HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                  ಕಲೆ ಸಾಹಿತ್ಯಗಳು ಕಲಿಕೆಗೆ ಪೂರಕ= ಡಾ. ಪೆರ್ಲ
    ಬದಿಯಡ್ಕ: ಕಲೆ ಸಾಹಿತ್ಯ ಸಂಗೀತ ಮೊದಲಾದವು ವಿದ್ಯಾಥರ್ಿಗಳ ಶಾಲಾ ಕಲಿಕೆಗೆ ಪೂರಕವಾಗಿ ವ್ಯಕ್ತಿತ್ವ ವಿಕಸನಕ್ಕೆ ಸಹಕರಿಸುತ್ತವೆ ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿದರ್ೇಶಕ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
    ಇಲ್ಲಿಗೆ ಸಮೀಪದ ಬಳ್ಳಪದವಿನಲ್ಲಿರುವ ನಾರಾಯಣೀಯಂ ಸಮುಚ್ಚಯದ ವೀಣಾವಾದಿನೀ ಸಂಗೀತ ಶಾಲೆಯಲ್ಲಿ ವಿದ್ಯಾದಶಮಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತಾಡುತ್ತಿದ್ದರು.
    ಇಂದಿನ ಬಹುತೇಕ ಪೋಷಕರು ಎಸ್ಸೆಸೆಲ್ಸಿ ಮತ್ತು ಪಿಯುಸಿ ಹಂತದಲ್ಲಿ ಕಲಿಕೆಯ ಕುರಿತು ಮಕ್ಕಳ ಮೇಲೆ ವಿಪರೀತ ಒತ್ತಡ ಹೇರುತ್ತಿದ್ದಾರೆ. ಆದರೆ ದಿನದ ಇಪ್ಪತ್ತನಾಲ್ಕು ಗಂಟೆಯೂ ಶಾಲೆಯ ಕಲಿಕೆಯನ್ನಷ್ಟೇ ಮಾಡುತ್ತ ಕೂರಲು ಸಾಧ್ಯವಿಲ್ಲ. ವಿದ್ಯಾಥರ್ಿಗಳು ಕಲೆ ಸಾಹಿತ್ಯ ಮತ್ತು ಸಂಸ್ಕೃತಿ ಸಂಬಂಧವಾದ ವಿಚಾರಗಳಲ್ಲಿ ತೊಡಗಿಸಿಕೊಂಡರೆ ಅದು ಕಲಿಕೆಗೆ ಪೂರಕವಾಗುತ್ತದೆ ಮತ್ತು ವ್ಯಕ್ತಿತ್ವ ವಿಕಸನವೂ ಆಗುತ್ತದೆ ಎಂದು ಡಾ. ಪೆರ್ಲ ಅವರು ಹೇಳಿದರು.
    ಕಲಾ ಪೋಷಕ ಮಂಗಳೂರಿನ ಶ್ರೀಪತಿ ಶಬರಾಯ, ಪಿಟೀಲು ವಾದಕ ಪ್ರಭಾಕರ ಕುಂಜಾರು, ವೀಣಾವಾದಿನಿ ಸಂಚಾಲಕ ಮತ್ತು ಸಂಗೀತ ಗುರುಗಳಾದ ಬಳ್ಳಪದವು ಯೋಗೀಶ ಶಮರ್ಾ ಅವರು ವೇದಿಕೆಯಲ್ಲಿದ್ದರು.
    ಆರಂಭದಲ್ಲಿ ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ ಸರಸ್ವತಿ ಪೂಜೆ ಜರಗಿತು. ಅನಂತರ ನೂತನವಾಗಿ ಸೇರಿದ ವಿದ್ಯಾಥರ್ಿಗಳಿಗೆ ಸಂಗೀತಾಭ್ಯಾಸ ನಡೆಸಲಾಯಿತು.
   ಕಾರ್ಯಕ್ರಮದ ಕೊನೆಯಲ್ಲಿ ಕುಮಾರಿ ರಮ್ಯಾ ನಂಬೂದಿರಿ ಅವರಿಂದ ಸಂಗೀತ ಕಚೇರಿ ಜರಗಿತು. ಬಳಿಕ ಕುಮಾರಿ ಧನಶ್ರೀ ಶಬರಾಯ ಅವರಿಂದ ಪಿಟೀಲು ವಾದನದ ಕಚೇರಿ ಏರ್ಪಟ್ಟಿತು. ಪ್ರಭಾಕರ ಕುಂಜಾರು ಮತ್ತು ಬಳ್ಳಪದವು ಯೋಗೀಶ ಶಮರ್ಾ ಅವರು ಪಕ್ಕವಾದ್ಯದಲ್ಲಿ ಸಹಕರಿಸಿದರು.
   ಆಗಮ ಪೆರ್ಲ ಸ್ವಾಗತಿಸಿ, ಅಥರ್ಾ ಪೆರ್ಲ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries