HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                 ಓದುವ ಹವ್ಯಾಸ ಬೆಳೆಸಿಕೊಂಡರೆ ಉತ್ತಮ ನಾಗರಿಕನಾಗಲು ಸಾಧ್ಯ : ಅಬ್ದುಲ್ ಹಮೀದ್
     ಪೆರ್ಲ: ಗ್ರಂಥಾಲಯಗಳಿಗೆ ತೆರಳಿ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದರಿಂದ ವ್ಯಕ್ತಿ ಸಮಾಜದಲ್ಲಿ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯವೆಂದು ಪಡ್ರೆ ಗ್ರಾಮಾಧಿಕಾರಿ ಅಬ್ದುಲ್ ಹಮೀದ್ ಅಭಿಪ್ರಾಯಪಟ್ಟರು.
   ಅವರು ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಎನ್ಎಸ್ಎಸ್ ನೇತೃತ್ವದಲ್ಲಿ ವಿದ್ಯಾಥರ್ಿಗಳೇ ಪುಸ್ತಕಗಳನ್ನು ಒಟ್ಟು ಸೇರಿಸಿ ನೂತನವಾಗಿ ನಿಮರ್ಿಸಿದ ತೆರೆದ ಗ್ರಂಥಾಲಯ(ಓಪನ್ ಲೈಬ್ರೆರಿ)ವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು.
    ಗ್ರಂಥಾಲಯಗಳನ್ನು ಸದುಪಯೋಗಗೊಳಿಸಿದರೆ ಜ್ಞಾನಾರ್ಜನೆ ವೃದ್ಧಿಸುವುದು ಹಾಗು ಒಳ್ಳೆಯ ಭಾವನೆ, ಸಮೃದ್ಧ ವಾತಾವರಣ ಮೂಡುತ್ತದೆ. ತನ್ಮೂಲಕ ಜೀವನವು ಹಸನಾಗುತ್ತದೆ ಎಂದರು. ವಿಶ್ವದ ಹಲವು ಮಹಾನ್ ವ್ಯಕ್ತಿಗಳ ಸಾಧನೆಗೆ ಅವರ ಓದುವ ಹವ್ಯಾಸ ಪೂರಕವಾಗಿತ್ತು ಎಂದು ಅಬ್ರಹಾಂ ಲಿಂಕನ್ ಅವರನ್ನು ಉದಾಹರಿಸಿದರು.
   ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಸಂಚಾಲಕ ಮಿತ್ತೂರು ಪುರುಷೋತ್ತಮ ಭಟ್ ಅವರು, ಬಾಲ್ಯದಲ್ಲೇ ವಿದ್ಯಾಥರ್ಿಗಳು ಓದುವ ಹವ್ಯಾಸವನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ಗ್ರಂಥಾಲಯ ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದ ಎನ್ಎಸ್ಎಸ್ ತಂಡವನ್ನು ಅವರು ಈ ಸಂದರ್ಭದಲ್ಲಿ ಅಭಿನಂದಿಸಿದರು. ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ತೆರೆದ ಗ್ರಂಥಾಲಯಕ್ಕೆ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಿದ್ಯಾಥರ್ಿನಿಯರು ಮಹಿಳಾ ಮೊಬೈಲ್ ದುರುಪಯೋಗದ ಬಗ್ಗೆ ಏಕ ಪಾತ್ರಾಭಿನಯವನ್ನು ನಡೆಸಿಕೊಟ್ಟರು. ಎನ್ಎಸ್ಎಸ್ ಯೋಜನಾಧಿಕಾರಿ ಮಹೇಶ್ ಏತಡ್ಕ ಸ್ವಾಗತಿಸಿ, ಅರ್ಥಶಾಸ್ತ್ರ ಪ್ರಾಧ್ಯಾಪಿಕೆ ವಾಣಿ ಕೆ. ವಂದಿಸಿದರು. ಸಮಾಜ ಶಾಸ್ತ್ರ ಅಧ್ಯಾಪಕ ರಾಜೇಶ್ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು.
   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries