ಕಾರಂತರ ಬದುಕು-ಬರಹ ಪ್ರೇರಣದಾಯಿ-ಹರೀಶ್ ಪೆರ್ಲ
ಬದಿಯಡ್ಕ: ಸಾಹಿತ್ಯ, ಕಲೆ, ಸಂಶೋಧನೆ, ಹೋರಾಟಗಳ ಸಹಿತ ವಿವಿಧ ಆಯಾಮಗಳ ಮೂಲಕ ಬಹುಮುಖೀ ವ್ಯಕ್ತಿತ್ವದ ಡಾ.ಶಿವರಾಮ ಕಾರಂತರ ಬದುಕು-ಬರಹಗಳು ಜಗತ್ತಿಗೇ ಹೊಸ ಬೆಳಕನ್ನು ನೀಡಿದೆ. ನೇರ ನಡೆ-ನುಡಿಯ ಕಾರಂತರ ಒಳನೋಟಗಳ ಚಿಂತನೆಗಳು ಹೊಸ ತಲೆಮಾರಿಗೆ ಆದರ್ಶವಾಗಬೇಕು ಎಂದು ಹಿರಿಯ ಸಾಹಿತಿ ಹರೀಶ್ ಪೆರ್ಲ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ನೇತೃತ್ವದಲ್ಲಿ ಬುಧವಾರ ಬದಿಯಡ್ಕದ ಪೆರಡಾಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಜ್ಞಾನಪೀಠ ಪುರಸ್ಕೃತ ಕವಿ, ಕಡಲತೀರದ ಭಾರ್ಗವ ಡಾ.ಕೋಟ ಶಿವರಾಮ ಕಾರಂತರ 117ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ವಿವಿಧತೆಯ ಮಧ್ಯೆ ಹೆಣಕುವ ಋನಾತ್ಮಕತೆಗಳ ಸತ್ಯದರ್ಶನ ನಡೆಸುವ ಅವರ ಬರಹಗಳು ನಡುಗನ್ನಡ, ನವ್ಯ, ನವ್ಯೋತ್ತರಗಳ ಸಂಗಮವಾಗಿ ಹೊಸತನದೊಂದಿಗೆ ಪ್ರತ್ಯೇಕವಾಗಿ ನಿಲ್ಲುವಂತದ್ದು. ಎಲ್ಲಾ ಕಾಲಕ್ಕೂ ಒಪ್ಪುವ ತೊಳಲಾಟಗಳ ಬದುಕಿನ ವಾಸ್ತವತೆಯ ಚಿತ್ರಣಗಳು ಕಾರಂತರ ಅಗಾಧ ಚಿಂತನೆಯ ಫಲವಾಗಿ ಮೂಡಿಬಂದಿರುವುದು ವಿಶಿಷ್ಟವೆನಿಸುತ್ತದೆ ಎಂದು ಅವರು ತಿಳಿಸಿದರು. ಅವರ ನಿಷ್ಠುರತೆ ಸಹ್ಯವಲ್ಲದಿದ್ದರೂ, ಅದರೊಳಗೆ ಇಳಿದು ನೊಡಿದಾಗ ನಗ್ನ ಸತ್ಯಗಳು ಗೋಚರವಾಗುತ್ತದೆ. ಮುಖವಾಡಗಳಾಚೆಯ ನೈಜತೆಯನ್ನು ಕಾರಂತರು ಬಯಸಿದರು ಮತ್ತು ಹಾಗೆ ಬದುಕಿದರು. ಹೊಸ ತಲೆಮಾರು ಭಾಷೆ, ಸಂಸ್ಕೃತಿಯ ಅರಿವಿನ ವಿಸ್ತಾರತೆಗೆ ಕಾರಂತರ ಒಳಹೊಕ್ಕು ಬರಬೇಕು ಎಂದು ಈ ಸಂದರ್ಭ ಅವರು ಅಭಿಪ್ರಾಯಪಟ್ಟರು.
ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಷ್ಟ್ರದ ಉದಾತ್ತ ಸಾಹಿತ್ಯ ದಿಗ್ಗಜರ ಸಾಲಿನಲ್ಲಿ ಬೆಳೆದ ಕಾರಂತರ ಬರಹಗಳ ವಿಸ್ತಾರತೆಯ ಕಾರಣ ಜ್ಞಾನಪೀಠದ ಮಹಾನ್ ಗೌರವ ಸಂದಿರುವುದು ಕರಾವಳಿಯ ಕನ್ನಡ ಸಾರಸ್ವತ ಲೋಕದ ಹೆಮ್ಮೆ ಎಂದು ತಿಳಿಸಿದರು. ಬೂಟಾಟಿಕೆಯ ಮಾತುಗಳಿಗೆ ಸೊಪ್ಪುಹಾಕದ ಕಾರಂತರು ನೇರ ನಡೆ-ನುಡಿಗಳಿಂದ ಹೊಸ ತಲೆಮಾರಿಗೆ ಮಾರ್ಗದಶರ್ಿಯಾಗಿ ಸದಾ ನೆನಪಲ್ಲಿಡಬೇಕಾದ ಶಕ್ತಿ ಎಂದು ತಿಳಿಸಿದರು. ತನ್ನ ನಂಬಿಕೆಯಂತೆ ಜೀವಿಸಿದ ಅವರು, ಇತರರನ್ನು ಅಂತಹ ನಂಬಿಕೆಗೆ ಒತ್ತಾಯಪೂರ್ವಕವಾಗಿ ಸೆಳೆಯದೆ ಪ್ರತಿಯೊಬ್ಬರ ವ್ಯಕ್ತಿ ಸ್ವಾತಂತ್ರ್ಯಕ್ಕೆ ಬೆಲೆ ನೀಡಿ ನಿಜವಾದ ಧೀಮಂತರೆನಿಸಿ ಸದಾ ಸ್ಮರಣೀಯರು ಎಂದು ತಿಳಿಸಿದರು.
ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕಾಧ್ಯಕ್ಷ ಎ.ಆರ್.ಸುಬ್ಬಯ್ಯಕಟ್ಟೆ, ಪಂಜರಿಕೆ ಸಾಧನಾ ಸೇವಾ ಟ್ರಸ್ಟ್ ನಿದರ್ೇಶಕ ಅರವಿಂದ ಪಂಜರಿಕೆ, ಅಕಾಡೆಮಿ ಉಪಾಧ್ಯಕ್ಷ ಪ್ರೊ.ಎ.ಶ್ರೀನಾಥ್, ಮೀಡಿಯಾ ಕ್ಲಾಸಿಕಲ್ ಬಂದಿಯಡ್ಕದ ಅಧ್ಯಕ್ಷ ಬಾಲಕೃಷ್ಣ ಅಚ್ಚಾಯಿ, ಪೆರಡಾಲ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್ ಅನ್ನಡ್ಕ, ಶಿಕ್ಷಕರಾದ ಚಂದ್ರಹಾಸ ನಂಬ್ಯಾರ್, ಶಾಂತಾ ಮಣಿ, ಕಿಶೋರ್ ಸ್ವಾಮಿಕೃಪಾ, ಕವಿ ಗಣೇಶ್ ಪೈ ಬದಿಯಡ್ಕ ಉಪಸ್ಥಿತರಿದ್ದು ಶುಭಹಾರೈಸಿದರು. ಪತ್ರಕರ್ತ ಪುರುಷೋತ್ತಮ ಭಟ್ ಕೆ ಕಾರಂತರ ಬದುಕು-ಬರಹಗಳ ಬಗ್ಗೆ ಉಪನ್ಯಾಸ ನೀಡಿದರು. ಗಣೇಶ್ ಪೈ ಬದಿಯಡ್ಕ ತಮ್ಮ ಸ್ವರಚಿತ ಕವನಗಳ ಮೂಲಕ ಕಾರ0ತರಿಗೆ ನುಡಿನಮನ ಸಲ್ಲಿಸಿದರು
ಸಂಘಟಕ ಝಡ್ ಎ.ಕಯ್ಯಾರ್, ಗೀತಾ ಎಂ ಭಟ್, ಶಾಲಾ ಮುಖ್ಯೋಪಾಧ್ಯಾಯ ರಾಜಗೋಪಾಲ, ರಿಶಾದ್ ಮಾಸ್ತರ್, ಕಿಶೋರ್ ಪೆರ್ಲ, ಚಂದ್ರಶೇಖರ್ ಮಾಸ್ತರ್, ಜಯಲತ ಬದಿ
ಗಾಯಕ ವಸಂತ ಬಾರಡ್ಕ, ಋತಿಕ್ ಯಾದವ್ ಹಾಗೂ ಶಾಲಾ ವಿದ್ಯಾಥರ್ಿಗಳಿಂದ ಗೀತಗಾಯನ ನಡೆಯಿತು. ಅಕಾಡೆಮಿಯ ಕಾರ್ಯದಶರ್ಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ, ಕವಯಿತ್ರಿ ದಿವ್ಯಗಂಗಾ ಪಿ ವಂದಿಸಿದರು.