HEALTH TIPS

No title

             ರಾಮಾಯಣ ಮಾಸಾಚರಣೆ ಹಾಗೂ ಗುರುವಂದನೆ
     ಕುಂಬಳೆ: ಭಾರತೀಯ ಸನಾತನ  ಪರಂಪರೆ ಗುರುಕುಲ ವಿದ್ಯಾಭ್ಯಾಸಕ್ಕೆ ಹೊಂದಿಕೊಂಡಿದೆ. ಆದರೆ ಇವತ್ತಿನ ಪ್ರಸ್ತುತತೆಯಲ್ಲಿ ಕೂಡಾ ಅದೇ ರೀತಿ ಸ್ಥಾನ ಮಾನ ಗುರುವಿಗೆ ನೀಡಬೇಕು ಎಂದು ಶಾಲಾ ಸಂಚಾಲಕಿ ಶಾರದಮ್ಮ ಹೇಳಿದರು.
    ಧರ್ಮತ್ತಡ್ಕ ಶ್ರೀ ದುಗರ್ಾ ಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯಲ್ಲಿ  ಸಂಸ್ಕೃತ  ಸಂಘದ ಆಶ್ರಯಲ್ಲಿ  ಎಲ್ಲ  ಸಂಘಗಳ ಸಹಕಾರದೊಂದಿಗೆ ಇತ್ತೀಚೆಗೆ ನಡೆದ ರಾಮಾಯಣ ಮಾಸಾಚರಣೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
    ಗುರು ಎಂದರೆ ಅಂಧಕಾರ ಹೋಗಲಾಡಿಸುವವ. ಬದುಕಿನಲ್ಲಿ ಗುರುನಿಷ್ಠೆ ಅಗತ್ಯ. ಗುರುವಿನ ಅನುಗ್ರಹವಿಲ್ಲದೆ ಮುಕ್ತಿ ದೊರೆಯಲಾರದೆಂಬ ಪರಿಕಲ್ಪನೆಯ ಹಿಂದೆ ಉದಾತ್ತ ಚಿಂತನೆ ಅಡಗಿದೆ. ಒಂದಕ್ಷರ ಕಲಿಸಿದಾತನೂ ಗುರು ಎನ್ನಲಾಗುತ್ತದೆ. ಗುರುಗಳಿಗೆ ವಂದನೆ ಸಲ್ಲಿಸುವುದು ಪ್ರಾಚೀನ ಸಂಸ್ಕೃತಿಯಲ್ಲೇ ರೂಢಿಯಲ್ಲಿತ್ತು. ಇಂದಿಗೂ ಗುರುವಿನ ಮಹತ್ವವನ್ನರಿತು ಗುರುವಂದನೆ ನಡೆಯುತ್ತಿದೆ. ಇಂತಹ ಕಾರ್ಯಕ್ರಮ ಅಗತ್ಯವಾಗಿ ನಮ್ಮ ದೇಶದ ಗುರುಸ್ಥಾನಕ್ಕೆ ಇರುವ ಮಹತ್ವ ಸಾಬೀತುಪಡಿಸುತ್ತದೆ. ಈ ನಿಟ್ಟಿನಲ್ಲಿ ಶಾಲೆಯಲ್ಲಿ  ರಾಮಾಯಣ ಮಾಸಾಚರಣೆ ಹಾಗೂ ಗುರುವಂದನೆ ಸಕಾಲಿಕ ಎಂದು ಅವರು ತಿಳಿಸಿದರು. 
   ಅಧ್ಯಕ್ಷತೆ ವಹಿಸಿದ್ದ  ಶಾಲಾ ಪ್ರಬಂಧಕ ಶಂಕರನಾರಾಯಣ ಭಟ್ ಮಾತನಾಡಿ, ಶಾಲಾ ಜೀವನ ಬದುಕಿನ ಮಹತ್ತರ ಬೆಳವಣಿಗೆಗೆ ಮಾರ್ಗದಶರ್ಿಯಾಗಿದ್ದು, ಶಿಲ್ಪಿ ಕಲ್ಲು  ಕೆತ್ತುವಂತೆ ಗುರು ಒಬ್ಬ ಉತ್ತಮ ಶಿಷ್ಯನ ಜೀವನ ಕೆತ್ತುತ್ತಾನೆ ಎಂದರು.
   ಸತ್ಯವತಿ, ಹಿರಿಯ ಪ್ರಾಥಮಿಕ ಸಂಸ್ಕೃತ ಅಧ್ಯಾಪಕ ಕೃಷ್ಣ ಪ್ರಸಾದ್ ಕಡೆಗೆದ್ದೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಪ್ರಭಾರ  ಪ್ರಾಂಶುಪಾಲ ನರಸಿಂಹರಾಜ ಭಟ್, ಶಿವನಾರಾಯಣ ಭಟ್ ಮಾತನಾಡಿದರು. ಸಂಸ್ಕೃತ ಸಂಘದ ಕಾರ್ಯದಶರ್ಿ ಆದಿತ್ಯರಾಮ ಸ್ವಾಗತಿಸಿ, ಜೊತೆ ಕಾರ್ಯದಶರ್ಿ ಮೇಘ ವಂದಿಸಿದರು. ಸಾತ್ವಿಕ ಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಥರ್ಿನಿಯರು ಪ್ರಾರ್ಥನೆ ಹಾಡಿದರು.
    ಎಲ್ಲ ಅಧ್ಯಾಪಕರು ಪುಷ್ಪಾರ್ಚನೆ ಮೂಲಕ ಗುರುವಂದನೆ ನಡೆಸಿದರು. ಭಜನೆ, ರಾಮಾಯಣ ಚಿತ್ರ ಪ್ರದರ್ಶನ ಮತ್ತು ಶಂಕರಾಚಾರ್ಯರ ಕಿರುಚಿತ್ರ ಪ್ರದರ್ಶನ ನಡೆಯಿತು. ಅಳಿದುಹೋಗುತ್ತಿರುವ ಭಾರತೀಯ  ಸಂಸ್ಕೃತಿಯ ಬಗ್ಗೆ ಜಾಗರೂಕರಾಗಲು ಕಾರ್ಯಕ್ರಮ ಸಹಕಾರಿಯಾಯಿತು.ಈ ಸಂದರ್ಭ ಹಿರಿಯ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.
  

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries