HEALTH TIPS

No title

          ಮೇಕ್ ಇನ್ ಇಂಡಿಯಾ' ದಿಂದ ಸೃಷ್ಟಿಯಾದ ಉದ್ಯೋಗದ ಮಾಹಿತಿ ಇಲ್ಲ: ಕೇಂದ್ರ ಸಕರ್ಾರ
   ನವದೆಹಲಿ: "ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸೃಷ್ಟಿಯಾದ  ಉದ್ಯೋಗಗಳ ಕುರಿತು ಯಾವುದೇ ದತ್ತಾಂಶವನ್ನು ನಾವು ಸಂಗ್ರಹಿಸುತ್ತಿಲ್ಲ ಎಂದು ಭಾರತ ಸಕರ್ಾರ ಹೇಳಿದೆ.
ಇಂತ ಯಾವುದೇ ದತ್ತಾಂಶ (ಡೇಟಾ) ವನ್ನು ನಾವು ನಿರ್ವಹಿಸುವುದಿಲ್ಲ ಎಂದು ಕೇಂದ್ರ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸಿ ಆರ್ ಚೌಧರಿ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
   ಮೇಕ್ ಇನ್ ಇಂಡಿಯಾ ಯೋಜನೆ ಪ್ರಾರಂಭವಾದ ಬಳಿಕದಿಂದ ಸೃಷ್ಟಿಯಾಗಿರುವ ಹೊಸ ಉದ್ಯೋಗಗಳ ಕುರಿತಂತೆ ಕೇಳಲಾದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.
2014 ರಿಂದಲೂ ದೇಶದಲ್ಲಿ ಉತ್ಪಾದನಾ ಸ್ಪಧರ್ಾತ್ಮಕತೆಯನ್ನು ಹೆಚ್ಚಿಸಲು ಸಕರ್ಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ.ಇದರಲ್ಲಿ ಗುಣಮಟ್ಟದ ಮೂಲಸೌಕರ್ಯ ಒದಗಿಸುವುದು, ಶಲ್ಯ ಅಭಿವೃದ್ಧಿ ಮತ್ತು ತಂತ್ರಜ್ಞಾನದ ಅಳವಡಿಕೆಯಂತಹದಕ್ಕೆ ಆದ್ಯತೆ ನಿಡಲಾಗಿದೆ.
  ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾಡಲು ಈ ಉಪಕ್ರಮವನ್ನು ಪ್ರಾರಂಭಿಸಲಾಗಿದ್ದು ಇದುವರೆಗೆ 27 ವಿವಿಧ ವಿಭಾಗಗಳಲ್ಲಿ ಇದನ್ನು ವಿಂಗಡಿಸಲಾಗಿದೆ ಎಂದು ಅವರು ಹೇಳಿದರು.
   ಕೈಗಾರಿಕಾ ನೀತಿ ಹಾಗು ಪ್ರಚಾರ ವಿಭಾಗ 15 ಉತ್ಪಾದನಾ ಕ್ಷೇತ್ರಗಳ ನಿರ್ವಹಣೆ ಮಾಡುತ್ತಿದ್ದರೆ ವಾಣಿಜ್ಯ ಇಲಾಖೆ 12 ಸೇವಾ ಕ್ಷೇತ್ರಗಳನ್ನು ನಿರ್ವಹಿಸುತ್ತಿದೆ.
ಅಂತರಿಕ್ಷಯಾನ ಮತ್ತು ರಕ್ಷಣೆ, ವಾಹನ ಮತ್ತು ಆಟೋ ಕಂಪೋನೆಂತ್ ಔಷಧೀಯ ಮತ್ತು ವೈದ್ಯಕೀಯ ಸಾಧನಗಳು, ಜೈವಿಕ ತಂತ್ರಜ್ಞಾನ ಮತ್ತು ಕಾನೂನು ಸೇವೆಗಳನ್ನು  ಒಳಗೊಂಡು  ಹೊಸದಾಗಿ ಪರಿಷ್ಕರಿಸಲಾದ 27 ವಿಭಾಗಗಳನ್ನು ಇಲ್ಲಿ ಸೇರ್ಪಡಿಸಲಾಗಿದೆ. ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries