HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಮುಜುಂಗಾವು ವಿದ್ಯಾಪೀಠದಲ್ಲಿ ವಿಜಯದಶಮಿ ಆಚರಣೆ
    ಕುಂಬಳೆ20: ಮುಜುಂಗಾವು ಶ್ರೀ ಭಾರತೀ ವಿದ್ಯಾಪೀಠದಲ್ಲಿ  ಪ್ರತಿವರ್ಷದಂತೆ ವೇದಮೂತರ್ಿ ಕೋಣಮ್ಮೆ ಮಹಾದೇವ ಭಟ್ ಅವರ ನೇತೃತ್ವದಲ್ಲಿ ನಾರಾಯಣ ಮಂಗಲದಲ್ಲಿರುವ ಕಿಳಿಂಗಾರು ವೇದಮೂತರ್ಿ ಗಣೇಶಭಟ್ ಅವರು ಶಾರದಾಪೂಜೆ ಮಂಗಳಾರತಿ, ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಪ್ರಾರಂಭ, ಗ್ರಂಥಾಲಯದಲ್ಲಿ ಪುಸ್ತಕ ಪೂಜೆ, ಕಂಪ್ಯೂಟರ್ ಪೂಜೆ, ಶಾಲಾಬಸ್ಸು ವಾಹನಗಳ ಪೂಜೆ  ಮೊದಲಾದುವುಗಳನ್ನು ಕ್ರಮಬದ್ಧವಾಗಿ ನಡೆಸಿಕೊಟ್ಟರು.
   ಈ ಸಂದರ್ಭದಲ್ಲಿ ವಿದ್ಯಾಪೀಠದ ಮಕ್ಕಳಿಂದ ಸಾಮೂಹಿಕವಾಗಿ ಭಜನ ರಾಮಾಯಣ, ಸರಸ್ವತಿ ಭಜನೆ ನಡೆಯಿತು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಸಮಿತಿ ಅಧ್ಯಕ್ಷರಾದ ಎಸ್.ಎನ್.ರಾವ್. ಮುನ್ನಿಪ್ಪಾಡಿ, ವಲಯಾಧ್ಯಕ್ಷ ಶರ್ಮ ಮಾಸ್ಟ್ರು  ಸೇಡಿಗುಳಿ, ಆಥರ್ಿಕ ಸಮಿತಿ ಅಧ್ಯಕ್ಷ ಚಂದ್ರಶೇಖರ ಭಟ್ ಎಯ್ಯೂರಮೂಲೆ, ಆಡಳಿತಾಧ್ಯಕ್ಷ ಶ್ಯಾಂಭಟ್ ದಭರ್ೆಮಾರ್ಗ, ಮುಖ್ಯಶಿಕ್ಷಕಿ ಚಿತ್ರಾಸರಸ್ವತಿ, ಸಂಸ್ಕೃತ ಶಿಕ್ಷಕ ವಿಜಯ, ಗ್ರಂಥಪಾಲಿಕೆ ವಿಜಯಾಸುಬ್ರಹ್ಮಣ್ಯ ಹಾಗೂ ಶಿಕ್ಷಕ ವರ್ಗದವರು  ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries