HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಗದ್ದೆಗೆ ಮಣ್ಣು- ಕಾನೂನು ಕ್ರಮವಿಲ್ಲ-ಅಧಿಕಾರಿಗಳ ದಿವ್ಯಮೌನ
    ಮಂಜೇಶ್ವರ: ಸಾರ್ವಜನಿಕ ಮತ್ತು ಖಾಸಗೀ ಭೂಮಿಯಲ್ಲಿ ಕೆಲವು ಪಾರಂಪರಿಕ ವಸ್ತು ವಿಷಯಗಳನ್ನು ಯಥಾಸ್ಥಿತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಲವಾರು ಕಾನೂನು ಕಟ್ಟಳೆಗಳು ಜಾರಿಯಲ್ಲಿದ್ದರೂ ಕಡತಗಳಿಗೆ ಮಾತ್ರ ಅವುಗಳು ಸೀಮಿತವಾಗಿದೆ. ಜೊತೆಗೆ ಬಡ ಜನಸಾಮಾನ್ಯನಿಗೆ ಮಾತ್ರ ಒಂದು ಕಾನೂನು ಉಳ್ಳವರಿಗೆ ಕಾನೂನು ಸಡಿಲಿಕೆ ಎಂಬ ಮಟ್ಟಿಗೆ ವ್ಯವಸ್ಥೆಗಳು ದಿನೇದಿನೇ ಬಲಗೊಳ್ಳುತ್ತಿದ್ದು, ಜನರು ಹೋರಾಟಕ್ಕಿಳಿಯುವಂತೆ ಪ್ರೇರೇಪಿಸುವಂತಿದೆ.
   ಗದ್ದೆಗೆ ಮಣ್ಣು ತುಂಬಿಸಿ ತೆಂಗಿನ ಗಿಡ ನೆಟ್ಟು ಕಾನೂನು ಉಲ್ಲಂಘಿಸಿರುವ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸದ ಇಲಾಖೆಗಳ ಕ್ರಮದ ವಿರುದ್ಧ ನಾಗರಿಕರು ಹೋರಾಟಕ್ಕಿಳಿಯುವ ಸೂಚನೆ ಮೀಂಜದಲ್ಲಿ ನಡೆಯುತ್ತಿದೆ.
    ಮಿಂಜ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆದ್ದಾರಿ ಕಡಂಬಾರ್  ಪ್ರದೇಶದ ಸವರ್ೆ ನಂಬ್ರ 116/3ಡಿ ಕಡಂಬಾರ್ ಗ್ರಾಮ ಪ್ರದೇಶದ ಖಾಸಗೀ ವ್ಯಕ್ತಿಯೋರ್ವ ತನ್ನ 48 ಸೆಂಟ್ ಗದ್ದೆಗೆ ಕಾನೂನು ಬಾಹಿರವಾಗಿ ಕೆಂಪು  ಮಣ್ಣನ್ನು ತುಂಬಿಸಿ ಭತ್ತದ ಗದ್ದೆಯಲ್ಲಿ ತೆಂಗಿನ ಗಿಡಗಳನ್ನು ನೆಟ್ಟಿ ರುವುದರಿಂದ ಪ್ರಸ್ತುತ ಗದ್ದೆಯ ಉಳಿದ ಭಾಗದಲ್ಲಿ ಮಳೆಯ ನೀರು ತುಂಬಿ ಅಕ್ಕಪಕ್ಕದ ಇತರ ಗದ್ದೆಗಳೆಲ್ಲ ಉಪಯೋಗ ಶೂನ್ಯವಾಗುವತ್ತ ಸಾಗಿದೆ. ಈ ವಿಚಾರವಾಗಿ ಸ್ಥಳೀಯ ಜಮೀನಿನ ಮಾಲಕರು ಹಾಗೂ ಸ್ಥಳೀಯ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ, ಕೃಷಿ ಭವನಕ್ಕೆ, ಹಾಗೂ ತಾಲೂಕು ಕಚೇರಿಗಳಲ್ಲಿ ದೂರು ದಾಖಲಿಸಿದರು ಮಣ್ಣು ತುಂಬಿದ ಜಮೀನಿನ ಮಾಲಕ ಸ್ಥಳೀಯವಾಗಿ  ರಾಜಕೀಯ ಪಕ್ಷದ ಮುಖಂಡನಾಗಿರುವುದರಿಂದ ಇಲಾಖೆಗಳನ್ನೆಲ್ಲ ತನ್ನ ಪರವಾಗಿ ಕಾರ್ಯಕ್ಕೆ ಉಪಯೋಗಿಸಿ ಕಂದಾಯ ಸಚಿವರ ಹೆಸರಲ್ಲಿ ಸ್ಥಳೀಯರನ್ನು ಬೆದರಿಸಿ ತನ್ನ ವಿರುದ್ದ ಯಾವುದೇ ಕ್ರಮ ಜರಗದಂತೆ ನೋಡಿಕೊಂಡಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
    ಕೃಷಿ ಭವನ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ಪ್ರದಶರ್ಿಸಿರುವುದು ಇನಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಸೂಕ್ತ ಕಾನೂನು, ಕೇಂದ್ರ ಪರಿಸರ ಹಸಿರು ಪೀಠದ ನಿಯಮದಂತೆ ಕ್ರಮ ಜರಗಿಸಬೇಕು ಹಾಗೂ ರಾಜಕೀಯ ಬೆಂಬಲದಿಂದ ಮಣ್ಣು ತುಂಬಿರುವ ವ್ಯಕ್ತಿಗೆ  ಆಡಳಿತ ಪಕ್ಷ ಬೆಂಬಲ ನೀಡುವುದು ಖಂಡನೀಯ ಎಂದು ನಾಗರೀಕರು ದೂರಿದ್ದಾರೆ.
    ಏನಂತಾರೆ ಅಧಿಕಾರಿಗಳು:
   ಗದ್ದೆಗಳಲ್ಲಿ ಇತರ ಗಿಡ-ಮರಗಳನ್ನು ನೆಡುವುದು ಕಾನೂನು ಬಾಹಿರವಾಗಿದ್ದು, ಸವರ್ೇ ನಂಬ್ರ 116/3ಡಿ ಯ ಬಗೆಗೆ ಈಗಾಗಲೇ ದೂರು ಲಭಿಸಿದ್ದು, ಈ ಬಗ್ಗೆ ಶೀಘ್ರ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
                   ಸಿಮೋದ್.
               ಕಡಂಬಾರ್ ಗ್ರಾಮಾಧಿಕಾರಿ.
.........................................................................................................   
     2)
   ಘಟನೆಯ ಬಗ್ಗೆ ಈಗಾಗಲೇ ದೂರು ಲಭಿಸಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ವರದಿಗೆ ಸ್ಥಳೀಯ ಗ್ರಾಮಾಧಕಾರಿಗಳಿಗೆ ಸೂಚನೆ ನೀಡಲಾಗಿದೆ. ಗದ್ದೆಗಳಲ್ಲಿ ಅಲ್ಪಕಾಲಾವಧಿಯ ಬೆಳೆಗಳನ್ನಷ್ಟೆ ಮಾಡಬಹುದಾಗಿದ್ದು, ದೀಘರ್ಾವಧಿಯ ಬೆಳೆಗಳನ್ನು ಮಾಡುವಂತಿಲ್ಲ. ಜೊತೆಗೆ ಗದ್ದೆಗಳಲ್ಲಿ ಮಣ್ಣು ತುಂಬಿಸಿ ಕೃಷಿ ನಡೆಸುವುದರಿಂದ ಅಕ್ಕಪಕ್ಕದ ಕೃಷಿಭೂಮಿಗಳಲ್ಲಿ ನೀರು ತುಂಬಿಕೊಂಡು ಸಮಸ್ಯೆಯಾಗುತ್ತದೆ ಎಂಬ ಗಂಭೀರತೆಯ ಬಗೆಗೂ ಸಾರ್ವಜನಿಕರು ಗಮನ ಹರಿಸಬೇಕು.
               ಝಕೀರ್ ಹುಸೈನ್
            ಮಂಜೇಶ್ವರ ತಾಲೂಕು ತಹಶೀಲ್ದಾರ್. ಉಪ್ಪಳ. 


   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries