HEALTH TIPS

No title

                      ಜಿಲ್ಲೆಯಲ್ಲಿ  ರೇಶನ್ ಕಾಡರ್್ ನವೀಕರಿಸದ ಏಳು ಸಾವಿರ ಕುಟುಂಬಗಳು
    ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ  ಸುಮಾರು ಏಳು ಸಾವಿರದಷ್ಟು  ಕುಟುಂಬಗಳು ರೇಶನ್ ಕಾಡರ್್ (ಪಡಿತರ ಚೀಟಿ) ನವೀಕರಿಸಿಲ್ಲ  ಎಂಬುದನ್ನು  ಪತ್ತೆಹಚ್ಚಲಾಗಿದೆ. ಕಾಡರ್್ಗಳನ್ನು  ನವೀಕರಿಸುವುದಕ್ಕಾಗಿ ಕೇರಳ ಸರಕಾರವು 2015ರಲ್ಲಿ  ವಿಜ್ಞಾಪನೆ ಹೊರಡಿಸಿತ್ತು. ಆ ಸಂದರ್ಭದಲ್ಲಿ 2,85,500 ರೇಶನ್ ಕಾಡರ್್ ಮಾಲಕರು ಜಿಲ್ಲೆಯಲ್ಲಿದ್ದರು. ಇವರಲ್ಲಿ  2,84,844 ಮಂದಿ ಪಡಿತರ ಕಾಡರ್್ ನವೀಕರಿಸುವ ನಿಮಿತ್ತ  ಅಜರ್ಿ ಫಾರಂಗಳನ್ನು  ಖರೀದಿಸಿದ್ದರು.
    956 ಕಾಡರ್್ ಮಾಲಕರು ನವೀಕರಿಸುವ ಅಜರ್ಿ ಫಾರಂಗಳನ್ನೇ ಖರೀದಿಸಿಲ್ಲ. ಅಜರ್ಿ ಫಾರಂ ಖರೀದಿಸಿದವರಲ್ಲಿ  2,76,827 ಮಂದಿ ನವೀಕರಿಸುವ ಕಾಡರ್್ಗಿರುವ ಭಾವಚಿತ್ರ ತೆಗೆಯುವುದು ಮೊದಲಾದ ಕ್ರಮಗಳಿಗಾಗಿ ಹಾಜರಾಗಿದ್ದರು. ಇಷ್ಟು  ಮಂದಿಗೆ ನವೀಕರಿಸಿದ ಕಾಡರ್್ ಮಂಜೂರುಗೊಳಿಸಿದಾಗ ಅಜರ್ಿ ಫಾರಂ ನೀಡದ 956 ಕಾಡರ್್ ಮಾಲಕರ ಸಹಿತ 8,973 ಕುಟುಂಬಗಳು ರೇಶನ್ ಕಾಡರ್್ ಇರುವವರ ಪಟ್ಟಿಯಿಂದ ಹೊರತಾದರಾದರೂ ಇವರಲ್ಲಿ  ಎರಡು ಸಾವಿರದಷ್ಟು  ಮಂದಿ ಬಳಿಕ ಹೊಸ ಕಾಡರ್್ಗೆ ಅಜರ್ಿ ಸಲ್ಲಿಸಿದ್ದರು.
ಆಹಾರ ಮತ್ತು  ನಾಗರಿಕಾ ಪೂರೈಕೆ ಇಲಾಖೆಯ ಲೆಕ್ಕಾಚಾರದಂತೆ ನವೀಕರಿಸಿದ ಪಡಿತರ ಕಾಡರ್್ಗಳ ವಿತರಣೆ ಸದ್ಯದಲ್ಲೇ ಕೊನೆಗೊಳ್ಳಲಿದ್ದು , ಇದರಿಂದ ಏಳು ಸಾವಿರದಷ್ಟು  ಮಂದಿಗೆ ಹೊಸ ಕಾಡರ್್ ಲಭಿಸದು. ಈ ಏಳು ಸಾವಿರದಷ್ಟು  ಕಾಡರ್್ ಮಾಲಕರು ನವೀಕರಿಸಿದ ಕಾಡರ್್ಗಳಲ್ಲಿ  ಪಡಿತರ ವಿತರಣೆ ಆರಂಭಿಸಿದ 2017ರ ಡಿಸೆಂಬರ್ನಿಂದ ಪಡಿತರ ಸಾಮಗ್ರಿಗಳನ್ನು  ಖರೀದಿಸುತ್ತಿದ್ದಾರೆ ಎಂಬುದು ಬಹಳ ಅಚ್ಚರಿಯಾಗಿದೆ.
    2009 ಹಾಗೂ 2014ರ ಮಧ್ಯೆ ವಿವಿಧ ತಾಲೂಕು ಸಪ್ಲೈ ಕಚೇರಿಗಳಿಂದ ಮಂಜೂರುಗೊಳಿಸಿದ ಕಾಡರ್್ಗಳು ಇದಾಗಿವೆ. ಇವುಗಳಲ್ಲಿ  ಹೆಚ್ಚಿನ ಕಾಡರ್್ಗಳು ಕೂಡ ಯಾವುದೇ ತಪಾಸಣೆ ಇಲ್ಲದೆ ಮಂಜೂರುಗೊಂಡಿದ್ದವು ಎಂಬ ಆರೋಪವೂ ಕೇಳಿಬರುತ್ತಿವೆ. ಅಲ್ಲದೆ ನವೀಕರಣದಿಂದ ಹೊರತಾದ ಏಳು ಸಾವಿರದಷ್ಟು  ಪಡಿತರ ಕಾಡರ್್ಗಳ ಸ್ಥಿತಿ ಪರಿಶೀಲನೆ ಹಾಗೂ ಇದನ್ನು  ಮಂಜೂರು ಗೊಳಿಸಿರುವುದರ ನೋಟಿಫಿಕೇಶನ್ ತಪಾಸಣೆ ನಡೆಸಲು ಯಾವುದೇ ಕ್ರಮಗಳು ಇದುವರೆಗೆ ನಡೆದಿಲ್ಲ.  ಇವುಗಳಲ್ಲಿ  ಹೆಚ್ಚಿನ ರೇಶನ್ ಕಾಡರ್್ಗಳು ಬಿಪಿಎಲ್ ಸವಲತ್ತುಗಳನ್ನು  ಪಡೆಯುತ್ತಿವೆ.
    ಇನ್ನೊಂದೆಡೆ ಕೆಲವು ರೇಶನ್ ಕಾಡರ್್ಗಳ ಮಾಲಕರು ಸ್ಥಳದಲ್ಲಿಲ್ಲ. ಆದರೆ ಕಳೆದ ಡಿಸೆಂಬರ್ನಿಂದ ಈ ಕಾಡರ್್ಗಳಲ್ಲಿ  ಪಡಿತರ ಸಾಮಗ್ರಿಗಳನ್ನು  ಖರೀದಿಸುತ್ತಿರುವವರು ಯಾರು ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ಈ ಹಿಂದೆಯೇ ಕೃತಕ ದಾಖಲೆಗಳನ್ನು  ಸೃಷ್ಟಿಸಿ ನಕಲಿಯಾಗಿ ಲಭ್ಯಗೊಳಿಸಿದ ಪಡಿತರ ಕಾಡರ್್ಗಳು ಇದಾಗಿವೆ. ಇವುಗಳನ್ನು  ಅಧಿಕಾರಿಗಳು ವಶಪಡಿಸುವರು ಎಂಬ ಭಯದಿಂದ ನವೀಕರಣೆ ಗೋಜಿಗೆ ಹೋಗಲಿಲ್ಲ. ಒಂದು ಕುಟುಂಬದಲ್ಲಿ  ಒಂದಕ್ಕಿಂತ ಹೆಚ್ಚು  ರೇಶನ್ ಕಾಡರ್್ಗಳನ್ನು  ಕೈವಶವಿರಿಸಿದವರು ಇದರಲ್ಲಿ  ಒಳಗೊಂಡಿದ್ದಾರೆ ಎಂಬುದು ಅಧಿಕಾರಿಗಳ ಸಂಶಯ ವ್ಯಕ್ತಪಡಿಸಿದ್ದಾರೆ

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries