HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬಜಲಕರಿಯ : ಪ್ರಧಾನ ಗರ್ಭಗುಡಿಯ ನಿಧಿಕುಂಭ ಷಡಾದರ ಪ್ರತಿಷ್ಠೆ 
    ಮಂಜೇಶ್ವರ: ದೇವಸ್ಥಾನಗಳ ವೈವಿಧ್ಯವು ನಾಡಿನ ಅಭಿವೃದ್ಧಿಯ ಪ್ರತಿಬಿಂಬವಾಗಿರುತ್ತದೆ ಎಂಬ ಮುನಿಜನರ ಮಾತು ಅಕ್ಷರಶ: ಸತ್ಯವಾದುದು. ಆಯಾ ಊರಿನ ದೇಗುಲಗಳ ಅಭಿವೃದ್ಧಿಯಿಂದ ಆಯಾ ಊರಿನ ಪ್ರಗತಿ ಸಾಧ್ಯವಾಗುತ್ತದೆ. ವೃತ್ತ ಪರಿಯಾಕಾರದ ಈ ದೇವಾಲಯವು ಅತಿ ವಿರಳವಾಗಿದ್ದು, ಇದರ ವಿಶೇಷತೆ ಹಾಗೂ ಮಹತ್ವ ನಾಡಿನ ಭಕ್ತರ ಸೌಭಾಗ್ಯವೇ ಸರಿ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
   ಬಜಲಕರಿಯ ಶ್ರೀ ಶಾಙ್ರ್ಞಪಾಣಿ ಮಹಾವಿಷ್ಣು  ಶ್ರೀ ದುಗರ್ಾ ಕ್ಷೇತ್ರದಲ್ಲಿ  ಶ್ರೀ ಶಾಙ್ರ್ಞಪಾಣಿ ಮಹಾವಿಷ್ಣು  ದೇವರ ಪ್ರಧಾನ ಗರ್ಭಗುಡಿಯ ನಿಧಿಕುಂಧ ಷಡಾದರ ಪ್ರತಿಷ್ಠೆ  ಹಾಗೂ ಗರ್ಭನ್ಯಾಸ ಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ಜರಗಿದ ಧಾಮರ್ಿಕ ಸಭೆಯಲ್ಲಿ  ಅವರು ಪಾಲ್ಗೊಂಡು ಆಶೀರ್ವಚನ ನೀಡಿದರು.
   ಹಿಂದಿನ ರಾಜಾಶ್ರಯ ಕಾಲದಲ್ಲಿ  ಈ ಕ್ಷೇತ್ರವು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ  ಮೆರೆಯುತ್ತಿತ್ತು. ಅದು ಪುನರಪಿ ನೆಲೆಯಾಗಲಿ. ಈ ನಾಡು ಶ್ರೀ ಶಾಙ್ರ್ಞಪಾಣಿ ಮಹಾವಿಷ್ಣುವಿನ ಕೃಪಾಕಟಾಕ್ಷದಲ್ಲಿ  ವಿಜೃಂಭಿಸಲಿ. ಬಜಲಕರಿಯ ಪ್ರದೇಶವು ಪುಣ್ಯಭೂಮಿಯಾಗಿದ್ದು, ಈ ದೇಗುಲದ ಅಭಿವೃದ್ಧಿಯಿಂದ ಇಡೀ ನಾಡು ಅಭಿವೃದ್ಧಿಯಾಗಲಿದೆ. ದೇವಾಲಯದ ಜೀಣರ್ೋದ್ಧಾರ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಕಾಯರ್ೋನ್ಮುಖರಾಗಿ ಯಶಸ್ವಿಗೊಳಿಸಲು ಸಹಕರಿಸಬೇಕೆಂದು ಸ್ವಾಮೀಜಿ ಕರೆ ನೀಡಿದರು.
    ತಂತ್ರಿವರ್ಯ ಬ್ರಹ್ಮಶ್ರೀ ವಕರ್ಾಡಿ ಹೊಸಮನೆ ರಾಜೇಶ್ ತಾಳಿತ್ತಾಯ, ವಾಸ್ತುಶಿಲ್ಪಿ  ರಮೇಶ್ ಕಾರಂತ ಬೆದ್ರಡ್ಕ ಉಪಸ್ಥಿತರಿದ್ದರು. ವೆಂಕಟೇಶ ತಂತ್ರಿ ಎಡಪದವು, ವೇದಮೂತರ್ಿ ಬಾಲಕೃಷ್ಣ ಭಟ್ ದಡ್ಡಂಗಡಿ, ತಿಮ್ಮಪ್ಪ  ಮೇಲಾಂಟ ಯಾನೆ ಚಂದ್ರಹಾಸ ಆಳ್ವ ನಡಿಬೈಲುಬೀಡು, ಶಂಕರಮೋಹನ ಪೂಂಜ ಅಡೇಕಳಗುತ್ತು, ಶೈಲೇಂದ್ರ ಭರತ್ಕುಮಾರ್ ನಾಯ್ಕ್ ನಚ್ಚಗುತ್ತು, ಅಗ್ರ ತರವಾಡು ಯಜಮಾನ ರಾಮಯ್ಯ ನಾಯ್ಕ್, ಶ್ರೀ ಕ್ಷೇತ್ರದ ಜೀಣರ್ೋದ್ಧಾರ ಸಮಿತಿಯ ಅಧ್ಯಕ್ಷ  ಪುರುಷೋತ್ತಮ ದತ್ತನಗರ, ಸೇವಾ ಸಮಿತಿಯ ಅಧ್ಯಕ್ಷ  ರಾಮಯ್ಯ ನಾಯ್ಕ್ ಮಂಟಮೆ, ಸಂತೋಷ್ಕುಮಾರ್ ನಾಯ್ಕ್ ಪುತ್ತೂರು, ಸಮಿತಿಯ ಕಾಯರ್ಾಧ್ಯಕ್ಷ  ಶಶಿಧರ ಪೊಯ್ಯೆ, ಬಾಲಕೃಷ್ಣ ಶೆಟ್ಟಿ  ಪಾವಳಗುತ್ತು  ಮುಂತಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು, ಶುಭಹಾರೈಸಿದರು. 
   ಪ್ರಕಾಶ್ ನಾಯ್ಕ್ ಆಲಿಕೋಡಿ ಸ್ವಾಗತಿಸಿ, ನ್ಯಾಯವಾದಿ ಉಮೇಶ್ ನಾಯ್ಕ್ ಪಿಲಿಕಳ ವಂದಿಸಿದರು. ವಿಕ್ರಮದತ್ತ  ಸುಂಕದಕಟ್ಟೆ  ಕಾರ್ಯಕ್ರಮ ನಿರೂಪಿಸಿದರು.
   ಶ್ರದ್ಧಾಭಕ್ತಿಯ ವಿಧಿವಿಧಾನಗಳು : ಕಾರ್ಯಕ್ರಮದ ಪ್ರಯುಕ್ತ  ತಂತ್ರಿವರ್ಯ ಬ್ರಹ್ಮಶ್ರೀ ವಕರ್ಾಡಿ ಹೊಸಮನೆ ರಾಜೇಶ್ ತಾಳಿತ್ತಾಯರ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ವಾಸ್ತುಶಿಲ್ಪ ಶಾಸ್ತ್ರಜ್ಞರಾದ ರಮೇಶ ಕಾರಂತ ಬೆದ್ರಡ್ಕ ಇವರ ದಿವ್ಯ ಉಪಸ್ಥಿತಿಯಲ್ಲಿ  ಶ್ರದ್ಧಾಭಕ್ತಿಯಿಂದ ವೈದಿಕ, ತಾಂತ್ರಿಕ ವಿಧಿವಿಧಾನಗಳು ನೆರವೇರಿದವು. ತಂತ್ರಿವರ್ಯರ ಆಗಮನ, ನಿಧಿಕುಂಭ ಷಡಾದರ ಹಾಗೂ ಗರ್ಭನ್ಯಾಸ ಪ್ರತಿಷ್ಠೆಯ ಪೂಜಾ ವಿಧಿ ವಿಧಾನಗಳು ವಿಜೃಂಭಣೆಯಿಂದ ನಡೆದವು. ರಾತ್ರಿ ಅನ್ನ ಸಂತರ್ಪಣೆ ಸಹಿತ ಇನ್ನಿತರ ಕಾರ್ಯಕ್ರಮ ಜರಗಿತು.
   


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries