HEALTH TIPS

No title

                 1400 ಕಿಮೀ ಪಯಣಿಸಲು ನಾಲ್ಕು ವರ್ಷ ತೆಗೆದುಕೊಂಡ ರೈಲ್ವೆ ವ್ಯಾಗನ್!
    ಲಖನೌ: ನಂಬಿದರೆ ನಂಬಿ, ಬಿಟ್ರೆ ಬಿಡಿ.  2014 ರಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಕಾಂಪೋಸ್ಟ್ ಅನ್ನು ತುಂಬಿಸಿ ಗೂಡ್ಸ್ ರೈಲಿನಲ್ಲಿ ಕಳುಹಿಸಿದ್ದ ವ್ಯಾಗನ್ ಒಂದನ್ನು ಉತ್ತರ ಪ್ರದೇಶದ ಬಸ್ತಿಯನ್ನು ತಲುಪಲು ತೆಗೆದುಕೊಂಡ ಅವಧಿ ಬರೋಬ್ಬರಿ ನಾಲ್ಕು ವರ್ಷಗಳು!
   10 ಲಕ್ಷ ಮೌಲ್ಯದ ಕಾಂಪೋಸ್ಟ್ ತುಂಬಿದ್ದ ಈ ವ್ಯಾಗನ್ ನಾಲ್ಕು ವರ್ಷಗಳಲ್ಲಿ 1,400 ಕಿ.ಮೀ. ಕ್ರಮಿಸಿದೆ.
  ಇಂಡಿಯನ್ ಪೋಟಾಶ್ ಲಿಮಿಟೆಡ್ ಕಂಪನಿ 2014ರಲ್ಲಿ ಗೂಡ್ಸ್ ರೈಲಿನಲ್ಲಿ ವ್ಯಾಗನ್(107462) ಅನ್ನು ಬುಕ್ ಮಾಡಿತ್ತು.ಇದು ಉತ್ತರ ಪ್ರದೇಶದ ಮೆಸಸರ್್ ರಾಮಚಂದ್ರ ಗುಪ್ತಾ ಅವರ ಶಾಪ್ ಗಾಗಿ ಕಾಂಪೋಸ್ಟ್ ಗಳನ್ನು ಕಳಿಸಲು ಯೋಜಿಸಿತ್ತು. ಆದರೆ ಎರಡು, ಮೂರು ವರ್ಷಗಳೇ ಕಳೆದರೂ ವ್ಯಾಗನ್ ನಿಗದಿತ ಸ್ಥಳ ತಲುಪಿರಲಿಲ್ಲ. ಃಇಘಾಗಿ ರೈಲ್ವೆ ಇಲಾಖೆ ವ್ಯಾಗನ್ ಕಾಣೆಯಾಗಿದೆ ಎಂದೇ ನಂಬಿತ್ತು.
   ವ್ಯಾಗನ್ ತಲುಪದ ಕಾರಣ ಗುಪ್ತಾ ರೈಲ್ವೆ ಇಲಾಖೆಗೆ ಹಲವು ಬಾರಿ ಪತ್ರ ಬರೆದಿದ್ದರಲ್ಲದೆ ದೂರನ್ನೂ ಸಹ ನೀಡಿದ್ದರು. ಆದರೆ ರೈಲ್ವೆ ಇಲಾಖೆ ಈ ವ್ಯಾಗನ್ ಅನ್ನು ಪತ್ತೆಹಚ್ಚಲು ವಿಫಲವಾಗಿದ್ದು ಕಡೆಗೊಮ್ಮೆ ಗುಪ್ತಾ ತಮ್ಮ ಸರಕಿನ ಆಸೆಯನ್ನೇ ಬಿಟ್ಟು ಬಿಟ್ಟಿದ್ದರು.
   ಈಶಾನ್ಯ ರೈಲ್ವೆಯ ಸಂಜಯ್ ಯಾದವ್ ಹೇಳುವಂತೆ ರೈಲ್ವೆ ಇಲಾಖೆ ಈ ವ್ಯಾಗನ್ ಪತ್ತೆಗೆ ಸಾಕಷ್ಟು ಪ್ರಯತ್ನ ನಡೆಸಿದೆ. ವ್ಯಾಗನ್ ಗಳನ್ನು ಕೆಲವೊಮ್ಮೆ ತಾಂತ್ರಿಕ ಕಾರಣಕ್ಕಾಗಿ ಸರಕು ರೈಲುಗಳಿಂದ ಬೇರ್ಪಡಿಸಲಾಗುವುದು.ಬಹುಶಃ, ಈ ವ್ಯಾಗನ್ ಸಹ ಅದೇ ರೀತಿ ಆಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries