HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                     ಪಂಪಾ ತಲಪಿದ ಎಸ್ ಪಿ ಮಂಜು
    ಕಾಸರಗೋಡು: ಕೇರಳ ದಲಿತ ಮಹಿಳಾ ಒಕ್ಕೂಟದ ಅಧ್ಯಕ್ಷೆ ಎಸ್ ಪಿ ಮಂಜು(38) ಅವರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ಮುಂದಾಗಿದ್ದು, ಶನಿವಾರ ಸಂಜೆ 4.30ರ ವೇಳೆ ಪಂಪಾ ನದೀ ತಟ ತಲಪಿದ್ದಾರೆ.
   ಈಗಾಗಲೇ ಪಂಪಾದಲ್ಲಿರುವ ಮಂಜು ಅವರು, ಪಂಪಾ ಪೊಲೀಸ್ ಠಾಣೆಗೆ ತೆರಳಿ ಅಯ್ಯಪ್ಪಸ್ವಾಮಿ ದರ್ಶನ ಪಡೆಯಲು ತನಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿದ್ದಾರೆ.
     ಮಂಜು ಮನವಿಗೆ ಸ್ಪಂದಿಸಿದ ಪೊಲೀಸರು, ಅವರಿಗೆ 100 ಪೊಲೀಸರ ಭದ್ರತೆ ಒದಗಿಸಲು ನಿರ್ಧರಿಸಿದ್ದಾರೆ. ಕೊಲ್ಲಂ ಜಿಲ್ಲೆಯ ಮಂಜು ಅವರು ಸಾಂಪ್ರದಾಯಿಕ ಉಡುಪು ಧರಿಸಿ, ಇರುಮುಡಿಯೊಂದಿಗೆ ಇಂದು ಮಧ್ಯಾಹ್ನ ಅಯ್ಯಪ್ಪಸ್ವಾಮಿ ದರ್ಶನ ಪಡೆಯುತ್ತಿದ್ದಾರೆ.
    ಸುಪ್ರೀಂ ಕೋಟರ್್ ಎಲ್ಲಾ ವಯಸ್ಸಿನ ಮಹಿಳೆಯರಿಗೂ ಶಬರಿಮೇಲೆ ದೇವಸ್ಥಾನ ಪ್ರವೇಶಕ್ಕೆ ಮುಕ್ತ ಅವಕಾಶ ಕಲ್ಪಿಸಿದ ನಂತರ, ದೇವಸ್ಥಾನ ಪ್ರವೇಶಿಸಲು ಯತ್ನಿಸುತ್ತಿರುವ ಐದನೇ ಮಹಿಳೆ ಮಂಜು ಆಗಿದ್ದಾರೆ. ಈ ಮುಂಚೆ ನ್ಯೂಯಾಕರ್್ ಟೈಮ್ಸ್ ಪತ್ರಕತರ್ೆ ಸುಹಾಸಿನಿ ರಾಜ್, ಮೋಜೋ ಟಿವಿಯ ಕೋಕಿಲಾ ಜಾಕಲ್, ಸಾಮಾಜಿಕ ಕಾರ್ಯಕತರ್ೆಯರಾದ ರೆಹನಾ ಫಾತಿಮಾ ಹಾಗೂ ಮೇರಿ ಸ್ವೀಟಿ ಅವರು ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದರು.
     ಶಬರಿಮಲೆಯತ್ತ ಹೆಜ್ಜೆ ಹಾಕಿದ ಮತ್ತಷ್ಟು ಮಹಿಳೆಯರು:
      ಹಲವೆಡೆ ನಿಷೇಧಾಜ್ಞೆ, ಭದ್ರತೆ ಹೆಚ್ಚಿಸಿದ ಅಧಿಕಾರಿಗಳು
      ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಮತ್ತಷ್ಟು ಮಹಿಳೆಯರು ಪ್ರಯಾಣ ಆರಂಭಿಸಿದ್ದು, ಈ ಹಿನ್ನಲೆಯಲ್ಲಿ ಹಲವೆಡೆ ನಿಷೇಧಾಜ್ಞೆ ಜಾರಿಗೊಳಿಸಿರುವ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆಂದು ತಿಳಿದುಬಂದಿದೆ.
    50 ಪುರುಷ ಭಕ್ತರ ಬೆಂಬಲದೊಂದಿಗೆ 13 ಮಂದಿ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶಿಸಲು ಆಗಮಿಸುತ್ತಿದ್ದಾರೆಂದು ತಿಳಿದುಬಂದ ಹಿನ್ನಲೆಯಲ್ಲಿ ಕೇರಳ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆಂದು ವರದಿಗಳು ತಿಳಿಸಿವೆ.
    ಶಬರಿಮಲೆ, ಇಳಾವಂಕುಲ್ ಮತ್ತು ಪಂಪಾ ಬಳಿ ಈಗಾಗಲೇ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದ್ದು, ಈ ನಿಷೇಧಾಜ್ಞೆಯನ್ನು ಸೋಮವಾರದವರೆಗೂ ಮುಂದುವರೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
   ಈ ನಡುವೆ ಹೇಳಿಕೆ ನೀಡಿರುವ ಬಿಜೆಪಿ ನಾಯಕ ಕೆ.ಸುರೇಂದ್ರನ್ ಅವರು, 10-50 ವರ್ಷದೊಳಗಿನ ಮಹಿಳೆಯರು ದೇವಾಲಯದೊಳಗೆ ಪ್ರವೇಶ ಮಾಡದಂತೆ ಅಯ್ಯಪ್ಪ ಭಕ್ತರು ನಡೆಸುತ್ತಿರುವ ಪ್ರತಿಭಟನೆ ಹೀಗೆಯೇ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
    ಈ ಹಿಂದ ಹೇಳಿಕೆ ನೀಡಿದ್ದ ಸಿಪಿಐ(ಎಂ) ಪ್ರಧಾನ ಕಾರ್ಯದಶರ್ಿ ಸೀತಾರಾಮ್ ಯೆಚೂರಿಯವರು, ಶಬರಿಮಲೆ ಹಿಂಸಾಚಾರವನ್ನು ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸದ ವೇಳೆ ಸಂಭವಿಸಿದ್ದ ಹಿಂಸಾಚಾರಕ್ಕೆ ಹೋಲಿಕೆ ಮಾಡಿದ್ದರು. ಯೆಚೂರಿಯವರ ಹೇಳಿಕೆ ಇದೀಗ ಭಾರೀ ಚಚರ್ೆ ಹಾಗೂ ವಾಗ್ಸಮರಕ್ಕೆ ಕಾರಣವಾಗಿದೆ.

    ಶಬರಿಮಲೆ: ನಾನು 50 ವರ್ಷದವಳಾದಾಗ ಮತ್ತೆ ಬರುತ್ತೇನೆ - 9 ವರ್ಷದ ಬಾಲಕಿ
   ಶಬರಿಮಲೆಗೆ ಶುಕ್ರವಾರ ಭೇಟಿ ನೀಡಿದ್ದ 9 ವರ್ಷದ ಬಾಲಕಿಯೊಬ್ಬಳು, ನನಗೆ 50 ವರ್ಷ ತುಂಬಿದ ನಂತರ ನಾನು ಮತ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಬರುತ್ತೇನೆ ಎಂಬ ಭಿತ್ತಿ ಪತ್ರ ಹಿಡಿದು ಎಲ್ಲರ ಗಮನ ಸೆಳೆದಳು.
    ತಮಿಳುನಾಡಿನ ಮಧುರೈ ಮೂಲದ ಜನನಿ ಎಂಬ ಬಾಲಕಿ ಶುಕ್ರವಾರ  ತನ್ನ ಪೋಷಕರೊಂದಿಗೆ ಅಯ್ಯಪ್ಪ ಸ್ವಾಮಿ ದರ್ಶನ ಪಡೆದಳು. ಸುಪ್ರೀಂ ಕೋಟರ್್ ಆದೇಶದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನನ್ನ ಮಗಳಿಗೆ 10 ವರ್ಷ ತುಂಬಿದ ನಂತರ ದೇವಸ್ಥಾನಕ್ಕೆ ಬರಲ್ಲ. ಅವಳು 50 ವರ್ಷದವಳಾಗುವವರೆಗೆ ಕಾಯುತ್ತಾಳೆ ಎಂದು ಜನನಿ ತಂದೆ ಆರ್ ಸತೀಶ್ ಕುಮಾರ್ ಅವರು ಹೇಳಿದ್ದಾರೆ.
   50 ವರ್ಷ ತುಂಬುವ ಮೊದಲೆ ಅವರು ಮತ್ತೆ ದೇವಸ್ಥಾನಕ್ಕೆ ಬರುವುದು ನನಗೆ ಇಷ್ಟವಿಲ್ಲ ಎಂದು ಸತೀಶ್ ಕುಮಾರ್ ಅವರು ತಿಳಿಸಿದ್ದಾರೆ. ಶಬರಿಮಲೆ ದೇವಸ್ಥಾನಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿದ್ದು, ಈ ನಿಷೇಧ ತೆರವುಗೊಳಿಸಿದ್ದ ಸುಪ್ರೀಂ ಕೋಟರ್್, ಎಲ್ಲಾ ವಯಸ್ಸಿನ ಮಹಿಳೆಯರಿಗೂ ಮುಕ್ತ ಪ್ರವೇಶ ಅವಕಾಶ ಕಲ್ಲಿಸಿದೆ. ಸುಪ್ರೀಂ ಕೋಟರ್್ ಆದೇಶ ಲೆಕ್ಕಿಸದೇ ನೂರಾರು ಭಕ್ತರು ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸದಂತೆ ತಡೆಯುತ್ತಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries