HEALTH TIPS

ಯಾವುದೇ ಶೀರ್ಷಿಕೆಯಿಲ್ಲ

              ತಂದೆಯ ಸಾವೇ ಸ್ಪೂತರ್ಿ': ಭಾರತೀಯ ಸೇನೆ ಸೇರಿದ ಕಾಗರ್ಿಲ್ ಹುತಾತ್ಮ ಯೋಧನ ಪುತ್ರ
     ನವದೆಹಲಿ: ಕಾಗರ್ಿಲ್ ಯುದ್ಧದ ಸಂದರ್ಭದಲ್ಲಿ ಹುತ್ಮಾನಾಗಿದ್ದ ಭಾರತೀಯ ಸೇನೆಯ ವೀರ ಯೋಧನ ಪುತ್ರ ಕೂಡ ಇದೀಗ ಸೇನೆಗೆ ಸೇರ್ಪಡೆಯಾಗಿದ್ದು ಮಾತ್ರವಲ್ಲದೇ ತಂದೆ ಕರ್ತವ್ಯ ನಿರ್ವಹಿಸಿದ್ದ ಅದೇ ಬೆಟಾಲಿಯನ್ ನಲ್ಲಿ ಕರ್ತವ್ಯ ಪಾಲನೆಗೆ ನಿಯೋಜನೆ ಗೊಂಡಿದ್ದಾನೆ.
   ಕಾಗರ್ಿಲ್ ಯುದ್ಧದ ಸಂದರ್ಭದಲ್ಲಿ ಅಂದರೆ ಜೂನ್ 12, 1999ರ ರಾತ್ರಿ ಟೊಲೊಲಿಂಗ್ ನಲ್ಲಿ ಪಾಕಿಸ್ತಾನ ಸೈನಿಕರ ಗುಂಡೇಟಿಗೆ ಬಲಿಯಾಗಿದ್ದ ಲ್ಯಾನ್ಸ್ ನಾಯಕ್ ಬಚನ್ ಸಿಂಗ್ ಅವರ ಪುತ್ರ ಹಿತೇಶ್ ಕುಮಾರ್, ತಮ್ಮ ತಂದೆ ಸೇವೆ ಸಲ್ಲಿಸಿದ ರಜಪೂತ್ ರೈಫಲ್ಸ್ನ 2ನೇ ಬೆಟಾಲಿಯನ್ ಸೇರಿದ್ದಾರೆ. ತಂದೆ ಬಚನ್ ಸಿಂಗ್ ಹುತಾತ್ಮರಾದಾಗ ಅವರ ಪುತ್ರ ಹಿತೇಶ್ಗೆ ಕೇವಲ ಆರು ವರ್ಷ ವಯಸ್ಸಾಗಿತ್ತು. ಕಾಗರ್ಿಲ್ ಯುದ್ಧದ ಸಂದರ್ಭದಲ್ಲಿ ವೀರಮರಣವನ್ನಪ್ಪಿದ ಬಚನ್ ಸಿಂಗ್ ಸ್ಮರಣಾರ್ಥ ಮುಜಾಫರ್ನಗರದಲ್ಲಿ ಸಿವಿಲ್ ಲೈನ್ ಪ್ರದೆಶಕ್ಕೆ ಅವರ ಹೆಸರನ್ನೇ ಇಡಲಾಗಿದೆ.
     ಇದೀಗ 19 ವರ್ಷಗಳ ಬಳಿಕ ಡೆಹ್ರಾಡೂನ್ ನ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಉತ್ತೀರ್ಣರಾಗಿರುವ ಹಿತೇಶ್ ಅವರನ್ನು ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆ ನಿಯೋಜಿಸಿದೆ. ಅಲ್ಲದೆ ತಂದೆ ಕರ್ತವ್ಯ ಸಲ್ಲಿಸಿದ್ದ ರಜಪೂತ್ ರೈಫಲ್ಸ್ನ 2ನೇ ಬೆಟಾಲಿಯನ್ನಲ್ಲೇ ಮಗನಿಗೂ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ವಿಶೇಷವಾಗಿದೆ.
    ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾದೊಂದಿಗೆ ಮಾತನಾಡಿರುವ ಬಚನ್ ಸಿಂಗ್ ಪುತ್ರ ಹಿತೇಶ್, '19 ವರ್ಷಗಳಿಂದ ಭಾರತ ಸೇನೆಯನ್ನು ಸೇರುವ ಕನಸು ಕಾಣುತ್ತಿದ್ದೆ. ಅದು ನನ್ನ ತಾಯಿಯ ಕನಸು ಕೂಡ ಆಗಿತ್ತು. ಇದೀಗ ಆ ಅವಕಾಶ ನನಗೆ ಸಿಕ್ಕಿದ್ದು, ಹೆಮ್ಮೆ ಮತ್ತು ಪ್ರಾಮಾಣಿಕತೆಯಿಂದ ದೇಶದ ಸೇವೆ ಮಾಡಲು ಗಮನ ಹರಿಸುತ್ತೇನೆ' ಎಂದು ಹೇಳಿದ್ದಾರೆ.
   ಪುತ್ರ ಸೇನೆಗೆ ಸೇರುತ್ತಿರುವುದರ ಕುರಿತು ಹೆಮ್ಮೆಯಿಂದ ಮಾತನಾಡಿರುವ ಬಚನ್ ಸಿಂಗ್ ಪತ್ನಿ ಮತ್ತು ಹಿತೇಶ್ ತಾಯಿ ಕಮಶೇ ಬಾಲಾ ಅವರು, 'ಬಚನ್ ಹುತಾತ್ಮರಾದ ಬಳಿಕ ಜೀವನ ಕಷ್ಟಕರವಾಗಿತ್ತು. ನನ್ನ ಇಬ್ಬರು ಮಕ್ಕಳನ್ನು ಬೆಳೆಸಲು ನಾನು ತುಂಬಾ ಶ್ರಮಪಟ್ಟಿದ್ದೇನೆ. ಹಿತೇಶ್ ಇದೀಗ ಸೇನೆಗೆ ನಿಯೋಜನೆಗೊಂಡಿರುವುದು ಹೆಮ್ಮೆ ಎನಿಸಿದೆ. ಆತನ ತಮ್ಮ ಹೇಮಂತ್ ಕುಡಾ ಸೇನೆ ಸೇರಲು ಸಜ್ಜಾಗುತ್ತಿದ್ದಾನೆ' ಎಂದು ಸಂತಸ ವ್ಯಕ್ತಪಡಿಸಿದರು.
   ಬಚನ್ ಸಿಂಗ್ ತಲೆಗೆ ಗುಂಡು ತಗುಲಿತ್ತು, ಅಂದು ನಮ್ಮ 17 ಯೋಧರನ್ನು ಕಳೆದುಕೊಂಡೆವು. ಇದೇ ವೇಳೆ ಟೊಲೋಲಿಂಗ್ ನಲ್ಲಿ ಅಂದು ನಡೆದ ದಾಳಿಯನ್ನು ನೆನೆಸಿಕೊಂಡು ಕಣ್ಣೀರು ಹಾಕಿದ ಕಮೇಶ್ ಬಾಲಾ ಅವರು, ಅಂದು ನಿಜಕ್ಕೂ ಅತ್ಯಂತ ಕಷ್ಟದ ದಿನವಾಗಿತ್ತು. ಬಚನ್ ಸಿಂಗ್ ನಿಜಕ್ಕೂ ಅತ್ಯಂತ ಶೌರ್ಯ ಮತ್ತು ಧೈರ್ಯಶಾಲಿ ವ್ಯಕ್ತಿಯಾಗಿದ್ದರು. ಅಂದು ರಣರಂಗದಲ್ಲಿ ಬಚನ್ ಸಿಂಗ್ ಅವರ ತಲೆಗೆ ಗುಂಡೇಟು ತಗುಲಿ ಪ್ರಾಣ ಬಿಟ್ಟಿದ್ದರು. ಅಂದು ಡೆಹ್ರಾಡೂನ್ ನ ವಿವೇಕ್ ಗುಪ್ತಾ ಸೇರಿದಂತೆ ನಾಲ್ಕು ಅಧಿಕಾರಿಗಳು, 17 ಯೋಧರನ್ನು ನಾವು ಕಳೆದುಕೊಂಡೆವು. ಅಂದಿನ ಅಂತಿಮ ಹೋರಾಟದಲ್ಲಿ ಇಬ್ಬರು ಜೆಸಿಡಬಲ್ಯೂ ಅಧಿಕಾರಿಗಳು ಸಾವನ್ನಪ್ಪಿ ಮತ್ತು 70 ಸೈನಿಕರು ಗಾಯಗೊಂಡಿದ್ದರು. ಇಂದು ಬಚನ್ ಸಿಂಗ್ ಬದುಕಿದ್ದಿದ್ದರೆ ತಮ್ಮ ಪುತ್ರನ ಸಾಧನೆಗೆ ಖಂಡಿತಾ ಹೆಮ್ಮೆ ಪಡುತ್ತಿದ್ದರು ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries