ಶಿವ..ಶಿವಾ..ಗುಡುಗಿದ ಸೇನೆ-ಕಾಂಗ್ರೆಸ್ ಪಕ್ಷವು ಮುಸ್ಲಿಮರನ್ನು ಬಳಸಿಕೊಂಡಂತೆಯೇ ಬಿಜೆಪಿ ಹಿಂದೂಗಳನ್ನು ಬಳಸಿಕೊಂಡಿದೆ: ಶಿವಸೇನೆ
ಮುಂಬೈ: ಮಿತ್ರ ಪಕ್ಷ ಬಿಜೆಪಿ ವಿರುದ್ಧ ಶಿವಸೇನೆ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ್ದು, ಹಿಂದುತ್ವದ ಏಣಿಯಿಂದ ಅಧಿಕಾರಕ್ಕೇರಿದ ಬಿಜೆಪಿ, ಉದ್ದೇಶ ಈಡೇರಿದ ಬಳಿಕ ಹಿಂದೂಗಳನ್ನು ಕಡೆಗಣಿಸಿದೆ ಎಂದು ಆರೋಪಿಸಿದೆ.
2014 ರ ಲೋಕಸಭಾ ಚುನಾವಣೆಗೂ ಮುನ್ನ ಶಿವಸೇನೆಯೊಂದಿಗೆ ಮೈತ್ರಿ ಮುರಿದುಕೊಳ್ಳುವ ಮೂಲಕ ಹಿಂದುತ್ವದ ಬೆನ್ನಿಗೆ ಬಿಜೆಪಿ ಚೂರಿ ಹಾಕಿತ್ತು. ಚುನಾವಣೆಗೂ ಮುನ್ನ ಹಿಂದೂಗಳಿಗೆ ನೀಡಿದ್ದ ಭರವಸೆಗಳ ಪೈಕಿ ಒಂದನ್ನೂ ಬಿಜೆಪಿ ಈ ವರೆಗೂ ಈಡೇರಿಸಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕಾಗಿ ಹೇಗೆ ಮುಸ್ಲಿಮರನ್ನು ಬಳಸಿಕೊಂಡಿತೋ ಹಾಗೆ ಬಿಜೆಪಿ ಸಹ ಹಿಂದೂಗಳನ್ನು ಬಳಸಿಕೊಂಡಿದೆ. ಕಾಂಗ್ರೆಸ್ ಮುಸ್ಲಿಮರ ಶ್ಲಾಘನೆಯನ್ನಾದರೂ ಮಾಡುತ್ತಿತ್ತು. ಆದರೆ ಬಿಜೆಪಿ ಹಿಂದೂಗಳ ಮನವೊಲಿಕೆ ಮಾಡುವ ಬದಲು ಹಿಂದೂಗಳನ್ನು ಸೆಕ್ಯುಲರ್ (ಜಾತ್ಯತೀತರನ್ನಾಗಿ) ಮಾಡಲು ಯತ್ನಿಸಿದೆ ಎಂದು ತನ್ನ ಮುಖವಾಣಿ ಸಾಮ್ನಾದಲ್ಲಿ ಶಿವಸೇನೆ ಆರೋಪಿಸಿದೆ.