ಮಣಿಯಂಪಾರೆ ಶಾಲಾ ಪ್ರವೇಶೋತ್ಸವ
ಪೆರ್ಲ:ಎಣ್ಮಕಜೆ ಗ್ರಾಮ ಪಂಚಾಯಿತಿಯ ಬೆದ್ರಂಪಳ್ಳ ಶಾಲೆಯಲ್ಲಿ ಪಂಚಾಯಿತಿ ಮಟ್ಟದ ಶಾಲಾ ಪ್ರವೇಶೋತ್ಸವವು ಸೋಮವಾರ ನಡೆಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ರೂಪವಾಣಿ ಆರ್ ಭಟ್ ಈಗಿನ ಪುಟಾಣಿಗಳಿಗೆ ಆಧುನಿಕ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ನೀಡುವ ವ್ಯವಸ್ಥೆ ಜಾರಿಯಲ್ಲಿದ್ದು ಪ್ರತಿಯೊಂದು ಮಗುವನ್ನೂ ಶಾಲೆಗೆ ಸೇರಿಸುವ ಮೂಲಕ ಶಿಕ್ಷಣದಿಂದ ವಂಚಿತರಾಗದಂತೆ ನೋಡಿ ಕೊಳ್ಳುವ ಜವಾಬ್ದಾರಿ ಹೆತ್ತವರಿಗೆ,ಶಿಕ್ಷಕರಿಗೆ ಹಾಗೂ ಸಮಾಜಕ್ಕಿದೆ ಎಂದು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಪಂಚಾಯಿತಿಯಿಂದ ಕೊಡಮಾಡಿದ ಉಚಿತ ಪತ್ರಿಕಾ ವಿತರಣೆ ಯೋಜನೆಯನ್ನು ಶಾಲಾ ವ್ಯವಸ್ಥಾಪಕರಿಗೆ ಹಸ್ತಾಂತರಿಸುವ ಮೂಲಕ ಚಾಲನೆ ನೀಡಿದರು. ಗ್ರಾ.ಪಂ. ಪ್ರತಿನಿಧಿ ಪ್ರೇಮ ಅಧ್ಯಕ್ಷತೆ ವಹಿಸಿದರು.ಪಂಚಾಯಿತಿ ವಿಧ್ಯಾಭ್ಯಾಸ,ಅರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ., ಬಿ ಆರ್ ಸಿ ತರಬೇತುದಾರ ಶಿವರಾಮ ಶುಭಾಶಂಸನೆಗೈದರು.ಅಧ್ಯಾಪಕರು ರಕ್ಷಕ-ಶಿಕ್ಷಕ ಸಂಘ,ಮಾತೃ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.