ಯಕ್ಷಗಾನದ ಶಾಸ್ತ್ರೀಯ ಅಭ್ಯಾಸಕ್ಕೆ ಶ್ರದ್ಧೆ ಅಗತ್ಯ : ಎಂ.ದಾಮೋದರ ಶೆಟ್ಟಿ
ಕಾಸರಗೋಡು: ಕನ್ನಡವನ್ನು ಶುದ್ಧ ರೂಪದಲ್ಲಿ ಉಳಿಸುವುದಕ್ಕೆ ಯಕ್ಷಗಾನದ ಉಳಿವು ಅತೀ ಅಗತ್ಯ. ಯಕ್ಷಗಾನ ಉಳಿಯಬೇಕಿದ್ದರೆ ಅದನ್ನು ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಶಾಸ್ತ್ರೀಯವಾಗಿನ ಅಭ್ಯಾಸ ಮಾಡುವುದು ಅಗತ್ಯ. ಇಲ್ಲಿನ ತರಬೇತಿ ಕೇಂದ್ರವು ಈ ಪ್ರಯತ್ನದಲ್ಲಿ ತೊಡಗಿರುವುದು ಸಂತೋಷದ ವಿಚಾರ ಎಂದು ಕನರ್ಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ನ್ಯಾಯವಾದಿ ಎಂ.ದಾಮೋದರ ಶೆಟ್ಟಿ ಹೊಸಂಗಡಿ ಅಭಿಪ್ರಾಯಪಟ್ಟರು.
ಕೂಡ್ಲು ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರದ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ನಾಟ್ಯ ತರಗತಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕತೆಯ ದ್ಯೋತಕವಾದ ಯಕ್ಷಗಾನಕ್ಕೆಇಂದು ಅಂತರಾಷ್ಟ್ರೀಯ ಮನ್ನಣೆ ಇದೆ. ಕಲಾವಿದರ ಪರಿಸ್ಥಿತಿ ಉತ್ತಮ ರೀತಿಯಲ್ಲಿದೆ. ಆದರೆಪರಂಪರೆಯನ್ನು ಉಳಿಸುವ-ಬೆಳೆಸುವ ನಿಟ್ಟಿನಲ್ಲಿ ಪ್ರಯತ್ನಗಳಾಗಬೇಕು ಎಂದು ಅವರು ತಿಳಿಸಿದರು.
ಶ್ರೀ ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನ್ಭೋಗ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೋಪಾಲಕೃಷ್ಣ ಬಲ್ಯಾಯ ಕೂಡ್ಲು ಅಧ್ಯಕ್ಷತೆ ವಹಿಸಿದರು. ಪೆರ್ಲದಪಡ್ರೆಚಂದು ಸ್ಮಾರಕ ಯಕ್ಷಗಾನ ಕೇಂದ್ರದ ನಿದರ್ೆಶಕ, ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಟ್ಯಾಚಾರ್ಯ ಸಬ್ಬಣ್ಣಕೋಡಿ ರಾಮ ಭಟ್ ಅವರು ತರಗತಿಗಳನ್ನು ನಡೆಸಲಿದ್ದು, ನಾಟ್ಯ ಅಭ್ಯಾಸದ ವಿಧಾನಗಳನ್ನು ವಿವರಿಸಿದರು. ಕೂಡ್ಲು ಮೇಳದ ವ್ಯವಸ್ಥಾಪಕ ರವಿರಾಜ ಅಡಿಗ ಕೂಡ್ಲು ಶುಭಹಾರೈಸಿದರು.
ಚಿನ್ಮಯಿ ಪ್ರಾರ್ಥನೆ ಹಾಡಿದರು. ಕಿಶೋರ್ ಕೂಡ್ಲು ಸ್ವಾಗತಿಸಿ, ರಂಜಿತ್ ಗೋಳಿಯಡ್ಕ ವಂದಿಸಿದರು.