HEALTH TIPS

No title

               ಅಂತ್ಯಕಂಡ ಅಂತ್ಯೋದಯ-ಕೊನೆಗೂ ನಿಲುಗಡೆಗೆ ಸೂಚನೆ-ನಿಜವಾದ ಹೀರೋ ಯಾರು?
   ಕಾಸರಗೋಡು: ಕೊಚ್ಚುವೇಲಿ-ಮಂಗಳೂರು ಅಂತ್ಯೋದಯ ಎಕ್ಸ್ಫ್ರೆಸ್ ರೈಲುಗಾಡಿಗೆ ಕಾಸರಗೋಡು ಹಾಗೂ ಆಲಪ್ಪುಳ ರೈಲು ನಿಲ್ದಾಣಳಲ್ಲಿ ನಿಲುಗಡೆಗೆ ಅವಕಾಶ ನೀಡಬೇಕೆಂಬ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ವಿವಿಧ ಆಯಾಮಗಳ ಪ್ರತಿಭಟನೆ-ಹೋರಾಟಗಳಿಗೆ ಗುರುವಾರ ತೆರೆಬಿದ್ದಿದ್ದು, ರೈಲುಗಾಡಿಗೆ ಕಾಸರಗೋಡು ನಿಲ್ದಾಣದಲ್ಲಿ ನಿಲುಗಡೆ ನೀಡಲಾಗುವುದೆಂಬ ನಿದರ್ೇಶನದ ಕೇಂದ್ರ ರೈಲ್ವೇ ಸಚಿವ ಫೀಯೂಶ್ ಗೋಯಲ್ ರವರ ಅಧಿಕೃತ ಪತ್ರ ಕೇರಳದಿಂದ ರಾಜ್ಯಸಭಾ ಸದಸ್ಯರಾಗಿರುವ ಪಿ.ಮುರಳೀಧರನ್ ರವರಿಗೆ ಲಭಿಸಿದೆ.
    ಅಂತ್ಯೋದಯ ರೈಲುಗಾಡಿಗೆ ಸಂಚಾರ ಆರಂಭಿಸುವುದಕ್ಕಿಂತ ಮೊದಲು ತಯಾರಿಸಲಾದ ವೇಳಾಪಟ್ಟಿಯಲ್ಲಿ ಕಾಸರಗೋಡು ನಿಲುಗಡೆಗೆ ಸೂಚನೆ ಇದ್ದರೂ ಬಳಿಕ ರೈಲು ಸಂಚಾರ ಆರಂಭಗೊಳ್ಳುತ್ತಿರುವಂತೆ ಈ ಆದೇಶ ರದ್ದಾಗಿತ್ತು. ಬಳಿಕ ಇದು ವಿವಾದವಾಗಿ, ಸಂಸದ ಪಿ.ಕರುಣಾಕರನ್ ಹಾಗೂ ಶಾಸಕ ಎನ್.ಎ ನೆಲ್ಲಿಕುನ್ನು ಅವರ ಶಕ್ತಿ ಪ್ರದರ್ಶನ-ಮೇಲಾಟಗಳ ರಂಗಭೂಮಿಯಾಗಿ ಮಾರ್ಪಟ್ಟಿತು. ಈ ಮಧ್ಯೆ ಜಿಲ್ಲಾ ಬಿಜೆಪಿ ಮುಖಂಡರು ಪಿ.ಮುರಳೀಧರನ್ ಹಾಗೂ ಸಚಿವ ಪೀಯೂಶ್ ಗೋಯಲ್ ರವರಲ್ಲಿ ಪ್ರತ್ಯೇಕವಾಗಿ ಮನವಿ ನೀಡಿದ್ದರ ತರುವಾಯ ಗುರುವಾರ ಈ ಆದೇಶ ಹೊರಬಿದ್ದಿದೆ.
   ಅತೀ ಕಡಿಮೆ ದರದಲ್ಲಿ ಬಡ ಜನಸಾಮಾನ್ಯರಿಗೂ ಉತ್ತಮ ಗುಣಮಟ್ಟದ ರೈಲು ಪ್ರಯಾಣಕ್ಕೆ ಅವಕಾಶವಿರುವ ಅಂತ್ಯೋದಯ ಎಕ್ಸ್ಫ್ರೆಸ್ಸ್ಗೆ ಸಂಚಾರ ಆರಂಭಿಸುವ ಮೊದಲು ತಯಾರಿಸಿದ ವೇಳಾಪಟ್ಟಿಯಲ್ಲಿದ್ದ ಕಾಸರಗೋಡು ನಿಲುಗಡೆ ಇರುವ ಬಗೆಗಿನ ಸೂಚನೆ ಬಳಿಕ ರದ್ದಾಗಿರುವುದರ ರಹಸ್ಯ ಇನ್ನೂ ಬಯಲಾಗಿಲ್ಲ.
 ಈ ಮಧ್ಯೆ ಗುರುವಾರ ಅಂತ್ಯೋದಯ ರೈಲು ಗಾಡಿಗೆ ಕಾಸರಗೋಡಿನಲ್ಲಿ ನಿಲುಗಡೆ ನೀಡುವಲ್ಲಿ ಸಂಸದ ಪಿ.ಕರುಣಾಕರನ್ ನಡೆಸಿದ ಹೋರಾಟವೇ ಕಾರಣ ಎಂದು ಎಲ್ಡಿಎಫ್(ಎಡರಂಗ) ಹಾಗೂ ಹೋರಾಟದ ಆರಂಭದ ದಿನ ಶಾಸಕ ಎನ್.ಎ, ನೆಲ್ಲಿಕುನ್ನು ರೈಲುಗಾಡಿಯ ಚೈನ್ ಎಳೆದು ಬಳಿಕ ನಡೆದ ಪ್ರತಿಭಟನೆ ಕಾರಣವೆಂದು ಯುಡಿಎಫ್ ವ್ಯಾಪಕ ಪ್ರಚಾರ ನಡೆಸುತ್ತಿರುವುದು ಕಂಡುಬಂತು. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries