HEALTH TIPS

ಯಾವುದೇ ಶೀರ್ಷಿಕೆಯಿಲ್ಲ

           ಸೂತಕದ ಮಧ್ಯೆಯೂ ಅದ್ಧೂರಿ ಜಂಬೂ ಸವಾರಿ ಮೆರವಣಿಗೆ; ಮೈಸೂರಿನಲ್ಲಿ ಕಳೆಗಟ್ಟಿದ ಸಂಭ್ರಮ
               7 ನೇ ಬಾರಿಗೆ ಅಂಬಾರಿ ಹೊತ್ತು ಸಾಗಿದ ಅಜರ್ುನ
     ಮೈಸೂರು:ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ, ಜಂಬೂ ಸವಾರಿ ಅರಮನೆ ನಗರಿಯಲ್ಲಿ ಶುಕ್ರವಾರ ವೈಭವೋಪೇತವಾಗಿ ನಡೆಯಿತು.
  ಶುಕ್ರವಾರ ಮಧ್ಯಾಹ್ನ  ಅರಮನೆ ಬಲರಾಮದ್ವಾರದಲ್ಲಿ ಶುಭ ಕುಂಭ ಲಗ್ನದಲ್ಲಿ  ನಂದೀಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು  ವಿಜಯದಶಮಿ ಮೆರವಣಿಗೆ ಉದ್ಘಾಟಿಸಿದರು.
  ದಸರಾ ಗಜಪಡೆಯ ಕ್ಯಾಪ್ಟನ್ ಅಜರ್ುನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಉತ್ಸವಮೂತರ್ಿಯನ್ನು ಹೊತ್ತು ಗಾಂಭೀರ್ಯದಲ್ಲಿ  ಇತರ ಸಾಲಂಕೃತ ಆನೆಗಳೊಂದಿಗೆ ಗಾಂಭೀರ್ಯದಲ್ಲಿ ಹೆಜ್ಜೆ ಹಾಕಿದ. ಮುಖ್ಯಮಂತ್ರಿ  ಎಚ್ಡಿಕೆ ಅವರು ಚಾಮುಂಡೇಶ್ವರಿ ಮೂತರ್ಿಗೆ ಪುಷ್ಪಾರ್ಚನೆ ಮಾಡಿದರು.
  ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪೊಲೀಸ್ ಆಯುಕ್ತ ಡಾ. ಎ.ಸುಬ್ರಹ್ಮಣ್ಯೇಶ್ವರ ರಾವ್ ಹಾಜರಿದ್ದರು. 
    ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ, ಪರಂಪರೆ, ಪ್ರಾಕೃತಿಕ ಶ್ರೀಮಂತಿಕೆಗಳನ್ನು ಬಿಂಬಿಸುವ ನಾಡಿನ ಮೂಲೆ ಮೂಲೆಯಿಂದ ಆಗಮಿಸುವ 100ಕ್ಕೂ ಹೆಚ್ಚು ಕಲಾ ತಂಡಗಳು, ರಾಜ್ಯದ ಎಲ್ಲಾ ಜಿಪಂ ಹಾಗೂ ವಿವಿಧ ಇಲಾಖೆ, ನಿಗಮಗಳ ಒಟ್ಟು 42 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ  ಗಮನ ಸೆಳೆದವು.
  ದೇಶವಿದೇಶ ಗಳಿಂದ ಆಗಮಿಸಿದ  ಲಕ್ಷಾಂತರ ಪ್ರವಾಸಿಗರು ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
 ಅಜರ್ುನ ಸಹಿತ ದಸರಾ ಗಜಪಡೆಯ 12 ಆನೆ, ಅಶ್ವಾರೋಹಿ ಪಡೆ, ಎನ್ಸಿಸಿ ಕೆಡೆಟ್ಸ್ ಅರಮನೆ ಆವರಣ ದಿಂದ 5 ಕಿ.ಮೀ ದೂರದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಿತು.
    ಬಾಧಿಸಿದ ಸೂತಕದ ಛಾಯೆ:
   ರಾಜಮಾತೆ ಪ್ರಮೋದಾ ದೇವಿ ಅವರಿಗೆ ಮಾತೃ ವಿಯೋಗವಾದ ಹಿನ್ನಲೆಯಲ್ಲಿ ಯುವರಾಜ ಯದುವೀರ್ ಒಡೆಯರ್ ಸಹಿತ ರಾಜಮನೆತನದವರು ಜಂಬೂ ಸವಾರಿ ಮೆರವಣಿಗೆ ಮತ್ತು ಧಾಮರ್ಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲ್ಲಿಲ್ಲ.
   ರಾಜಮಾತೆ ಪ್ರಮೋದಾದೇವಿ ಒಡೆಯರ್ ರ ನಾದಿನಿ ವಿಶಾಲಾಕ್ಷಿದೇವಿ ನಿಧನ
     ವಿಜಯದಶಮಿ ಸಂಭ್ರಮದಲ್ಲಿದ್ದ ಮೈಸೂರು ರಾಜವಂಶಸ್ಥರಿಗೆ ಶುಕ್ರವಾರತೀವ್ರ ದುಃಖದ ವಾತರ್ೆ ಎದುರಾಯಿತು. ಶುಕ್ರವಾರ  ಬೆಳಿಗ್ಗೆಯಷ್ಟೇ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟಚಿನ್ನಮ್ಮಣಿ(98)  ವಿಧಿ ವವಶರಾಗಿದ್ದರು. ಜೊತೆಗೆ ದಿವಂಗತ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸೋದರಿ ಅನಾರೋಗ್ಯ ಪೀಡಿತರಾಗಿದ್ದ  ವಿಶಾಲಾಕ್ಷಿದೇವಿ (56) ಸಹ ನಿಧನರಾಗಿದ್ದಾರೆ. ಈ ಮೂಲಕ ಒಂದೇ ದಿನ ರಾಜ ಕುಟುಂಬದ ಇಬ್ಬರು ಪ್ರಮುಖರು ಅಸುನೀಗಿದಂತಾಗಿದೆ.
   ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯಲ್ಲಿ ಒಂದು ವಾರದಿಂದ ಚಿಕಿತ್ಸೆ ಪಡೆಯುತ್ತಿದ್ದ ವಿಶಾಲಾಕ್ಷಿದೇವಿ ಬಹು ಅಂಗಾಂಗ ವೈಫಲ್ಯದಿಂದ ಶುಕ್ರವಾರ ನಿಧನರಾದರೆಂದು ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
   ಮೃತರಿಗೆ ಪತಿ, ಪುತ್ರ ಹಾಗೂ ಪುತ್ರಿಯರಿದ್ದಾರೆ. ಶನಿವಾರ ಮೈಸೂರು "ಖಾಸ್ ಮಧುವನ"ದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ಹೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries