HEALTH TIPS

No title

      ಆಧ್ಯಾತ್ಮದ ತಳಹದಿಯ ಶ್ರೀರಾಮಚರಿತ ಮಾನಸ ಸ್ವಸ್ಥ ಸಮಾಜಕ್ಕೆ ಮಾರ್ಗದಶರ್ಿ
     ಎನ್.ತಿಮ್ಮಣ್ಣ ಭಟ್ಟರ ಕನ್ನಡ ಅನುವಾದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ.ರಮಾನಂದ ಬನಾರಿ
    ಉಪ್ಪಳ: ಆಧ್ಯಾತ್ಮದ ತಳಹದಿಯುಳ್ಳ ತುಲಸೀದಾಸ ವಿರಚಿತ ಶ್ರೀರಾಮಚರಿತ ಮಾನಸವು ಸ್ವಸ್ಥ ಸಮಾಜಕ್ಕೆ ಮಾರ್ಗದಶರ್ಿ ಎಂದು ಖ್ಯಾತ ಕವಿ, ಅರ್ಥಧಾರಿ ಡಾ.ರಮಾನಂದ ಬನಾರಿ ಹೇಳಿದರು.
   ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡಘಟಕ, ಕಾಸರಗೋಡು ಇದರ ವತಿಯಿಂದ ಬಾಯಾರು  ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ  ಶಾಲೆಯಲ್ಲಿ ಉದಯೋನ್ಮುಖ ಲೇಖಕ, ನಿವೃತ್ತ ಅಧ್ಯಾಪಕ ಎನ್.ತಿಮ್ಮಣ್ಣ ಭಟ್ಟ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಶ್ರೀರಾಮಚರಿತ ಮಾನಸ ಕೃತಿಯನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
   ಧರ್ಮ ಸಂಸ್ಕೃತಿಯ ಅಂತಃಶಕ್ತಿಯ ಪ್ರತೀಕವೆನಿಸುವ ಕೃತಿಯು ಭಾವಿ ಜನಾಂಗಕ್ಕೆ ಮಾದರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು. ಕೃತಿಯ ಅನುವಾದದಿಂದ ರಾಮಚರಿತ ಮಾನಸದ ಅಂತಸತ್ವವನ್ನು ಕನ್ನಡಿಗರು ಆಸ್ವಾದಿಸಿ, ಉತ್ತಮತೆಯನ್ನು ಮೈಗೂಡಿಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು. ತಿಮ್ಮಣ್ಣ ಭಟ್ಟರು ಕನ್ನಡಕ್ಕೆ ಅನುವಾದಿಸಿದ ಕೃತಿಯು ಉತ್ತಮ ಅನುವಾದ ಶೈಲಿಯನ್ನು ಮೈಗೂಡಿಸಿಕೊಂಡಿದ್ದು ಸೃಜನಶೀಲವಾಗಿದೆ.ಸ್ವಂತಿಕೆ ಮತ್ತು ಕಾಲಕ್ಕೆ ಒಪ್ಪುವಂತಹ ಹಳೆಗನ್ನಡ ಸಹಿತ ನಡುಗನ್ನಡ ಛಾಪು ಕೃತಿಯಲ್ಲಿದೆ ಎಂದರು. ಅನುವಾದವು ಕೇವಲ ಶಬ್ದಗಳ ಹೂರಣವಾಗಿರದೆ, ಕಲಾತ್ಮಕತೆಯನ್ನು ಹೊಂದಿದೆ ಎಂದು ಅವರು ತಿಳಿಸಿದರು.
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ ಕ.ಸಾ.ಪ ಅಧ್ಯಕ್ಷ ಎಸ್.ವಿ.ಭಟ್ ಶ್ರೀ ರಾಮಚರಿತ ಮಾನಸ ಕೃತಿ ಅನುವಾದಕರಾದ ತಿಮ್ಮಣ್ಣ ಭಟ್ ದಂಪತಿಯನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಕು.ಶ್ರದ್ಧಾ ನಾರ್ಯಪಳ್ಳ ಕೃತಿಯ ಆಯ್ದ ಭಾಗವನ್ನು ವಾಚಿಸಿದರು.
   ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ವಿ ಭಟ್ಕ.ಸಾ.ಪ ಮೂಲಕ ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಉತ್ತಮ ಕನ್ನಡ ಕೃತಿಗಳ ಸಂವಾದ ಸಹಿತ ಚಿಂತನ-ಮಂಥನ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದರು. ಹಿಂದಿ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ತಿಮ್ಮಣ್ಣ ಭಟ್ಟರ ಕಾರ್ಯವನ್ನು ಶ್ಲಾಘಿಸಿದರು.ಬೆಂಗಳೂರು ಮೂಲದ ತೇಜು ಪಬ್ಲಿಕೇಶನ್ ಸಂಸ್ಥೆ ಅನುವಾದ ಕೃತಿಯ ಪ್ರಕಟನೆಯಲ್ಲಿ ಸಹಕರಿಸಿದೆ ಎಂದರು.
   ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆದ್ದಾರಿ ಶಾಲೆ ಆಡಳಿತ ಮಂಡಳಿ ಸದಸ್ಯ ರಾಮಕೃಷ್ಣ ಭಟ್.ಪಿ, ಮುಖ್ಯೋಪಾಧ್ಯಾಯ ಆದಿನಾರಾಯಣ, ಕಾಸರಗೋಡು ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪ್ರೊ. ಪಿ.ಎನ್.ಮೂಡಿತ್ತಾಯ, ಧರ್ಮತ್ತಡ್ಕ ಹೈಯರ್ ಸೆಕೆಂಡರಿ ಶಾಲಾ ಪ್ರಾಂಶುಪಾಲ ಎನ್.ರಾಮಚಂದ್ರ ಭಟ್, ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ.ಯು ಹಳೆ ವಿದ್ಯಾಥರ್ಿ ಸಂಘದ ಮೋನಪ್ಪ ಶೆಟ್ಟಿ ಕಟ್ಲಬೆಟ್ಟು ಶುಭಾಶಂಸನೆಗೈದರು.ಕಾರ್ಯಕ್ರಮದಲ್ಲಿ ಕೃತಿ ಅನುವಾದಕಾರ ಎನ್.ತಿಮ್ಮಣ್ಣ ಭಟ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಕ.ಸಾ.ಪ ಗೌರವ ಕಾರ್ಯದಶರ್ಿ ರಾಮಚಂದ್ರ ಭಟ್ ಧರ್ಮತ್ತಡ್ಕ ಸ್ವಾಗತಿ, ಕ.ಸಾ.ಪ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries