HEALTH TIPS

No title

                 ಸಿಪಿಎಂ ನಿಂದ ಪಂ.ಕಛೇರಿ ಮುಂದೆ ಧರಣಿ; ಪ್ರತಿಭಟನೆ ಹಾಸ್ಯಾಸ್ಪದ ಹಾಗೂ ದುರುದ್ದೇಶ ಪೂರಿತ  ಬಿಜೆಪಿ
      ಮುಳ್ಳೇರಿಯ: ಬೆಳ್ಳೂರು ಪೊಸೊಳಿಗೆ ತೋಟದ ಮೂಲೆ ಕಾಲನಿಗೆ ರಸ್ತೆ ಸಂಪರ್ಕ ಏರ್ಪಡಿಸಬೇಕೆಂದು,ಇದಕ್ಕೆ ಪಂಚಾಯಿತಿ ಮಂಜೂರು ಮಾಡಬೇಕೆಂದು ಸಿಪಿಎಂ ಸ್ಥಳೀಯ ಸಮಿತಿ ನೇತೃತ್ವದಲ್ಲಿ ಶನಿವಾರ ಪಂಚಾಯಿತಿ ಕಛೇರಿ ಮುಂದೆ ಧರಣಿ ನಡೆಯಿತು.ಹಾಳೆಯ ಟೋಪಿ ಧರಿಸಿ ನಾಟೆಕಲ್ಲಿನಿಂದ ಆರಂಭವಾದ ಮೆರವಣಿಗೆ ಪಂಚಾಯಿತಿ ಕಚೇರಿಯವರೆಗೆ ಸಾಗಿತು.
   ಬಳಿಕ ನಡೆದ ಧರಣಿಯನ್ನು ಸಿಪಿಎಂ ಕಾರಡ್ಕ ವಲಯ ಕಾರ್ಯದಶರ್ಿ ಸಿಜಿ ಮಾಥ್ಯೂ ಉದ್ಘಾಟಿಸಿದರು.ಬೆಳ್ಳೂರು ಸ್ಥಳೀಯ ಸಮಿತಿ ಕಾರ್ಯದಶರ್ಿ ಸೂಪಿ ಕಿನ್ನಿಂಗಾರು ಅಧ್ಯಕ್ಷತೆ ವಹಿಸಿದರು.ಕೆ.ಶಂಕರನ್,ಬಿ.ಕೆ.ನಾರಾಯಣನ್,ಪಿ.ರವೀಂದ್ರನ್, ಸಿ.ಕೆ.ಕುಮಾರನ್, ಕೆ.ಜಯನ್,ಎಂ ಗೋಪಾಲನ್,ಪಿ ಕೆ ಎಸ್ ವಲಯ ಕಾರ್ಯದಶರ್ಿ ಸಂತೋಷ್ ಆದೂರ್ ಮಾತನಾಡಿದರು.ಪಂಚಾಯತ್ ಸದಸ್ಯೆ ಉಷ ಸ್ವಾಗತಿಸಿದರು.
     ಪೆರಿಯಾರಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದ ಸೀತು ಎಂಬ ವಯೋವೃದ್ಧೆಯನ್ನು ಸೋಮವಾರ ರಾತ್ರಿ ರಸ್ತೆ ಸಂಪರ್ಕವಿಲ್ಲದ ಕಾರಣ ಹೊತ್ತೊಯ್ದ ಘಟನೆ ಮಾದ್ಯಮಗಳ ಮೂಲಕ ನಾಡಿನ ಗಮನ ಸೆಳೆದಿತ್ತು.ಜಿಲ್ಲಾಧಿಕಾರಿ ಕೆ.ಜೀವನ್ ಬಾಬು, ಆರ್ ಡಿ ಓ ಇ.ಎ. ಅಬ್ದುಲ್ ಸಮದ್, ಬಿಜೆಪಿ ಜಿ.ಪಂ.ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ, ಮಂಡಲಾಧ್ಯಕ್ಷ ಸುಧಾಮ ಗೋಸಾಡ ಮತ್ತಿತರ  ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಪೊಸಳಿಗೆ  ಪರಿಶಿಷ್ಟ ಜಾತಿ ಕಾಲನಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದರು.
     ಸಿಪಿಎಂ ಪಂಚಾಯಿತಿ ಕಚೇರಿ ಧರಣಿ ಹಾಸ್ಯಾಸ್ಪದ : ಬಿಜೆಪಿ
   ಇದೇ ವೇಳೆ ಬೆಳ್ಳೂರು ಗ್ರಾಮ ಪಂಚಾಯಿತಿಗೆ ಶನಿವಾರ ಸಿಪಿಎಂ ನೇತೃತ್ವದಲ್ಲಿ ನಡೆದ ಮಾಚರ್್ ಹಾಸ್ಯಾಸ್ಪದ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಬಿಜೆಪಿ ಬೆಳ್ಳೂರು ಪಂಚಾಯಿತಿ ಸಮಿತಿ ಆರೋಪಿಸಿದೆ.
    ಪೊಸೊಳಿಗೆ ತೋಟದ ಮೂಲೆ ಕಾಲನಿ ರಸ್ತೆ ಅಭಿವೃದ್ಧಿಗಾಗಿ ಬೆಳ್ಳೂರು ಗ್ರಾಮಪಂಚಾಯತಿನ ಆಡಳಿತ ಸಮಿತಿಯು ಹಲವಾರು ರೀತಿಯ ಕ್ರಮಗಳನ್ನು ಕೈಗೊಂಡಿದ್ದರೂ  ಸ್ಥಳದ ಮಾಲಕರು   ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದು ಅವರಿಗೆ ಅನುಕೂಲಕರ ತೀಪರ್ು ಲಭಿಸಿರುವುದರಿಂದ ರಸ್ತೆಗೆ ಯಾವುದೇ ಅನುಧಾನ ನೀಡಲು ಸಾಧ್ಯವಾಗುತ್ತಿಲ್ಲ.ಸ್ವಪಕ್ಷೀಯರೇ  ಸಂಸದೀಯ ಸದಸ್ಯರಾಗಿದ್ದರೂ  ವಿಶೇಷ ಅನುದಾನದಿಂದ ರಸ್ತೆ ನಿಮರ್ಿಸಲು ಸಿಪಿಎಂ ಯಾಕೆ ಮುಂದಾಗಲಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲಿ ಎಂದು ಆಗ್ರಹಿಸಿದೆ.
   ಸಿಪಿಎಂ ನ ಪಂಚಾಯಿತಿ ಧರಣಿ ಕೇವಲ ಹಾಸ್ಯಾಸ್ಪದ ಹಾಗೂ ಪ್ರಹಸನ ಮಾತ್ರವಾಗಿದ್ದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂಬುದಾಗಿ  ಬಿಜೆಪಿ ಆರೋಪಿಸಿದೆ.
      ಅಸೌಖ್ಯ ಪೀಡಿತೆಯನ್ನು ಹೊತ್ತೊಯ್ದ ಘಟನೆ; ಪಂಚಾಯಿತಿ ನಿಯೋಗದಿಂದ ಜಿಲ್ಲಾಧಿಕಾರಿ, ಸಂಸದರಿಗೆ ಮನವಿ:
    ರಸ್ತೆ ಸಂಪರ್ಕ ಇಲ್ಲದ ಕಾರಣ ಅಸೌಖ್ಯ ಪೀಡಿತ ಸೀತುವನ್ನು ಅರ್ಧ ಕಿ.ಮೀ. ಗಳಷ್ಟು ದೂರ ಹೊತ್ತೊಯ್ಯಲಾದ ತೋಟದ ಮೂಲೆ ಪೊಸೊಳಿಗೆ ಪರಿಶಿಷ್ಟ ಜಾತಿ ಕಾಲೊನಿಗೆ ನೂತನ ರಸ್ತೆ ನಿಮರ್ಿಸಲು ಪರಿಶಿಷ್ಟ ಜಾತಿ ಇಲಾಖೆಯ ಮುಖಾಂತರ, ಅಥವಾ ವಿಕಸನ ಪೇಕೇಜ್ ಮೂಲಕ ಅನುದಾನ ಮಂಜೂರು ಗೊಳಿಸಲು ಬೆಳ್ಳೂರು ಪಂಚಾಯಿತಿಯ ನಿಯೋಗವು ಶುಕ್ರವಾರ ಜಿಲ್ಲಾಧಿಕಾರಿ ಕೆ. ಜೀವನ್ ಬಾಬು ಅವರಿಗೆ  ಮನವಿ ಸಲ್ಲಿಸಿದರು. ಪಂಚಾಯಿತಿ ಅಧ್ಯಕ್ಷೆ ಲತಾ ಯುವರಾಜ್, ಕಾರಡ್ಕ ಬ್ಲಾಕ್ ಪಂಚಾಯತು ಸದಸ್ಯ ಶ್ರೀಧರ ಎಂ, ಅಭಿವೃದ್ಧಿ ಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಮಾಲತಿ ಜೆ ರೈ, ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಕೆ.ಜತೆಯಲ್ಲಿದ್ದರು.ಬಳಿಕ ಸಂಸದರಿಗೂ ವಿಶೇಷ ಅನುದಾನ ಮಂಜೂರು ಗೊಳಿಸಲು ಮನವಿ ಸಲ್ಲಿಸಲಾಯಿತು.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries