HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                       ನೀಚರ್ಾಲಿನಲ್ಲಿ ಅಯ್ಯಪ್ಪ ನಾಮಸಂಕೀರ್ತನಾ ಯಾತ್ರೆ
                          ಮದ್ಯದಂಗಡಿಯ ವಿಷಯದಲ್ಲಿ ತೋರಿದ ಆಸಕ್ತಿ ಈಗೇಕಿಲ್ಲ?-ಪ್ರವೀಣ್ ಕೋಡೋತ್
     ಬದಿಯಡ್ಕ: ರಾಷ್ಟ್ರದ ಪರಮೋಚ್ಚ ನ್ಯಾಯಾಲಯ ಈ ಹಿಂದೆ ರಾಷ್ಟ್ರೀಯ ಹೆದ್ದಾರಿಗಳ ಸಮೀಪದಲ್ಲಿರುವ ಮದ್ಯದಂಗಡಿಗಳನ್ನು ಮುಚ್ಚಬೇಕೆಂಬ ಆದೇಶ ನೀಡಿದಾಗ ಕೇರಳದಲ್ಲಿ ರಾಷ್ಟ್ರೀಯ ಹೆದ್ದಾರಿಗಳೇ ಇಲ್ಲವೆಂದು ಬಾಲಿಶ ವರದಿ ನೀಡಿ, ಕೂಡಲೇ ಆದೇಶದ ಬಗ್ಗೆ ಮೇಲ್ಮನವಿ ನೀಡಿದ ರಾಜ್ಯ ಸರಕಾರ ಇದೀಗ ಸನಾತನ ನಂಬಿಕೆಗಳ ಪುಣ್ಯಭೂಮಿಯಾದ ಶಬರಿಮಲೆ ಶ್ರೀಧರ್ಮಶಾಸ್ತಾ ಕ್ಷೇತ್ರದ ಮಹಿಳಾ ಪ್ರವೇಶದ ಬಗ್ಗೆ ನ್ಯಾಯಾಲಯ ನೀಡಿದ ತೀಪರ್ಿಗೆ ಮೇಲ್ಮನವಿ ನೀಡಲು ಇದುವರೆಗೂ ಉತ್ಸುಕತೆ ತೋರದ ಸರಕಾರದ ನಿಲುವು ಏನೆಂಬುದು ಸ್ಪಷ್ಟವಾಗುತ್ತಿದೆ. ಪ್ರಾಚೀನ ಪಾರಂಪರಿಕ ನಂಬಿಕೆಯ ಸತ್ಯಾಸತ್ಯತೆಯನ್ನು ಅಥರ್ೈಸದ ಇಂತಹ ಸರಕಾರ ನಮ್ಮನ್ನಾಳುವುದು ದುದರ್ೈವ ಎಂದು ಹಿಂದೂ ಐಕ್ಯವೇದಿಯ ಮುಖಂಡ ಪ್ರವೀಣ್ ಕೋಡೋತ್ ಹೇಳಿದರು. 
ಅವರು ಗುರುವಾರ ನೀಚರ್ಾಲು ಅಯ್ಯಪ್ಪ ಭಕ್ತವೃಂದದ ವತಿಯಿಂದ ನೀಚರ್ಾಲು ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ನಡೆದ `ಶಬರಿಮಲೆ ಉಳಿಸಿ' ನಾಮ ಜಪ ಯಾತ್ರೆಯ ಸಭಾಕಾರ್ಯಕ್ರಮದಲ್ಲಿ ಭಕ್ತರನ್ನುದ್ದೇಶಿಸಿ ಮಾತನಾಡಿದರು.
  ಸನಾತನ ಭಾರತೀಯ ಸಂಸ್ಕಾರ, ಆಚಾರಗಳಿಗೆ ಅತ್ಯಂತ ಮಹತ್ವವಿದೆ. ಹಿಂದೂಧರ್ಮದಲ್ಲಿರುವ ಯಾವ ಆಚಾರವೇ ಇರಲಿ ಅದಕ್ಕೊಂದು ಸಮರ್ಪಕವಾದ ಹಿನ್ನೆಲೆಯಿದೆ. ಅಯ್ಯಪ್ಪ ಸ್ವಾಮಿಯ ಆಚಾರ ಅನುಷ್ಠಾನಗಳ ಸಂರಕ್ಷಣೆಗಿರುವ ಹೋರಾಟದಲ್ಲಿ ಆಬಾಲವೃದ್ಧ ಜನರು ಜಾತಿ ಮತ ರಾಜಕೀಯವನ್ನು ಮರೆತು ಒಂದುಗೂಡುತ್ತಿದ್ದಾರೆ. ಹಿಂದುಗಳ ಪರಿಷ್ಕೃತ ನಂಬಿಕೆ, ಆಚಾರಗಳ ಹಿಂದೆ ವ್ಯಾಪಕ ಅರ್ಥಗಳಿವೆ. ಅಲ್ಲಿ ತೀಮರ್ಾನ ಕೈಗೊಳ್ಳಬೇಕಾಗಿರುವುದು ಭಕ್ತ ಜನಸಮೂಹವಾಗಿದೆ. ಶ್ರೀರಾಮಚಂದ್ರನು ಆಯುಧದ ಮೂಲಕ ರಾವಣ ಕುಂಭಕರ್ಣರನ್ನು ಸಂಹಾರ ಮಾಡಿದಂತೆ, ಕಲಿಯುಗದಲ್ಲಿ ಸಂಘಟಿತವಾದ ಶಕ್ತಿಯ ಮೂಲಕ ಭಕ್ತರೆಲ್ಲ ಒಂದಾಗಿ ಹೋರಾಡಬೇಕಾಗಿದೆ ಎಂದರು.
   ಗುರುಸ್ವಾಮಿಗಳಾದ ತಿಮ್ಮಪ್ಪ ಗುರುಸ್ವಾಮಿ, ನಾರಾಯಣ ಮೊಳೆಯಾರ್, ಸುಬ್ರಹ್ಮಣ್ಯ, ರಮೇಶ್ ಉಪಸ್ಥಿತರಿದ್ದರು.
ಶಬರಿಮಲೆ ಶ್ರೀ ಅಯ್ಯಪ್ಪ ಕ್ಷೇತ್ರದ ರಕ್ಷಣೆಗಾಗಿ ಪ್ರತಿಭಟನಾ ರೂಪವಾಗಿ ಶ್ರೀಅಯ್ಯಪ್ಪ ಸ್ವಾಮಿ ನಾಮಸ್ಮರಣೆಯೊಂದಿಗೆ ಏಣಿಯಪರ್ು ಹನುಮಾನ್ ನಗರದ ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆಯ ಪರಿಸರದಿಂದ ಸಂಜೆ ನಾಮಸಂಕೀರ್ತನಾ ಯಾತ್ರೆ ಆರಂಭವಾಗಿ, ಬೇಳ ವಿಷ್ಣುಮೂತರ್ಿ ನಗರದಿಂದ ನೀಚರ್ಾಲು ಪೇಟೆಯಾಗಿ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದ ಪರಿಸರದಲ್ಲಿ ಸಮಾಪ್ತಿಯಾಯಿತು. ಈ ಸಂದರ್ಭದಲ್ಲಿ ರವಿ ಮಾಸ್ತರ್, ಸುಧಾಮ ಮಾಸ್ತರ್, ಗಣೇಶ ಕೃಷ್ಣ ಅಳಕ್ಕೆ ಮೊದಲಾದವರು ನಾಮಸಂಕೀರ್ತನಾ ಯಾತ್ರೆಯ ನೇತೃತ್ವ ವಹಿಸಿದ್ದರು. ಅಯ್ಯಪ್ಪ ಭಕ್ತರು ಸಹಿತ ಸಾರ್ವಜನಿಕರು ಅಸಂಖ್ಯ ಸಂಖ್ಯೆಯಲ್ಲಿ ಜೊತೆಗಿದ್ದು ಯಶಸ್ವಿಗೊಳಿಸಿದರು.
          ಇಂದು (ಅ.12) ಬದಿಯಡ್ಕದಲ್ಲಿ :-
    ಶಬರಿಮಲೆ ಆಚಾರ ಉಲ್ಲಂಘನೆಗೆ ಷಡ್ಯಂತ್ರ ನಡೆಸಿದ ಕೇರಳ ಸರಕಾರದ ಹಿಂದೂ ವಿರೋಧಿ ಧೋರಣೆಗೆದುರಾಗಿ 4 ಗಂಟೆಗೆ ಪ್ರತಿಭಟನಾ ಮೆರವಣಿಗೆ, ಹಾಗೂ ಬದಿಯಡ್ಕದಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಹಿಂದೂ ನೇತಾರರಾದ ಪ್ರವೀಣ್ ಕೋಡೋತ್, ಕುಮಾರಿ ಚೈತ್ರ ಕುಂದಾಪುರ, ಮುರಳೀಕೃಷ್ಣ ಹಸಂತಡ್ಕ ಪ್ರಮುಖ ಭಾಷಣ ಮಾಡುವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries