HEALTH TIPS

ಯಾವುದೇ ಶೀರ್ಷಿಕೆಯಿಲ್ಲ

                ಉಯಿತ್ತಡ್ಕದಲ್ಲಿ ನಾಮಜಪ ಮೆರವಣಿಗೆ
      ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸಿದರೆ ನಾವು ಸುಮ್ಮನಿರಲಾರೆವು-ರವೀಶತಂತ್ರಿ
        ಮುಳ್ಳೇರಿಯ: ಸುಪ್ರೀಂ ಕೋಟರ್ಿನ ತೀಪರ್ುಗಳು ಹಿಂದೂಗಳಿಗೆ ಎದುರಾಗಿದೆ. ನಮ್ಮ ಆಚಾರ ಅನುಷ್ಠಾನಗಳನ್ನು ನಾವು ಸಂರಕ್ಷಿಸಬೇಕು. ಅಯ್ಯಪ್ಪ ಭಕ್ತರು ಒಗ್ಗೂಡಿದರೆ ಯಾರಿಗೂ ತಡೆಯಲು ಸಾಧ್ಯವಿಲ್ಲ. ಶ್ರೀ ಶಬರಿಮಲೆ ಸ್ತ್ರೀ ಪ್ರವೇಶದ ಕುರಿತು ಕೇರಳ ಮುಖ್ಯಮಂತ್ರಿಯವರು ತಪ್ಪು ಮಾಡಿದ್ದಾರೆ. ತಾವು ಮಾಡಿದ  ತಪ್ಪಿನ ಪ್ರತಿಫಲವನ್ನು ಅವರು ಖಂಡಿತಾ ಅನುಭವಿಸಲಿದ್ದಾರೆ. ಹಿಂದೂಗಳ ಭಾವನೆಗಳಿಗೆ ಘಾಸಿಗೊಳಿಸಿದರೆ ನಾವು ಸುಮ್ಮನಿರಲಾರೆವು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ. ಹಿಂದೂ ದೇಗುಲಗಳಿಂದ ಲಭಿಸುವ ಹಣವು ಧರ್ಮಕ್ಕಾಗಿ ಉಪಯೋಗಿಸಲು ಉಪಯೋಗಿಸಲಾಗುತ್ತಿಲ್ಲ. ಹೀಗಾಗಿ ದೇವಸ್ವಂ ಬೋಡರ್ಿನ ಆಡಳಿತೆಗೆ ಒಳಪಟ್ಟ ದೇಗುಲಗಳಿಗೆ ಕಾಣಿಕೆ ಹಾಕುವ ಅಗತ್ಯವಿಲ್ಲ ಎಂದು ಭಕ್ತರಿಗೆ ಕರೆ ನೀಡಿದರು.
    ಶ್ರೀ ಶಬರಿಮಲೆ ಕ್ಷೇತ್ರ ಆಚಾರ ಅನುಷ್ಠಾನಗಳನ್ನು ಸಂರಕ್ಷಿಸಬೇಕು ಎಂಬ ಧ್ಯೇಯದೊಂದಿಗೆ ಉಯಿತ್ತಡ್ಕ, ಕುಂಟಾರು ಅಯ್ಯಪ್ಪ ಸೇವಾಸಂಘದ ಆಶ್ರಯದಲ್ಲಿ ಬ್ರಹ್ಮಶ್ರೀ ವಾಸುದೇವ ತಂತ್ರಿಯವರ ಮಾರ್ಗದರ್ಶನದಲ್ಲಿ, ಬ್ರಹ್ಮಶ್ರೀ ರವೀಶ ತಂತ್ರಿಯವರ ನೇತೃತ್ವದಲ್ಲಿ, ಯಾದವ ಗುರುಸ್ವಾಮಿಯವರ ಉಪಸ್ಥಿತಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ನಾಮಜಪ ಘೋಷಯಾತ್ರೆಯು ಭಾನುವಾರ ನಡೆಯಿತು.
 ನಾಮಜಪಯಾತ್ರೆಯು ಉಯಿತ್ತಡ್ಕ ಶ್ರೀ ಮೂಕಾಂಬಿಕಾ ಭಜನಾ ಮಂದಿರ ನಾಮಜಪ ಮೆರವಣಿಗೆಯು ಹೊರಟು ಕುಂಟಾರು ಮಾರ್ಗವಾಗಿ ಸಾಗಿ ಕುಂಟಾರು ಶ್ರೀಕ್ಷೇತ್ರದ ವರೆಗೆ ತಲಪಿ ಕುಂಟಾರು ಶ್ರೀ ಅಯ್ಯಪ್ಪ ಭಜನಾ  ಮಂದಿರದಲ್ಲಿ ಕೊನೆಗೊಂಡಿತು. ಅಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಶ್ರೀ ಮೂಕಾಂಬಿಕಾ ಭಜನಾ ಮಂದಿರದ ಮಾಧವ ಉಯಿತ್ತಡ್ಕ ಅಧ್ಯಕ್ಷತೆ ವಹಿಸಿದ್ದರು. ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಗುರುಸ್ವಾಮಿ ಯಾದವ ರಾವ್ , ಅಪ್ಪಕುಂಞಿ ಗುರುಸ್ವಾಮಿ ಅಡೂರು, ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಶಕ್ತಿನಗರ ಭಜನಾ ಮಂದಿರದ ಶಶಿಧರ ಗುರುಸ್ವಾಮಿ, ಎಂ.ಸಿ.ನಾಯರ್ ಮೊದಲಾದವರು ಉಪಸ್ಥಿತರಿದ್ದರು.
 ಯತೀಶ್ ಕುಂಟಾರು ಸ್ವಾಗತಿಸಿ, ನಿರೂಪಿಸಿದರು. ರಾಜೇಶ್.ಎಚ್ ವಂದಿಸಿದರು.



   

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries