HEALTH TIPS

No title

                       ಮುಳ್ಳೇರಿಯ ಮಂಡಲ ಭಿಕ್ಷಾಸೇವೆ
      ಮುಳ್ಳೇರಿಯ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಚಾತುಮರ್ಾಸ್ಯ ವ್ರತವು ಬೆಂಗಳೂರು ರಾಮಾಶ್ರಮದಲ್ಲಿ ನಡೆಯುತ್ತಿದ್ದು, ಮುಳ್ಳೇರಿಯ ಮಂಡಲದ ಭಿಕ್ಷಾಸೇವೆಯು ಸೋಮವಾರ ಹಾಗೂ ಮಂಗಳವಾರಗಳಂದು ನಡೆಯಿತು.
ಮುಳ್ಳೇರಿಯ ಮಂಡಲದ 12 ವಲಯಗಳ ಸೇವೆಯಲ್ಲಿ ಪದಾಧಿಕಾರಿಗಳು ಹಾಗೂ ಶಿಷ್ಯವೃಂದವರು ಪಾಲ್ಗೊಂಡರು. ಶ್ರೀಗುರುದರ್ಶನ, ಶ್ರೀಕರಾಚರ್ಿತ ಶ್ರೀರಾಮಪೂಜೆ, ಗೋಪೂಜೆ, ಪಾದಪೂಜೆಗಳು ಈ ಸಂದರ್ಭದಲ್ಲಿ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಶ್ರೀಗಳಿಂದ `ತತ್ವಭಾಗವತ್' ವಿಶೇಷ ಭಾಗವತ ಪ್ರವಚನವು ಸಂಗೀತಯುಕ್ತವಾಗಿ ಜರಗಿತು. ಗೋಸ್ವರ್ಗದ ವಿಶಿಷ್ಟವಾದ ಯೋಜನೆಗಳಲ್ಲೊಂದಾದ ಏಕಪದ ಸಮರ್ಪಣಾ ಸೇವೆಯಲ್ಲಿ ಮಂಡಲದ ಅನೇಕ ಶಿಷ್ಯಂದಿರು ತಮ್ಮ ಸಂಕಲ್ಪದಂತೆ ಸಮರ್ಪಣೆ ಮಾಡಿದರು. ಶ್ರೀಗಳವರ ವಿಶೇಷ ಮಾರ್ಗದರ್ಶನ ಸಭೆಯಲ್ಲಿ ಮಂಡಲ ಪದಾಧಿಕಾರಿಗಳು ಮತ್ತು ಶಿಷ್ಯಂದಿರು ಪಾಲ್ಗೊಂಡು ನಿದರ್ೇಶನಗಳನ್ನು ಪಡೆದುಕೊಂಡರು. ಶಿಷ್ಯರನ್ನುದ್ದೇಶಿಸಿ ಶ್ರೀಗಳವರು ಅನುಗ್ರಹ ನುಡಿಗಳನ್ನಾಡುತ್ತಾ ಶ್ರೀಮಠದ ಸರ್ವಯೋಜನೆಗಳನ್ನು ಮುಳ್ಳೇರಿಯ ಮಂಡಲವು ಸೂಕ್ತ ಸಮಯದಲ್ಲಿ ಯಶಸ್ವಿಯಾಗಿ ಕಾರ್ಯಗತಗೊಳಿಸುತ್ತಿರುವುದು ಹೆಮ್ಮೆಯೆನಿಸುತ್ತದೆ ಎಂದು ಆಶೀರ್ವದಿಸಿದರು. 
ಮಂಡಲ ವ್ಯಾಪ್ತಿಯ ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ ಹಾಗೂ ಫಲಮಂತ್ರಾಕ್ಷತೆಯನ್ನು ನೀಡಿ ಅನುಗ್ರಹಿಸಿದರು. ಕೊಡಗಿನ ಗೌರಮ್ಮ ಕಥಾ ಸ್ಪಧರ್ೆ ವಿಜೇತರಿಗೆ ಪ್ರಶಸ್ತಿ ಪ್ರದಾನವೂ ಇದೇ ಸಂದರ್ಭದಲ್ಲಿ ನಡೆಯಿತು. ಮುಳ್ಳೇರಿಯ ಮಂಡಲದ ಕೊಡಗು ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ವ್ಯಾಪಕ ಹಾನಿಯುಂಟಾದ ಹಿನ್ನೆಲೆಯಲ್ಲಿ ಶ್ರೀಮಠದಿಂದ ಸರ್ವವಿಧ ಸಹಕಾರವನ್ನು ನೀಡಿದ್ದು, ಶಿಷ್ಯವೃಂದದವರು ಪರಿಹಾರ ಕಾರ್ಯಗಳಲ್ಲಿ ನಿರಂತರವಾಗಿ ಭಾಗವಹಿಸಿದ್ದರು. ಮುಂದೆಯೂ ಶ್ರೀಮಠದಿಂದ ಸಂಪೂರ್ಣ ಸಹಕಾರ ನೀಡುವುದಾಗಿ ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries