HEALTH TIPS

No title

               ಎಣ್ಮಕಜೆ: ನೆರೆ ಸಂತ್ರಸ್ತರಿಗೆ ನೆರವು - ಬಿಜೆಪಿ ಜನಪ್ರತಿನಿಧಿಗಳ ನಿಲುವು ಅಸಂವಿಧಾನಿಕ: ಜಯಶ್ರೀ ಕುಲಾಲ್
    ಪೆರ್ಲ : ಅಧಿಕಾರ ಕಳಕೊಂಡ ಭ್ರಮನಿರಸದಿಂದ ಅಸಂಬದ್ಧ ಹೇಳಿಕೆ ನೀಡುವ ಪಂಚಾಯತಿ ನಿಕಟ ಪೂರ್ವ ಅಧ್ಯಕ್ಷೆ ಹಾಗೂ ಬಿಜೆಪಿ ಜನಪ್ರತಿನಿಧಿಗಳು ಪುಕ್ಕಟ ಪ್ರಚಾರಕ್ಕಾಗಿ ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಿದೆ.ಪ್ರಳಯ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಪಂಚಾಯತಿ ಸ್ಥಾಯೀ ಸಮಿತಿ ಹಾಗೂ ಪ್ರಭಾರ ಅಧ್ಯಕ್ಷೆ ಎಂಬ ನೆಲೆಯಲ್ಲಿ ಪಂಚಾಯತಿ ನ ವಿಶೇಷ ಸಭೆ ಕರೆದಿರುವುದು. ಸಭೆಯಲ್ಲಿ ಅನಗತ್ಯ ಗದ್ದಲವೆಬ್ಬಿಸಿ ನಂತರ ಸುಳ್ಳು ಹೇಳಿಕೆ ನೀಡುವುದು ಜನಪ್ರತಿನಿಧಿಗಳ ಘನತೆಗೆ ಶೋಭೆ ತರುವಂತದ್ದಲ್ಲವೆಂದು ಪಂಚಾಯತಿ ಅಭಿವೃದ್ಧಿ ಸ್ಥಾಯೀ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
  ಸಭೆ ಕರೆದಿರುವುದು ನಿಕಟ ಪೂರ್ವ ಅಧ್ಯಕ್ಷೆ ಸೂಚನೆಯ ಮೇರೆಗೆ ಎಂಬ ಹೇಳಿಕೆ ಅಪ್ಪಟ ಸುಳ್ಳು. ಇಂತಹ ಸೂಚನೆಗೆ ಸಭೆ ಕರೆಯಬೇಕಾದ ಅಗತ್ಯವೂ ನನಗೆ ಇಲ್ಲ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸಭೆ ಕರೆದಿರುವುದು. ಸಭೆಯಲ್ಲಿ ಭಾಗವಹಿಸಿದ ಬಿಜೆಪಿ ಪ್ರತಿನಿಧಿಗಳು ಪಂಚಾಯತಿ ನ ನೆರೆ ಸಂತ್ರಸ್ತರ ಸಹಾಯ ಕಾರ್ಯದಲ್ಲಿ ಸಹಕರಿಸಲು ಸಾಧ್ಯವಿಲ್ಲವೆಂದು ನಿಲುವು ಕೈಗೊಂಡಾಗ ಪಂಚಾಯತಿ ಕಾರ್ಯದಶರ್ಿ ಅದನ್ನು ಮಿನಿಟ್ಸ್ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಅದೇ ರೀತಿ ನೆರೆ ಸಂತ್ರಸ್ತರಿಗೆ ಪೆರ್ಲ ಪೇಟೆಯಲ್ಲಿ ಸಹಾಯ ಸಂಗ್ರಹ ಮಾಡಲು ಉಳಿದ ಜನಪ್ರತಿನಿಧಿಗಳು ತೀಮರ್ಾನ ಕೈಗೊಂಡಿತು.
  ಇದರಿಂದ ಮುಜುಗರಗೊಂಡ ನಿಕಟ ಪೂರ್ವ ಅಧ್ಯಕ್ಷೆ ಪ್ರತಿಷ್ಠೆ ಉಳಿಸಿಕೊಳ್ಳಲು ಅಪಪ್ರಚಾರದ ಕಸರತ್ತನ್ನು ಮಾಡಿದ್ದಾರೆ. ಬಿಜೆಪಿ ಪ್ರತಿನಿಧಿಗಳಿಗೆ ಸಭೆಯ ಸ್ಪಷ್ಟೀಕರಣ ಅಗಿಲ್ಲವೆನ್ನುವುದು ಕೇವಲ ಜೋಕರ್ ತಮಾಷೆಯಾಗಿ ಜನರು ಅರ್ಥಮಾಡಿಕೊಳ್ಳುವರು. ಪಂಚಾಯತಿ ನೇತೃತ್ವದಲ್ಲಿ ಪೆರ್ಲ ಪೇಟೆಯಲ್ಲಿ ಸಹಾಯ ವಸ್ತು ಸಂಗ್ರಹ ಮಾಡುವ ಸಂದರ್ಭದಲ್ಲೇ ಪಕ್ಷದ ವತಿಯಿಂದ ಬಿಜೆಪಿ ಪ್ರತಿನಿಧಿಗಳು ವಸ್ತುಗಳನ್ನು ಸಂಗ್ರಹ ಮಾಡಿರುವುದರಲ್ಲಿ ರಾಜಕೀಯ ದುರುದ್ದೇಶವಿದೆ. ಪಂಚಾಯತಿ ಸದಸ್ಯರಾಗಿ ಪಂಚಾಯತಿ ಕಾರ್ಯಕ್ರಮಗಳಲ್ಲಿ ಅಸಹಕಾರ ತೋರಿ , ಕುಟುಂಬಶ್ರೀ ಹಾಗೂ ಪಂಚಾಯತಿ ವ್ಯವಸ್ಥೆಯ ಮೇಲೆ ಸುಳ್ಳು ಆರೋಪ ಮತ್ತು ಬಹಿರಂಗ ಸವಾಲನ್ನೆಸೆದ ಬಿಜೆಪಿ ನಿಲುವು ಅಸಂವಿಧಾನಿಕ ನಡೆ ಎಂದು ಅವರು ಆರೋಪಿಸಿದ್ದಾರೆ.
ಪಂಚಾಯತಿ ವಾಹನದ ಯಾವುದೇ ದುರ್ಬಳಕೆ ನಡೆದಿಲ್ಲ. ಆರೋಪ ಮಾಡುವ ನಿಕಟ ಪೂರ್ವ ಅಧ್ಯಕ್ಷೆ ಈ ಬಗ್ಗೆ ಮೊದಲು ಆತ್ಮ ವಿಮಶರ್ೆ ಮಾಡಿಕೊಳ್ಳಬೇಕು. ಪಂಚಾಯತಿ ಸದಸ್ಯನಲ್ಲದ ತನ್ನ ಪತಿಯು ಪಂಚಾಯತಿ ವಾಹನದ ಮುಂದಿನ ಆಸನದಲ್ಲಿ ಕೂತು ಸಂಚಾರಿಸುವಾಗ ಪಂಚಾಯತಿ ವಾಹನದ ಸದುಪಯೋಗದ ಈ ಕಾಳಜಿ ಯಾಕೆ ಇರಲಿಲ್ಲವೆಂದು ಅವರು ಪ್ರಶ್ನಿಸಿದ್ದಾರೆ. ಅಧಿಕಾರದಲ್ಲಿರುವಾಗ ಇಲ್ಲದ ಜನಪರ ಕಾಳಜಿ ಅಧಿಕಾರ ಕಳಕೊಂಡಾಗ ಹೇಳುವುದರ ಔಚಿತ್ಯ ಜನರು ತಿಳಿದುಕೊಳ್ಳುತ್ತಾರೆ. ಅಧ್ಯಕ್ಷೆ ಪದವಿ ಕೈತಪ್ಪಿದರೂ ಮಾನಸಿಕವಾಗಿ ಅದನ್ನು ಒಪ್ಪಿಕೊಲ್ಲದ ಅಧಿಕಾರ ಲಾಲಸೆಯ ಮನಸ್ಥಿತಿ ಸರಿಯಲ್ಲ. ಇಲ್ಲದ ಆಧಿಕಾರ ಇದೆ ಎಂದು ಬಿಂಬಿಸಲು ಪ್ರಯತ್ನಿಸುವಾಗ ಹಾಲಿ ಪಂಚಾಯತಿ ಬೋಡರ್ಿನಲ್ಲಿ ಇತರ ಇಬ್ಬರು ನಿಕಟಪೂರ್ವ ಅಧ್ಯಕ್ಷರು ಇದ್ದಾರೆ ಎಂಬುದು ಮರೆಯಬಾರದು. ಕೇವಲ ಪ್ರಚಾರ ಪ್ರಿಯರಾಗುವುದನ್ನು ಬಿಟ್ಟು ಇನ್ನಾದರೂ ಸ್ವಂತ ವಾಡರ್್ ನ ಅಭಿವೃದ್ಧಿ ಕಡೆಗೆ ಇಂತಹ ಜನಪ್ರತಿನಿಧಿಗಳು ಗಮನಕೊಡಬೇಕೆಂದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries