HEALTH TIPS

No title

              ಉದ್ಘಾಟನೆಗೆ ಸಿದ್ಧವಾದ ಗಾಳಿಯಡ್ಕ-ಸಾಗು ರಸ್ತೆ
           ಎರಡು ವರ್ಷದೊಳಗೆ ಸಾಕಾರ ಕಂಡ ಗ್ರಾಮೀಣ ಭಾಗದ ಜನಪರ ರಸ್ತೆ ಸಂಪರ್ಕ
    ಉಪ್ಪಳ: ಆಧುನಿಕ ಕಾಲಘಟ್ಟದಲ್ಲಿ ಜನಸಾಮಾನ್ಯರನ್ನು ರಸ್ತೆಯು ಸಂಪಕರ್ಿಸುತ್ತದೆ ಎಂಬುದು ಸತ್ಯ ಸಂಗತಿ. ಹಲವು ವರ್ಷಗಳಿಂದ ಹಿಂದುಳಿದ ಗ್ರಾಮಕ್ಕೆ ಸಮೀಪವತರ್ಿ ರಸ್ತೆಯ ಮೂಲಕ ಅಭಿವೃದ್ಧಿ ದಿಶೆಯನ್ನು ತೋರಿದ್ದಾರೆ ಜನಪರ ಕಾಳಜಿಯುಳ್ಳ ನಾಯಕರು ಸಹಿತ ಜನಸಾಮಾನ್ಯರು.
   ಬಾಯಾರುಪದವಿನಿಂದ ಗಾಳಿಯಡ್ಕ ಶಾಲೆಯ ಮುಂಭಾಗವಾಗಿ ಸಾಗುವ ಸಾಗು ರಸ್ತೆಯು ಸಜಂಕಿಲವನ್ನು ಸಂಪಕರ್ಿಸುತ್ತದೆ. ಅಂಗನವಾಡಿ,ಶಾಲೆ, ಪೇಟೆ ಸಹಿತ ಧಾಮರ್ಿಕ ಶ್ರದ್ಧಾಕೇಂದ್ರವನ್ನು ಸಂಪಕರ್ಿಸುವ ರಸ್ತೆಯು ಎರಡು ಹೆದ್ದಾರಿಗಳನ್ನು ಬೆಸೆಯುವ ಕೊಂಡಿಯಾಗಿದೆ. ಬಾಯಾರುಪದವು ಪೇಟೆಯಿಂದ ಚೇವಾರಿಗೆ ಸಮೀಪವತರ್ಿ ರಸ್ತೆಯಾದ ಸಾಗು ರಸ್ತೆ ಪ್ರಮುಖ ಸಂಪರ್ಕ ಮಾರ್ಗವಾಗಿದೆ.
   ಶಾಸಕರ ನಿಧಿಯಿಂದ 25 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಹೊಂದಿದ ಗಾಳಿಯಡ್ಕ ಸಾಗು ಆವಳ ಸಜಂಕಿಲ ರಸ್ತೆಯು ಅ.4 ರಂದು ಉದ್ಘಾಟನೆಗೊಳ್ಳಲಿದೆ. ಸ್ಥಳೀಯ ಶಾಸಕ ಪಿ.ಬಿ ಅಬ್ದುಲ್ ರಜಾಕ್ ಎರಡು ಗ್ರಾಮಗಳನ್ನು ಬೆಸೆಯುವ ರಸ್ತೆಯನ್ನು ಉದ್ಘಾಟಿಸಲಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಪೈವಳಿಕೆ ಗ್ರಾ.ಪಂ ಅಧ್ಯಕ್ಷರು, ಗ್ರಾಮಸ್ಥರು ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
  ಜನಪರ ಕಾಳಜಿಯುಳ್ಳ ಗ್ರಾ.ಪಂ ಸದಸ್ಯರು, ಸಮಾಜ ಸೇವಾಸಕ್ತರ ನೆರವು ಸಹಿತ ಗ್ರಾಮಸ್ಥರ ಅವಿರತ ಶ್ರಮದ ಫಲವಾಗಿ ರಸ್ತೆ ಸಂಪರ್ಕ ಯೋಜನೆ ಸಾರ್ಥಕಗೊಂಡಿದೆ. ಎರಡು ವರ್ಷಗಳ ಹಿಂದೆ ಹಲವು ಮಂದಿ ಫಲಾನುಭವಿಗಳು ಸಹಿತ ಸ್ಥಳಿಯರು ರಸ್ತೆ ನಿಮರ್ಾಣಕ್ಕೆ ನೀಡಿದ ಭೂಸ್ಥಳದ ಮೂಲಕ ಸಾಗು ರಸ್ತೆ ಹಾದುಹೋಗುತ್ತದೆ. ಗಾಳಿಯಡ್ಕದಿಂದ ಸುಮಾರು 1.5 ಕಿ.ಮೀ ಯಷ್ಟಿರುವ ಸಾಗು ರಸ್ತೆ ಬಾಯಾರುಪದವು, ಆವಳಮಠ, ಸಜಂಕಿಲ ಅಂಗನವಾಡಿ, ಶಾಲೆ ಹಾಗೂ ಗಾಳಿಯಡ್ಕ ಪ್ರಾಥಮಿಕ ಶಾಲೆ, ಆವಳ ಮಸೀದಿ, ಯಾತ್ರಾ ಸ್ಥಳ ಪೊಸಡಿಗುಂಪೆ ಸಹಿತ ಚೇವಾರಿಗೆ ಸಂಪಕರ್ಿಸುವ ಸಮೀಪವತರ್ಿ ರಸ್ತೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries