ್ಸನ್ ಮಹತ್ತರ ಪಾತ್ರ ವಹಿಸಿದರು. ತಮ್ಮ ಭರ್ಜರಿ ಶತಕದ ಮೂಲಕ ವಾಟ್ಸನ್ ತಂಡಕ್ಕೆ 8 ವಿಕೆಟ್ ಗಳ ಭರ್ಜರಿ ಗೆಲುವು ತಂದಿತ್ತರು. ಕೇವಲ 57 ಎಸೆತ ಎದುರಿಸಿದ ವಾಟ್ಸನ್ 8 ಸಿಕ್ಸರ್ ಮತ್ತು 11 ಬೌಂಡರಿಗಳ ನೆರವಿನಿಂದ 117 ರನ್ ಕಲೆ ಹಾಕಿ ಅಜೇಯರಾಗಿ ಉಳಿದರು.
   ಅಂತಿಮ ಓವರ್ ನಲ್ಲಿ ಅಂಬಾಟಿ ರಾಯುಡು 16 ರನ್ ಗಳಿಸಿ ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. ಹೈದರಾಬಾದ್ ಪರ ಸಂದೀಪ್ ಶಮರ್ಾ ಮತ್ತು ಕಾಲರ್ೋಸ್ ಬ್ರಾಥ್ ವೇಟ್ ತಲಾ 1 ವಿಕೆಟ್ ಪಡೆದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ ಪೇರಿಸಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries