ಕನ್ನಡ ನಾಟಕ ವಸ್ತು - ವಿನ್ಯಾಸ ದ್ವಿದಿನ ವಿಚಾರ ಸಂಕಿರಣ ಉದ್ಘಾಟನೆ
ಸಾಹಿತ್ಯಿಕ ಮೌಲ್ಯ ವಿಸ್ತರಣೆಗೆ ಕನ್ನಡ ನಾಟಕಗಳು ಕೊಡುಗೆ ಅಪಾರ : ಡಾ.ಪಾರ್ವತಿ ಜಿ.ಐತಾಳ್
ಕಾಸರಗೋಡು: ನಾಟಕವು ಅಭಿನಯಿಸಿ ತೋರಿಸುವ ಕಲೆಯಾಗಿದ್ದರೂ ಅದನ್ನು ಶುದ್ಧವಾದ ಸಾಹಿತ್ಯ ಕೃತಿ ಎಂಬುದಾಗಿಯೂ ಪರಿಗಣಿಸಿ ಓದಿ ಆಸ್ವಾಧಿಸುವುದಕ್ಕೆ ಸಾಧ್ಯವಿದೆ ಎಂದು ಕುಂದಾಪುರ ಭಂಡಾಕರ್ಾರ್ಸ್ ಕಾಲೇಜಿನಾಂಗ್ಲ ವಿಭಾಗದ ನಿವೃತ್ತ ಪ್ರಾಧ್ಯಾಪಿಕೆ, ಹಿರಿಯ ಅನುವಾದಕಿ ಡಾ.ಪಾರ್ವತಿ ಜಿ.ಐತಾಳ್ ಅವರು ಅಭಿಪ್ರಾಯಪಟ್ಟರು.
ಅವರು ಕಾಸರಗೋಡು ಸರಕಾರಿ ಕಾಲೆಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಬುಧವಾರ ನಡೆದ `ಕನ್ನಡ ನಾಟಕ ವಸ್ತು -ವಿನ್ಯಾಸ` ಎಂಬ ಎರಡು ದಿನಗಳ ವಿಚಾರಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ನಾಟಕವು ಕಲ್ಪನೆಯ ಮೇಲೆ ವಿಕಾಸಗೊಂಡಿರುವ ಪ್ರದರ್ಶನ ಕಲೆಯಾದರೂ ಅದರಲ್ಲಿ ಸಾಹಿತ್ಯದ ಇತರ ಪ್ರಕಾರಗಳಂತೆ ಹಿರಿದಾದ ಮೌಲ್ಯಗಳಿವೆ. ನಾಟಕವು ಪ್ರದರ್ಶನ ಕಲೆಯಾಗಿ ರೂಪುಗೊಂಡಾಗ ಈ ಮೌಲ್ಯಗಳು ಸಹೃದಯರಿಗೆ ಬಲು ಬೇಗನೆ ತಲುಪುತ್ತದೆ. ಅದೇ ರೀತಿ ಸಾಹಿತ್ಯ ಕೃತಿಯಾಗಿ ನಾಟಕವನ್ನು ಓದಿದಾಗಲೂ ಅದು ಓದುಗರ ಮನಸ್ಸಿನಲ್ಲಿ ಒಂದು ಕಾಲ್ಪನಿಕ ಜಗತ್ತನ್ನು ನಿಮರ್ಿಸಿ, ಸಹೃದಯನಲ್ಲಿ ಚಾರಿತ್ರಿಕ ಅಥವಾ ಸಾಮಾಜಿಕ ಪರಿಜ್ಞಾನವನ್ನು ಮೂಡಿಸುವ ಜೊತೆಗೆ ಸಾಮಾಜಿಕ ಮೌಲ್ಯಗಳನ್ನು ಅವನಿಗರಿವಿಲ್ಲದಂತೆ ಮೂಡಿಸುತ್ತವೆ. ಈ ಪ್ರೇರಣೆ ಇತರ ಸಾಹಿತ್ಯ ಪ್ರಕಾರಗಳಿಗಿಂತ ನಾಟಕದ ಮೂಲಕ ಹೆಚ್ಚು ಸಾಧಿತವಾಗುತ್ತದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ವಿದ್ಯಾಥರ್ಿಗಳ ಮನಸ್ಸಿನಲ್ಲಿ ಈ ಕಲ್ಪನೆಯ ಸಾಮಥ್ರ್ಯವನ್ನು ಮತ್ತು ಸೃಜ ಸೃಜನಶೀಲ ಮನೋಭಾವವನ್ನು ಬೆಳೆಸಬೇಕೆಂಬ ಕಾರಣಕ್ಕಾಗಿಯೇ ದೇಶದ ಬಹುತೇಕ ವಿಶ್ವವಿದ್ಯಾನಿಲಯಗಳು ನಾಟಕಗಳನ್ನು ತಮ್ಮ ಪಠ್ಯಕ್ರಮದಲ್ಲಿ ಅಳವಡಿಸಿಕೊಂಡಿವೆ ಎಂದು ಡಾ.ಪಾರ್ವತಿ ಜಿ.ಐತಾಳ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ.ರೆಮಾ ಮಾತನಾಡಿ ಎರಡು ದಿನಗಳ ಈ ವಿಚಾರ ಸಂಕಿರಣವು ಕನ್ನಡ ನಾಟಕ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹೊಸ ಹೊಸ ಚಿಂತನೆಯ ಹೊಳಹುಗಳನ್ನು ಒದಗಿಸಬಲ್ಲುದು ಎಂಬ ಆಶಯವನ್ನು ವ್ಯಕ್ತಪಡಿಸಿದರು. ಕಾಲೇಜಿನ ಆಂತರಿಕ ಮೌಲ್ಯ ಖಾತರಿ ಘಟಕದ ಸಂಯೋಜಕ ಡಾ.ಜಿಜೋ ಪಿ.ಯು. ವಿಚಾರ ಸಂಕಿರಣಕ್ಕೆ ಶುಭ ಹಾರೈಸಿದರು. ವಿಭಾಗದ ಮುಖ್ಯಸ್ಥೆಯಾದ ಸುಜಾತ ಎಸ್. ಅವರು ಸ್ವಾಗತಿಸಿ,ಪ್ರಾಧ್ಯಾಪಕ ಮೊಹಮ್ಮದಾಲಿ ಪೆರ್ಲ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾಥರ್ಿನಿ ಶ್ರದ್ಧಾ ಪ್ರಾಥರ್ಿಸಿದರು.
ಎರಡು ದಿನಗಳಲ್ಲಾಗಿ ನಡೆಯುವ ಈ ವಿಚಾರ ಗೋಷ್ಠಿಯಲ್ಲಿ, ಕನ್ನಡ ನಾಟಕ ವಿಭಿನ್ನ ನೆಲೆಗಳು, ಪೌರಾಣಿಕ
ನಾಟಕ ವಸ್ತು ವಿನ್ಯಾಸ, ಚಾರಿತ್ರಿಕ ವಸ್ತು ವಿನ್ಯಾಸ, ಜನಪದ ವಸ್ತು ವಿನ್ಯಾಸ, ಕಂಬಾರರ ನಾಟಕಗಳಲ್ಲಿ ವರ್ಗಸಂಘರ್ಷ, ಕಾನರ್ಾಡರ ನಾಟಕಗಳ ಸ್ತ್ರೀವಾದಿ ನೆಲೆ, ಅಂತಜರ್ಾಲ ಮತ್ತು ಕನ್ನಡ ರಂಗಭೂಮಿ, ಕನ್ನಡ ನಾಟಕಗಳ ಪ್ರಾದೇಶಿಕ ನೆಲೆ, ಪೂರಕ ಗೋಷ್ಠಿಯಲ್ಲಿ ವೇಣುಗೋಪಾಲ ಕಾಸರಗೋಡು ಅವರ ದೃಷ್ಟಿ, ಕಾನರ್ಾಡ್ರ ತುಘಲಕ್, ಶ್ರೀರಂಗರ ಶೋಕಚಕ್ರ, ಕಂಬಾರರ ಸಿರಿಸಂಪಿಗೆ ನಾಟಕಗಳ ಕುರಿತು ವಿಚಾರ ಮಂಡನೆ ನಡೆಯಲಿದೆ. ಅನಂತರ ಪುತ್ತೂರಿನ ರಂಗಗೀತೆ ತಂಡದಿಂದ ರಂಗಗೀತೆಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಮದುರೈ ಕಾಮರಾಜ ವಿಶ್ವವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ಹರಿಕೃಷ್ಣ ಭರಣ್ಯ ಅವರು ಸಮಾರೋಪ ಮಾತುಗಳನ್ನಾಡಲಿದ್ದಾರೆ.