HEALTH TIPS

ಯಾವುದೇ ಶೀರ್ಷಿಕೆಯಿಲ್ಲ

 ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಝಾಕ್ ವಿಧಿವಶ
    ಮಂಜೇಶ್ವರ: ಮಂಜೇಶ್ವರದ ಶಾಸಕ, ಮುಸ್ಲಿಂಲೀಗ್ ಮುಖಂಡ ಪಿ.ಬಿ.ಅಬ್ದುಲ್ ರಝಾಕ್(63)ಅಸೌಖ್ಯ ಕಾರಣ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು ಶನಿವಾರ ಮುಂಜಾನೆ ನಿಧನರಾದರು.
   ಕಳೆದ ಮೂರು ದಿನಗಳ ಹಿಂದೆ ಜ್ವರದಕಾರಣ ಕಾಸರಗೋಡು ಖಾಸಗೀ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದರು.ಶ್ವಾಸಕೋಶದ ಸೋಂಕಿಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತರಾಗಿರುವರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
   ರಝಾಕ್ ಅವರು ಸತತ ಎರಡನೇ ಬಾರಿಗೆ ಮಂಜೇಶ್ವರ ಶಾಸಕರಾಗಿ ಆಯ್ಕೆಯಾಗಿದ್ದರು. 2011 ರಲ್ಲಿ ಅಂದಿನ ಸಿಪಿಎಂ ಪಕ್ಷದ ಶಾಸಕ ನ್ಯಾಯವಾದಿ ಸಿ.ಎಚ್ ಕುಂಞಿಂಬು ಅವರೆದುರು ಸ್ಪಧರ್ಿಸಿ  5828 ಮತಗಳಿಂದ ರಝಾಕ್ ಜಯಗಳಿಸಿದ್ದರು. ಬಳಿಕ 2016 ರ ಚುನಾವಣೆಯಲ್ಲಿ ಬಿಜೆಪಿ ಪ್ರತಿಸ್ಪಧರ್ಿಯಾಗಿದ್ದ ಕೆ.ಸುರೇಂದ್ರನ್ ಅವರನ್ನು ಕೇವಲ 89 ಮತಗಳ ಅಂತರದಿಂದ ಪರಾಭವಗೊಳಿಸಿ ಎರಡನೇ ಬಾರಿಗೆಶಾಸಕರಾಗಿ ಆಯ್ಕೆಯಾದರು. ಚೆರ್ಕಳ ಗ್ರಾ.ಪಂ. ಅಧ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯರಾಗಿ, ಸ್ಥಾಯೀ ಸಮಿತಿ ಅಧ್ಯಕ್ಷರಾಗಿಯೂ ಆಯ್ಕೆಗೊಂಡಿದ್ದರು. ಮುಸ್ಲಿಂಲೀಗ್ ರಾಷ್ಟ್ರೀಯ ಹಾಗೂ ರಾಜ್ಯ ಸಮಿತಿ ಸದಸ್ಯರಾಗಿ,ಕಾಸರಗೋಡು ಸಂಯುಕ್ತ ಜಮಾಅತ್ ಗೌರವಾಧ್ಯಕ್ಷರಾಗಿ,ನೆಲ್ಲಿಕಟ್ಟೆ ಮತ್ತು ನೀಚರ್ಾಲು ಜಮಾಅತ್ ಗಳ ಅಧ್ಯಕ್ಷರಾಗಿ,ಆಲಂಪಾಡಿ ನೂರುಲ್ ಇಸ್ಲಾಮಿಕ್ ಯತೀಂಖಾನ್ ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
   ವಿವಾದ ಮುಗಿಯುವ ಮೊದಲೇ ವಿಧಿವಶ:
   2016ರ ವಿಧಾನಮಂಡಲ ಚುನಾವಣೆಯಲ್ಲಿ ಪಿ.ಬಿ.ಅಬ್ದುಲ್ ರಝಾಕ್ ಬಿಜೆಪಿಯ ಪ್ರತಿಸ್ಪಧರ್ಿ ಕೆಸುರೇಂದ್ರನ್ ಅವರಿಂದ ಕೇವಲ 89 ಮತಗಳ ಅಂತರದಲ್ಲಿ ಜಯಗಳಿಸಿದ್ದರು.ಅತೀ ಕಡಿಮೆಅಂತರದಲ್ಲಿ ಜಯಗಳಿಸಿದಬಳಿಕ ಇದು ಭಾರೀ ವಿವಾದಕ್ಕೆಕಾರಣವಾಗಿ ಬಿಜೆಪಿ ಅಭ್ಯಥರ್ಿ ಕೆ.ಸುರೇಂದ್ರನ್ ಮತದಾನದಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿ ನ್ಯಾಯಾಯದಲ್ಲಿ ದಾವೆ ಹೂಡಿದ್ದರು. ಅ
ದು 56, 870 ಮತಗಳು ರಝಾಕ್ ಅವರಿಗೂ, 56, 781 ಮತಗಳು ಸುರೇಂದ್ರನ್ ಅವರಿಗೂ ಲಭ್ಯವಾಗಿದ್ದವು. ಕುಂಞಿಂಬು ಅವರು 42,565 ಮತಗಳನ್ನು ಪಡೆದಿದ್ದರು. ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆಯುತ್ತಿದ್ದು, ಮರು ಚುನಾವಣೆಯ ಸಾಧ್ಯತೆಗಳು  ಕಂಡುಬಂದ ಬೆನ್ನಿಗೇ ರಝಾಕ್ ಅವರ ಅಕಾಲಿಕ ನಿಧನ ಕುತೂಹಲ ಮೂಡಿಸಿದೆ.
   ಮೂಲತಃ ಉದ್ಯಮಿಯಾಗಿದ್ದ ರಝಾಕ್ ಅವರ ನಿಧನಕ್ಕೆ ಯುಡಿಎಫ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಸಕಲ ಸಕರ್ಾರಿ ಗೌರವಗಳೊಂದಿಗೆ ಇಂದು ಅಂತ್ಯಸಂಸ್ಕಾರ ಚೆರ್ಕಳದಲ್ಲಿ ನಡೆಯಲಿದೆ.   ಪತ್ನಿ,ಪುತ್ರಿಯನ್ನು ಅಗಲಿದ್ದಾರೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries