HEALTH TIPS

No title

               ಅರ್ಹ ಗುರುವನ್ನು ಆಯ್ಕೆಗೊಳಿಸುವ ಸ್ವಾತಂತ್ರ್ಯ ಶಿಷ್ಯನಿಗಿದೆ-ವಿದ್ವಾನ್ ಹಿರಣ್ಯ
              ಚಾತುಮರ್ಾಸ್ಯದ ಅಂಗವಾಗಿ ಏರ್ಪಡಿಸಿದ ಶ್ರೀಮದ್ ಭಾಗವತ ಸಪ್ತಾಹ ಸಂಪನ್ನ
   ಬದಿಯಡ್ಕ: ರಾಷ್ಟ್ರದ ಪ್ರಾಚೀನ ಕಾವ್ಯಗಳಲ್ಲಿ ವಿಶಿಷ್ಟವೆನಿಸುವ ಪುರಾಣಗಳಿಗೆ ವೇದಗಳೇ ಮೂಲವಾಗಿದ್ದು, ವೇದಗಳ ಅರ್ಥಗಳನ್ನು ವಿಸ್ತರಿಸಿ ಹೇಳುವುದೇ ಪುರಾಣಗಳಾಗಿವೆ ಎಂದು ಪ್ರವಚನಕಾರ ವಿದ್ವಾನ್. ಹಿರಣ್ಯ ವೆಂಕಟೇಶ್ವರ ಭಟ್ ತಿಳಿಸಿದರು.
  ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಗಳ 58ನೇ ಚಾತುಮರ್ಾಸ್ಯದ ಅಂಗವಾಗಿ ಏರ್ಪಡಿಸಲಾಗಿದ್ದ ಶ್ರೀಮದ್ ಭಾಗವತ ಸಪ್ತಾಹದ ಕೊನೆಯ ದಿನವಾದ ಶನಿವಾರ ಸಂಜೆ ನಡೆದ ಪ್ರವಚನ ಮಾಲಿಕೆಯ ಮಂಗಳಾಚರಣೆಯಲ್ಲಿ ಅವರು ಮಾತನಾಡಿದರು.
   ಸನಾತನ ಪರಂಪರೆಯಲ್ಲಿ ಗುರುವಿಗೆ ವಿಶೇಷವಾದ ಸ್ಥಾನಗಳಿದ್ದು, ಶಿಷ್ಯನನ್ನು ಉದ್ದರಿಸುವ ಶಕ್ತಿ ಗುರುವಿನಲ್ಲಿದೆ. ಆದರೆ ಅರ್ಹ ಗುರುವನ್ನು ಆಯ್ಕೆಗೊಳಿಸುವ ಸ್ವಾತಂತ್ರ್ಯ ಶಿಷ್ಯನ ಸ್ವಾತಂತ್ರ್ಯವಾಗಿದ್ದು, ಅನರ್ಹ ಗುರುವಿನಿಂದ ಪಾಪತ್ವ ಅಂಟಿಕೊಳ್ಳುತ್ತದೆ. ಬ್ರಹ್ಮನಿಷ್ಠ, ಶೋತ್ರಿಯಾದ ಗುರುವಿನಿಂದ ಶಿಷ್ಯತ್ವ ಸಾರ್ಥಕವಾಗುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು. ಶ್ರೀಭಾಗವತವು ವರ್ತಮಾನದ ಮಾನವ ಬದುಕಿಗೆ ಕೈದೀವಿಗೆಯಾಗಿ ಸಂಕಟದಿಂದ ಮುಕ್ತಿದೊರಕಿಸುವ ಶಕ್ತಿ ಹೊಂದಿದೆ. ಬದುಕಿನ ಪ್ರತಿಯೊಂದು ಘಟ್ಟಗಳ ನಡವಳಿಕೆಯ ಬಗ್ಗೆ ಸ್ಪಷ್ಟ ನಿದರ್ೇಶನ ನೀಡಿರುವ ಭಾಗವತ ಪೂರ್ಣ ಪ್ರಮಾಣದಲ್ಲಿ ವೇದಗಳ ಸಾರವನ್ನು ಮಥಿಸಿ ರಚಿಸಲ್ಪಟ್ಟಿದೆ ಎಂದು ಅವರು ತಿಳಿಸಿದರು.
   ಶ್ರೀಮದ್ ಎಡನೀರು ಮಠಾಧೀಶರಾದ ಶ್ರೀಕೇಶವಾನಂದ ಭಾರತೀ ಶ್ರೀಗಳು ಉಪಸ್ಥಿತರಿದ್ದರು. ಬಳಿಕ ಬೆಂಗಳೂರಿನ ಇಂದಿರಾ ಶಮರ್ಾ ಮತ್ತು ತಂಡದವರಿಂದ ಸಂಗೀತ ಸಂಜೆ ಪ್ರಸ್ತುತಗೊಂಡಿತು. ವಯಲಿನ್ನಲ್ಲಿ ವಿದ್ವಾನ್ ಟಿ.ಜಿ.ಗೋಪಾಲಕೃಷ್ಣನ್, ಮೃದಂಗದಲ್ಲಿ ದತ್ತಾತ್ರೇಯ ಶಮರ್ಾ ಬೆಂಗಳೂರು, ಘಟಂ ನಲ್ಲಿ ಈಶ್ವರ ಭಟ್ ಕಾಸರಗೋಡು ಸಹಕರಿಸಿದರು.
   ಭಾನುವಾರ ಶ್ರೀಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಶೇಷ ಸೇವೆಗಳು ನೆರವೇರಿದವು. ರಾತ್ರಿ ಅಘ್ರ್ಯ ಪ್ರಧಾನ ಸೇವೆ ನೆರವೇರಿತು. ಭಜನಾ ಸತ್ಸಂಗ ನಡೆಯಿತು. ಸಾಂಸ್ಕೃತಿಕ ಸಂಜೆಯ ಅಂಗವಾಗಿ ಮಂಗಳೂರು ಉರ್ವದ ನಾಟ್ಯಾರಾಧನ ಕಲಾಕೇಂದ್ರದ ವಿದುಷಿಃ ಸುಮಂಗಲಾ ರತ್ನಾಕರ ರಾವ್ ಮತ್ತು ಶಿಷ್ಯವೃಂದದವರಿಂದ ನೃತ್ಯ ವೈಭವ ಪ್ರಸ್ತುತಗೊಂಡಿತು.
   ಸೋಮವಾರ ವಿವಿಧ ವೈದಿಕ ಕಾರ್ಯಕ್ರಮಗಳು, ಭಜನಾ ಸತ್ಸಂಗ, ಸಂಜೆ 6.30 ರಿಂದ ಆನೂರು ಅನಂತಕೃಷ್ಣ ಶಮರ್ಾ ಬೆಂಗಳೂರು ತಂಡದವರಿಂದ ತಾಳವಾದ್ಯ ಲಯಲಹರಿ ಪ್ರದರ್ಶನಗೊಳ್ಳಲಿದೆ.
 
       

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries