HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಹಿರಿಯ ಹೋರಾಟಗಾರ, ಪತ್ರಕರ್ತ ಎಂ.ವಿ.ಬಳ್ಳುಳ್ಳಾಯ ವಿಧಿವಶ
     ಕಾಸರಗೋಡು: ಗಡಿನಾಡಿನ ಹಿರಿಯ ಕನ್ನಡ ಹೋರಾಟಗಾರ, ಪತ್ರಕರ್ತ ಎಂ.ವಿ.ಬಳ್ಳುಳ್ಳಾಯ(80) ಬುಧವಾರ ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.
         ಗಡಿನಾಡು ಕಾಸರಗೋಡಿನ ಭಾಷಾವಾರು ಪ್ರಾಂತ್ಯ ವಿಭಜನೆಯ ಸಂದರ್ಭ ಕಳ್ಳಿಗೆ ಮಹಾಬಲ ಭಂಡಾರಿ, ಕಕ್ಕಿಲ್ಲಾಯ ಮೊದಲಾದವರೊಂದಿಗೆ ಸಹವತರ್ಿಯಾಗಿ ಮುನ್ನೆಲೆಯಲ್ಲಿ ಹೋರಾಡಿದ್ದರು. ಇದೇ ಆಸುಪಾಸಿನ ಸಂದರ್ಭ ನಾಡಪ್ರೇಮಿ ಎಂಬ ವಾರಪತ್ರಿಕೆಯನ್ನು ಆರಂಭಿಸಿ ಹೋರಾಟಕ್ಕೆ ಬಲತುಂಬಿದ್ದರು. ಕನರ್ಾಟಕ ವಿಲೀನೀಕರಣ ಹೋರಾಟದಲ್ಲೂ ಸಕ್ರೀಯರಾಗಿದ್ದರು. ಬಳಿಕ ಡೆಕ್ಕನ್ ಹೆರಾಲ್ಡ್-ಪ್ರಜಾವಾಣಿಯ ಜಿಲ್ಲಾ ವರದಿಗಾರರಾಗಿ ಸುಧೀರ್ಘ ಕಾಲ ಸೇವೆಸಲಿಸಿದ್ದರು.
   ಕೋಟೂರು ಮುಳಿಯಾರು ನಿವಾಸಿಯಾದ ಮುಳಿಯಾರು ಮೂಡುಮನೆ ವಾಸುದೇವ ಬಳ್ಳುಳ್ಳಾಯ(ಎಂ.ವಿ.ಬಳ್ಳುಳ್ಳಾಯ) ರು ಕೂಟೂರು ಅನುದಾನಿತ ಕಿರಿಯ ಪ್ರಾಥಮಿಕ ಶಾಲಾ ಪ್ರಬಂಧಕರಾಗಿದ್ದರು. ಹಾಗೂ ಕೋಟೂರು ಕಾತರ್ಿಕೇಯ ಕಲಾನಿಲಯದ ಸ್ಥಾಪಕರೂ ಆಗಿದ್ದರು. ತೆಂಕುತಿಟ್ಟಿನ ಹಿರಿಯ ತಲೆಮಾರಿನ ಯಕ್ಷಗಾನ ಭಾಗವತ ಪುತ್ತಿಗೆ ರಾಮಕೃಷ್ಣ ಜೋಯಿಸರನ್ನು ಕೋಟೂರಿನ ತಮ್ಮ ಕಾತರ್ಿಕೇಯ ಕಲಾನಿಲಯದ ಮೂಲಕ ಕಳ್ಳಿಗೆ ಮಹಾಬಲ ಭಂಡಾರಿಯವರಿಂದ ಸನ್ಮಾನಿಸಿದ್ದರು.ಕನರ್ಾಟಕ ಸಮಿತಿಯಲ್ಲೂ ಸಕ್ರೀಯರಾಗಿ ದುಡಿದಿದ್ದರು.
   ತಮ್ಮ ಪ್ರಖರ ಮತ್ತು ದಿಟ್ಟ ಬರಹಗಳ ಮೂಲಕ ಪರಿಚಿತರಾಗಿದ್ದ ಬಳ್ಳುಳ್ಳಾಯರು ಗಡಿನಾಡ ಹೋರಾಟದ ಬಗೆಗಿನ, ಕಾಸರಗೋಡಿನ ಸಂಕಷ್ಟಗಳನ್ನೊಳಗೊಂಡ ಆಂಗ್ಲ ಬರಹಗಳು ರಾಷ್ಟ್ರದ ಉದ್ದಗಲ ಪಸರಿಸುವಲ್ಲಿ ಪ್ರಮುಖ ಪಾತ್ರವಹಿಸಿತ್ತು. ತಮ್ಮ ಬದುಕು-ಬರಹಗಳನ್ನಾದರಿಸಿ ಪುನರ್ಜನ್ಮ ಎಂಬ ಕೃತಿ ರಚಿಸಿದ್ದರು.
   ಅವಿವಾಹಿತರಾದ ಬಳ್ಳುಳ್ಳಾಯರ ನಿಧನಕ್ಕೆ ಜಿಲ್ಲಾ ಕಸಾಪ ಅಧ್ಯಕ್ಷ ಎಸ್ವಿ ಭಟ್, ಜಿಲ್ಲಾ ಗಮನ ಕಲಾ ಪರಿಷತ್ತು ಅಧ್ಯಕ್ಷ ಟಿ.ಶಂಕರನಾರಾಯಣ ಭಟ್, ಜಾನಪದ ಪರಿಷತ್ತು ಅಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಕನರ್ಾಟಕ ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ, ಜಿಲ್ಲಾ ಕನ್ನಡ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries