ಜ್ಞಾನ ಸಂಪತ್ತು ಸರ್ವಶ್ರೇಷ್ಠ ಸಂಪತ್ತು- ಕೊಂಡೆವೂರು ಶ್ರೀ
ಉಪ್ಪಳ: ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಶರನ್ನವರಾತ್ರಿಯ ಅಂಗವಾಗಿ ಶುಕ್ರವಾರ `ವಿಜಯದಶಮಿ' ಯ ಪ್ರಾತ:ಕಾಲ `ಶ್ರೀ ಗಾಯತ್ರೀ ದೇವಿಗೆ ಸೀಯಾಳಾಭಿಷೇಕ' ಜರಗಿತು. ಬಳಿಕ `ಕ್ಷೇತ್ರ ತುಂಬಿಸುವ' ತೆನೆಪೂಜೆಯನ್ನು ಶ್ರೀಗಳು ನೆರವೇರಿಸಿದರು. ಬಳಿಕ ಪರಮಪೂಜ್ಯರು ಚಿಣ್ಣರಿಗೆ ವಿದ್ಯಾರಂಭವನ್ನು ಮಾಡಿಸಿ ಆಶೀರ್ವದಿಸಿದರು.
ಮಧ್ಯಾಹ್ನ ಮಹಾಪೂಜೆ ಬಳಿಕ ನಡೆದ ಸರಳ ಸಭೆಯಲ್ಲಿ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಶ್ರೀದೇವಿಯನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಿ ಎಲ್ಲಕ್ಕಿಂತ ಶ್ರೇಷ್ಠವಾದ ಜ್ಞಾನಸಂಪತ್ತನ್ನು ಪಡೆಯೋಣ ಎಂದು ನೆರೆದ ಭಕ್ತಸಮೂಹವನ್ನು ಆಶೀರ್ವದಿಸಿದರು.
ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ವಿದ್ಯಾಥರ್ಿಗಳು, ಭಕ್ತಾದಿಗಳು ಮೆರವಣಿಗೆಯಲ್ಲಿ ಸಾಗಿ ಆಶ್ರಮ ಪರಿಸರದ ಕೆರೆಯಲ್ಲಿ ಶ್ರೀ ಶಾರದಾ ಜಲಸ್ತಂಭನ ನಡೆಯಿತು. ಕುಂಬಳೆಯ ವೇದಮೂತರ್ಿ ಹರಿನಾರಾಯಣ ಮಯ್ಯರು ಧಾಮರ್ಿಕ ಕಾರ್ಯಕ್ರಮಗಳ ಪೌರೋಹಿತ್ಯವನ್ನು ವಹಿಸಿದ್ದರು. ಶ್ರೀ ಸ್ವಾಮೀಜಿಯರು ಸೇರಿದ ಸಮಸ್ತ ಭಕ್ತಬಾಂಧವರಿಗೆ ಮಹಾಮಂತ್ರಾಕ್ಷತೆಯನ್ನು ಅನುಗ್ರಹಿಸಿದರು.