ಪ್ರತಿಭೆಗಳ ಅನಾವರಣ ಮತ್ತು ಅಭಿನಂದನೆ ಔಚಿತ್ಯಪೂರ್ಣ : ಉಳಿಯತ್ತಡ್ಕ
ಕಾಸರಗೋಡು: ಸಾಹಿತ್ಯ, ಸಂಸ್ಕೃತಿ ಸೌಹಾರ್ದತೆಗೆ ದಸರಾ ಉತ್ಸವ ಪ್ರಯೋಜನಕಾರಿ. ಪ್ರತಿಭೆಗಳ ಅನಾವರಣ ಮತ್ತು ಅಭಿನಂದನೆ ಈ ಸಂದರ್ಭದಲ್ಲಿ ಸಕಾಲಿಕ. ಕನ್ನಡ ಭುವನೇಶ್ವರಿಯ ಆರಾಧನೆ ಕನ್ನಡ ನಾಡಿನಿಂದ ಬೇರ್ಪಟ್ಟ ಕಾಸರಗೋಡಿನ ಕನ್ನಡಿಗರಿಗೂ ಅನ್ವಯವಾಗುತ್ತದೆ. ಆ ಮೂಲಕ ನಾಡ ದೇವಿಯ ಆರಾಧನೆ ಅಚ್ಚಗನ್ನಡ ನೆಲವಾದ ಕಾಸರಗೋಡಿನಲ್ಲೂ ನಡೆಯುತ್ತಿರುವುದು ಔಚಿತ್ಯಪೂರ್ಣವಾಗಿದೆ ಎಂದು ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಹೇಳಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿಯ ಆಶ್ರಯದಲ್ಲಿ ಪಾರೆಕಟ್ಟೆಯ ಕನ್ನಡ ಗ್ರಾಮದಲ್ಲಿ ನಡೆದ `ಕಾಸರಗೋಡು ದಸರಾ' ಸಮಾರೋಪ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ಸವಗಳು ಮನಸ್ಸನ್ನು ಬೆಸೆಯುವ ಕಾರ್ಯದ ಜೊತೆಗೆ ಮಾನವೀಯ ಮೌಲ್ಯಗಳನ್ನು ಉದ್ದೀಪನಗೊಳಿಸುತ್ತದೆ. ನಂಬಿಕೊಂಡು ಬಂದಿರುವ ಆಚಾರ ವಿಚಾರಗಳಿಗೆ ಇಂದು ಧಕ್ಕೆ ಬರುತ್ತಿರುವುದನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಮೂಲ ಸಂಸ್ಕೃತಿ ಉಳಿಸಿಕೊಳ್ಳಲು ದಸರಾ ಉತ್ಸವಗಳು ನೆರವಾಗುತ್ತದೆ ಎಂದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಡೆಸುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ ಎಂದರು.
ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಸಂಸ್ಥೆಗಳು ಹಲವು ವರ್ಷಗಳಿಂದ ಕಾಸರಗೋಡು ದಸರಾ ಆಚರಿಸುತ್ತಾ ಬಂದಿದ್ದು, ಈ ಮೂಲಕ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇದರ ಕೊಡುಗೆ ಅಪಾರವಾದುದು. ಇಂತಹ ಸಂಸ್ಥೆಗಳು ನಾಡಿನಾದ್ಯಂತ ಹುಟ್ಟಿಕೊಳ್ಳಬೇಕು ಎಂದರು.
ಕವಯತ್ರಿ, ಸಿರಿಚಂದನ ಕನ್ನಡ ಯುವ ಬಳಗದ ಜೊತೆ ಕಾರ್ಯದಶರ್ಿ ಸೌಮ್ಯಾ ಪ್ರಸಾದ್ ಅವರು `ಕಾಸರಗೋಡು ದಸರಾ' ಬಗ್ಗೆ ಮಾತನಾಡಿ ದಸರಾ ಕಾಸರಗೋಡಿನ ಕನ್ನಡ ಸಂಸ್ಕೃತಿಯ ದ್ಯೋತಕ. ದಸರಾ ಉತ್ಸವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಜೊತೆಗೆ ಸಂಸ್ಕೃತಿ, ಸಾಹಿತ್ಯ, ಕಲೆಗಳನ್ನು ಉಳಿಸಿ ಬೆಳೆಸಲು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ನಡೆಸಿಕೊಂಡು ಬರುತ್ತಿರುವ ಇಂತಹ ಉತ್ಸಹಗಳು ಮಾದರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಕಾಸರಗೋಡು ನಗರಸಭಾ ಸದಸ್ಯ ಶಂಕರ, ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದಶರ್ಿ ಕೆ.ಭಾಸ್ಕರ, ಎಸ್.ಎಲ್.ಭಾರದ್ವಾಜ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ `ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈ' ಚಿತ್ರದಲ್ಲಿ ಅಭಿನಯಿಸಿದ ಕಾಸರಗೋಡಿನ ಕಲಾವಿದರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರನ್ನು ಅಭಿನಂದಿಸಲಾಯಿತು.
ದಸರಾ ಮಹೋತ್ಸವದ ಅಂಗವಾಗಿ ಸ್ಥಳೀಯ ಯುವ ಪ್ರತಿಭೆಗಳಿಂದ ನಾಟ್ಯ ವೈಭವ, ಸಂಗೀತ ಕಾರ್ಯಕ್ರಮ ಮತ್ತು ದಾಸ ಸಂಕೀರ್ತನೆ, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ ಅವರಿಂದ ಹರಿಕಥೆ ಪ್ರಸ್ತುತಗೊಂಡಿತು.
ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಪ್ರಾಸ್ತಾವಿಕ ನುಡಿದರು. ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಸ್ವಾಗತಿಸಿ, ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.