HEALTH TIPS

No title

              ಮಹಾ ಸಕರ್ಾರಕ್ಕೆ ಸುಪ್ರೀಂ ನೋಟಿಸ್, ಐವರು ಹೋರಾಟಗಾರರಿಗೆ ಗೃಹ ಬಂಧನ
    ನವದೆಹಲಿ: ಭೀಮಾ-ಕೊರಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಹೋರಾಟಗಾರರನ್ನು ಬಂಧಿಸಿದ ಮಹಾರಾಷ್ಟ್ರ ಸಕರ್ಾರಕ್ಕೆ ಸುಪ್ರೀಂ ಕೋಟರ್್ ಬುಧವಾರ ನೋಟಿಸ್ ನೀಡಿದ್ದು, ಹೋರಾಟಗಾರರನ್ನು ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿದೆ.
   ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣ ನಡೆದು ಒಂಬತ್ತು ತಿಂಗಳ ನಂದರ ಈಗ ಐವರು ಹೋರಾಟಗಾರರನ್ನು ಬಂಧಿಸಿದ ಮಹಾರಾಷ್ಟ್ರ ಪೊಲೀಸರ ಕ್ರಮವನ್ನು ಪ್ರಶ್ನಿಸಿದ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಸೆಪ್ಟೆಂಬರ್ 6ರ ವರೆಗೆ ಹೋರಾಟಗಾರರನ್ನು ಜೈಲಿಗೆ ಕಳುಹಿಸದೆ ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿದೆ.
   ಅಸಮ್ಮತಿ ಎಂಬುದು ಪ್ರಜಾಪ್ರಭುತ್ವದ ಸುರಕ್ಷತಾ ಕವಚವಿದ್ದಂತೆ ಮತ್ತು ಒಂದು ವೇಳೆ ಈ ಸುರಕ್ಷತಾ ಕವಚಗಳಿಗೆ ಅವಕಾಶ ನೀಡದಿದ್ದರೆ ಅದು ಸ್ಫೋಟಗೊಳ್ಳುತ್ತದೆ ಎಂದು ಸುಪ್ರೀಂ ಕೋಟರ್್ ಎಚ್ಚರಿಕೆ ನೀಡಿದೆ.
  ಮಂಗಳವಾರ ಬಂಧನಕ್ಕೊಳಗಾಗಿದ್ದ ಕ್ರಾಂತಿಕಾರಿ ಬರಹಗಾರ ವರವರ ರಾವ್ ಸೇರಿದಂತೆ ಐವರು ಹೋರಾಟಗಾರರ ಪರ ವಕೀಲರು ಸಲ್ಲಿಸಿದ್ದ ಅಜರ್ಿಯ ವಿಚಾರಣೆ ನಡೆಸಿದ ಕೋಟರ್್, ಈ ಸಂಬಂಧ  ಪ್ರತಿಕ್ರಿಯೆ ಸಲ್ಲಿಸುವಂತೆ ಮಹರಾಷ್ಟ್ರ ಸಕರ್ಾರ ಮತ್ತು ಪೊಲೀಸರಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.
  ಮಂಗಳವಾರ ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸಿದ್ದ ಪುಣೆ ಪೊಲೀಸರು, ಹೈದರಾಬಾದ್ ನಲ್ಲಿ ವರವರ ರಾವ್, ಮುಂಬೈನಲ್ಲಿ ಅರುಣ್ ಫೆರೀರಾ ಮತ್ತು ವನರ್ಾನ್ ಗೋನ್ಸಾಲ್ವೆಸ್, ಫರಿದಾಬಾದ್ ನಲ್ಲಿ ಸುಧಾ ಭಾರದ್ವಜ್ ಹಾಗೂ ದೆಹಲಿಯಲ್ಲಿ ಗೌತಮ್ ನವಲಾಖ ಅವರನ್ನು ಬಂಧಿಸಿದ್ದರು.
    ಹೋರಾಟಗಾರರ ಬಂಧನ ಪ್ರಶ್ನಿಸಿ ಪ್ರಶಾಂತ್ ಭೂಷಣ್, ಅಭಿಷೇಕ್ ಮನುಸಿಂಘ್ವಿ ಮತ್ತು ಇಂದಿರಾ ಜೈಸಿಂಗ್ ಅವರು ಮುಖ್ಯ ನ್ಯಾಯಮೂತರ್ಿಗಳ ಪೀಠದ ಮುಂದೆ ಬುಧವಾರ  ಬೆಳಿಗ್ಗೆ ಅಜರ್ಿ ಸಲ್ಲಿಸಿದ್ದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries