HEALTH TIPS

ಯಾವುದೇ ಶೀರ್ಷಿಕೆಯಿಲ್ಲ

               ವಡಕ್ಕುನಾಥನ್ ಎಂಟ್ರಿಯಾದಾರೇ?- ಲೋಕಸಭೆ ಚುನಾವಣೆ: ಕೇರಳದಲ್ಲಿ ಬಿಜೆಪಿಯ ಟ್ರಂಪ್ ಕಾಡರ್್ ಆಗಲಿದ್ದಾರಾ ಸೂಪರ್ ಸ್ಟಾರ್ ಮೋಹನ್ ಲಾಲ್?
   ತಿರುವನಂತಪುರಂ: 2019 ಲೋಕಸಭೆ ಚುನಾವಣೆಗೆ ಮುನ್ನ ಮಲೆಯಾಳಂ ಸೂಪಸ್ಟರ್ಾರ್ ಮೋಹನ್ ಲಾಲ್ ಅವರು ಬಿಜೆಪಿ ಸೇರಬಹುದೆಂಬ ಸುದ್ದಿ ಸಾಮಾಜಿಕ ತಾಣ ಹಾಗೂ ಮಾದ್ಯಮಗಳಲ್ಲಿ ಹರಿದಾಡುತ್ತಿದೆ. ಜನ್ಮಾಶ್ಠಮಿಯ ದಿನ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿದ ದ್ದ ಸೂಪರ್ ಸ್ಟಾರ್ ಮೋಹನ್ ಲಾಲ್ ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಿಂದ ಬಿಜೆಪಿ ಅಭ್ಯಥರ್ಿಯಾಗಿ ಕಣಕ್ಕಿಳಿಯಲಿದ್ದಾರೆ ಎಂದು ಅಂದಾಜಿಸಲಾಗಿದೆ.
    ಮೋಹನ್ ಲಾಲ್ ಬಿಜೆಪಿಗೆ ಸೇರ್ಪಡೆಗೊಳ್ಳುವಂತೆ ಮಾಡಲು ಆರ್ ಎಸ್ ಎಸ್ ಸತತ ಪ್ರಯತ್ನ ನಡೆಸುತ್ತಿದೆ, ಸ್ಟಾರ್ ನಟನನ್ನು ಬಿಜೆಪಿಗೆ ಸೆಳೆದುಕೊಳ್ಳುವ ಮೂಲಕ ಕೇರಲದಲ್ಲಿ ಕಮಲ ಪಕ್ಷ ನೆಲೆ ಕಂಡುಕೊಳ್ಳಲು ಹವಣಿಸುತ್ತಿದೆ ಎಂದು ಮಾದ್ಯಮದಲ್ಲಿ ವರದಿಯಾಗಿದೆ.
    ಒಂದು ವೇಳೆ ಇದು ನಿಜವಾದಲ್ಲಿ ಕಾಂಗ್ರೆಸ್ ನಾಯಕ ಶಶಿ ತರೂರ್ ವಿರುದ್ಧ ಸೂಪರ್ ಸ್ಟಾರ್ ನಟ ಕಣಕ್ಕಿಳಿಯುವ ಸಂಭಾವ್ಯತೆಯನ್ನು ತಳ್ಳಿಹಾಕುವಂತಿಲ್ಲ.
ಕೇರಳದಲ್ಲಿ ಬಿಜೆಪಿ ತನ್ನ ಮತ ಹಂಚಿಕೆಯನ್ನು ಹೆಚ್ಚಿಸಿಕೊಂಡಿದೆಯಾದರೂ, ಇದುವರೆಗೂ ಯಾವುದೇ ಪ್ರಮುಖ ಚುನಾವಣೆಗಳಲ್ಲಿ ಪ್ರಭಾವಶಾಲಿಯಾಗಿ ಹೊರಹೊಮ್ಮಿಲ್ಲ.. ರಾಜ್ಯದಲ್ಲಿ ಇದು ಅತಿ ದೊಡ್ಡ ಹೆಸರು, ಮಾಜಿ ಕೇಂದ್ರ ಸಚಿವ ಒ ರಾಜಗೋಪಾಲ್ ಅವರದ್ದಾಗಿದೆ. ಕೇಸರಿ ಪಕ್ಷವು ಈಗಾಗಲೇ ಮಲಯಾಳಂ ನಟ ಸುರೇಶ್ ಗೋಪಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಂಡಿದೆ.ಈಗ ಮೋಹನ್ ಲಾಲ್ ಅವರ ಸೇಪಡೆಯಿಂದ ಪಶ್ಚಿಮ ಕರಾವಳಿ ರಾಜ್ಯದಲ್ಲಿ ಚುನಾವಣೆ ಗೆಲ್ಲಲು ಯಾವ ಪ್ರಮುಖ ರಾಜಕೀಯ ನೇತಾರರನ್ನೂ ಹೊಂದಿಲ್ಲದ ಕಮಲ ಪಾಳಯಕ್ಕೆ  ಅಗತ್ಯ ಸ್ಟಾರ್ ಶಕ್ತಿ ದೊರಕಿದಂತಾಗುತ್ತದೆ.
   ಕೃಷ್ಣ ಜನ್ಮಾಷ್ಠಮಿದಿನದಂದು ಮೋಹನ್ ಲಾಲ್ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ನಟ ಮೋಹನ್ ಲಾಲ್ ಮತ್ತು ಪ್ರಧಾನಿ ಮೋದಿ ಇಬ್ಬರೂ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
  ಈ ಭೇಟಿಯ ವೇಳೆ ನಟ ತಮ್ಮ ವಿಶ್ವ ಶಾಂತಿ ಫೌಂಡೇಷನ್ ಕುರಿತಂತೆ ಪ್ರಧಾನಿಗಳಿಗೆ ವಿವರಣೆ ನಿಡಿದ್ದಾರೆ.ಅಲ್ಲದೆ ಪ್ರವಾಹ ಪಿಡಿತ ಕೇರಳಕ್ಕೆ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಕರ್ಾರ ನೀಡಿದ ಸಹಾಯಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries