HEALTH TIPS

ಯಾವುದೇ ಶೀರ್ಷಿಕೆಯಿಲ್ಲ

             ಬದಿಯಡ್ಕದಲ್ಲಿ ದಸರಾ ಕವಿಗೋಷ್ಠಿ ಮತ್ತು ವಿಶೇಷೋಪನ್ಯಾಸ
             ಅಜ್ಞಾನ ಅವಿವೇಕದ ನಡೆಗೆ ದಸರಾ ಉತ್ತರ : ಸೌಮ್ಯಾ ಪ್ರಸಾದ್
     ಬದಿಯಡ್ಕ: ಅಜ್ಞಾನ ಮತ್ತು ಅವಿವೇಕದ ನಡೆಗಳನ್ನು ಇಲ್ಲದೆ ಮಾಡಿ ಪ್ರಪಂಚಕ್ಕೆ ಒಳಿತಿನ ಮಹತ್ವವನ್ನು ತಿಳಿಸುವ ಉದ್ದೇಶ ದಸರಾ ಆಚರಣೆಯಲ್ಲಿದೆ. ಕನ್ನಡದ ಬಹುಶ್ರುತ ಹಿನ್ನೆಲೆಯಿರುವ ಕಾಸರಗೋಡಿನಲ್ಲಿ ದಸರಾವು ಬಹಳಷ್ಟು ಹಿಂದಿನಿಂದಲೇ ಆಚರಣೆಯಲ್ಲಿದೆ. ಇದು ಇಲ್ಲಿನ ಕನ್ನಡ ಸಂಸ್ಕೃತಿಯ ದ್ಯೋತಕವೂ ಹೌದು. ಆದ ಕಾರಣ ಕಾಸರಗೋಡಿನಲ್ಲಿ ದಸರಾವು ಕೇವಲ ಕನ್ನಡ ಮಾತೃಭಾಷೆಯವರಿಗೆ ಮಾತ್ರ ಸೀಮಿತವಾದ ಹಬ್ಬವಲ್ಲ. ಅದು ಎಲ್ಲರ ಸಂಭ್ರಮ ಸಡಗರದ ಹಬ್ಬವಾಗಿ ಎಂದೆಂದೂ ಆಚರಿಸಲ್ಪಡಬೇಕು ಎಂದು ಸಿರಿಚಂದನ ಕನ್ನಡ ಯುವಬಳಗದ ಜತೆಕಾರ್ಯದಶರ್ಿ, ಸಂಶೋಧನ ವಿದ್ಯಾಥರ್ಿನಿ ಸೌಮ್ಯಾ ಪ್ರಸಾದ್ ಅಭಿಪ್ರಾಯಪಟ್ಟರು. 
    ಬದಿಯಡ್ಕದ ಅಂಬೇಡ್ಕರ್ ವಿಚಾರ ವೇದಿಕೆ, ಬೊಲ್ಪು ಬದಿಯಡ್ಕ ಹಾಗೂ ಸಿರಿಚಂದನ ಕನ್ನಡ ಯುಬಬಳಗ ಕಾಸರಗೋಡು ಈ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ಬದಿಯಡ್ಕದಲ್ಲಿ ನಡೆದ ದಸರಾ ಕವಿಗೋಷ್ಠಿ ಮತ್ತು ವಿಶೇಷೋಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಾಂಸ್ಕೃತಿಕ ಉಪನ್ಯಾಸ ನೀಡಿ ಮಾತನಾಡಿದರು. 
   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸಿರಿಚಂದನ ಕನ್ನಡ ಯುವಬಳಗದ ಮಾರ್ಗದರ್ಶಕ ಡಾ.ರತ್ನಾಕರ ಮಲ್ಲಮೂಲೆ ವಹಿಸಿ ಮಾತನಾಡಿ, ಹಬ್ಬ ಹರಿದಿನಗಳು ಮಾನವೀಯ ಮೌಲ್ಯಗಳನ್ನು, ಭಾವೈಕ್ಯವನ್ನು ಸಾಂಸ್ಕೃತಿಕ ಹಿರಿಮೆಯನ್ನು ಮೂಡಿಸುತ್ತವೆ. ಮೂಲ ಸಂಸ್ಕೃತಿ ಮತ್ತು ನೆಲದ ಪರಂಪರೆಯನ್ನು ನೆನಪಿಸಿಕೊಳ್ಳುವ ಮತ್ತು ಅದರ ಒಳಿತನ್ನು ಅರ್ಥಮಾಡಿಕೊಂಡು ಮುನ್ನಡೆಯುವ ಸದಾಚಾರ ನಮ್ಮಲ್ಲಿ ಸದಾ ಜಾಗೃತವಾಗಿರಬೇಕು. ದಸರಾ ನಾಡಹಬ್ಬದ ಹಿನ್ನೆಲೆಯಲ್ಲಿ ನಡೆಯುತ್ತಿರುವ ವಿಶೇಷ ಕಾರ್ಯಕ್ರಮಗಳಲ್ಲಿ ಭಾಷೆ ಸಂಸ್ಕೃತಿಯ ಒಲವು ಪ್ರತಿಧ್ವನಿಗೊಳ್ಳಬೇಕು. ಸಮಕಾಲೀನ ವಸ್ತುಸ್ಥಿತಿಗಳಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬ ಬರಹಗಾರನಲ್ಲೂ ಮೂಡಿಬರಬೇಕಾಗಿದೆ. ಬರವಣಿಗೆ ಮತ್ತು ಅದಕ್ಕೆ ಪೂರಕವಾದ ಕ್ರಿಯಾತ್ಮಕ ದುಡಿಮೆಗಳಿಂದ ಮಾತ್ರ ಕಾಸರಗೋಡಿನಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿ ಬೆಳೆಸಲು ಸಾಧ್ಯ. ಮಲೆಯಾಳಿ, ತಮಿಳು ಕವಿ ಸಾಹಿತಿಗಳು ತಮ್ಮ ಭಾಷೆ, ಸಂಸ್ಕೃತಿಯ ಬೆಳವಣಿಗೆಗಾಗಿ ಬರಹದ ಮೂಲಕ ಮಾತ್ರವಲ್ಲ, ಕ್ರಿಯಾತ್ಮಕವಾದ ನೆಲೆಯಲ್ಲೂ ದುಡಿಯುವ ಮನಸ್ಥಿತಿಯನ್ನು ಹೊಂದಿದವರು. ಈ ಮನೋಭಾವ ಕಾಸರಗೋಡಿನ ಪ್ರತಿಯೊಬ್ಬ ಕನ್ನಡ ಬರಹಗಾರರಲ್ಲೂ ಮೂಡಬೇಕಾಗಿದೆ. ಕನ್ನಡದಿಂದ ವಿಶೇಷವಾಗಿ ಹೆಚ್ಚೇನನ್ನೂ ಪಡೆಯದ ಬೊಲ್ಪುವಿನ ಪದಾಕಾರಿಗಳು ಕ್ರಿಯಾತ್ಮಕವಾಗಿ ಮಾಡುವ ಕನ್ನಡ ಸೇವೆ ಕಾಸರಗೋಡಿನ ಕನ್ನಡತನಕ್ಕೆ ಶಕ್ತಿಯಾಗಿದೆ. ದಸರಾ ನಾಡಹಬ್ಬದ ಆಚರಣೆಯೂ ಇದಕ್ಕೆ ಪೂರಕವಾಗಿದೆ. ಜಾತಿ, ಮತ, ಧರ್ಮ ಮತ್ತು ಬಣಗಳಿಗೆ ಅತೀತವಾದ ಆಲೋಚನೆ, ದುಡಿಮೆ ಹಾಗೂ ತಳಮಟ್ಟದ ಪ್ರತಿಭೆಗಳಿಗೂ ಸದವಕಾಶವನ್ನೊದಗಿಸುವ ಸನ್ಮನಸ್ಸು ಉತ್ತಮ ನಾಯಕತ್ವದ ಗುಣಗಳು ಎಂದರು.
   ಹರೀಶ್ ಸುಳಾಯ ಒಡ್ಡಂಬೆಟ್ಟು ಅವರ `ಕವಿಗಳು ನಾವು', ಪದ್ಮಾವತಿ ಏದಾರು ಅವರ `ದಸರಾ', ಸಂದೀಪ್ ಬದಿಯಡ್ಕ ಅವರ `ಗರ್ಭಗುಡಿಯೊಳಗೆ', ಶಿವಾನಿ ಶಂಕರ್ ಅವರ `ಬೆಳಕು', ಗಣೇಶ್ ಪೈ ಬದಿಯಡ್ಕ ಅವರ `ಮಳೆ', ಸುಭಾಷ್ ಪೆರ್ಲ ಅವರ `ಉಡಲ್ದ ಬೇನೆ', ರಿತೇಶ್ ಕಿರಣ್ ಕಾಟುಕುಕ್ಕೆ ಅವರ `ನೀನಿಳಿಯೆ ಬೇಗ', ಅಭಿಲಾಷ್ ಪೆರ್ಲ ಅವರ `ನಮ್ಮ ಕಾಸರಗೋಡು' ಕವನಗಳು ಕವಿಗೋಷ್ಠಿಯಲ್ಲಿ ಪ್ರಸ್ತುತಗೊಂಡುವು. ಅಂಬೇಡ್ಕರ್ ವಿಚಾರ ವೇದಿಕೆಯ ರಾಮ ಪಟ್ಟಾಜೆ ಹಾಗೂ ಸಿರಿಚಂದನ ಕನ್ನಡ ಯುವಬಳಗದ ಕೋಶಾಕಾರಿ ವಿನೋದ್ ಕುಮಾರ್ ಬದಿಯಡ್ಕ ಅವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ವಸಂತ ಬಾರಡ್ಕ ಅವರಿಂದ ದಸರಾ ಭಾವಗಾಯನ ನೆರವೇರಿತು. ಬೊಲ್ಪು ಬದಿಯಡ್ಕ ಇದರ ರೂವಾರಿ ಸುಂದರ ಬಾರಡ್ಕ ಸ್ವಾಗತಿಸಿ, ಕಾರ್ಯಕ್ರಮನಿರೂಪಿಸಿದರು. ಸುರೇಖ ಬಿ. ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries