ಚಿನ್ಮಯ ವಿದ್ಯಾಲಯದಲ್ಲಿ ವಿದ್ಯಾರಂಭ ಮತ್ತು ಮಾತೃ ಪೂಜೆ
ಕಾಸರಗೋಡು: ವಿದ್ಯಾನಗರದ ಚಿನ್ಮಯ ವಿದ್ಯಾಲಯದಲ್ಲಿ ವಿಜಯದಶಮಿಯ ಪ್ರಯುಕ್ತ ಪುಟಾಣಿಗಳಿಗೆ ಅರಿವಿನ ಬೆಳಕಿಗೆ ದಾರಿಮಾಡುವ ವಿದ್ಯಾರಂಭ ಹಾಗೂ ಮಾತೃ ಪೂಜೆ ಶುಕ್ರವಾರ ನಡೆಯಿತು.
ಹಿರಿಯರನ್ನೂ ಸಂಸ್ಕಾರದ ಭಾಗವದ ಆಚಾರಾನುಷ್ಠಾನಗಳನ್ನು ಅಲಕ್ಷಿಸುವ ಇಂದಿನ ತಲೆಮಾರಿಗೆ `ಮಾತಾ ಪಿತ ಗುರುದೈವ' ಎಂಬ ಆಪ್ತ ವಾಕ್ಯವನ್ನು ನೆನಪಿಸುವ ಉದ್ದೇಶದಿಂದ ಚಿನ್ಮಯ ಮಿಷನ್ ಮಾತೃ ಪೂಜೆಯನ್ನು ವರ್ಷಂಪ್ರತಿ ವಿಜಯದಶಮಿಯಂದು ಹಮ್ಮಿಕೊಳ್ಳುತ್ತಿದೆ. ಅಸುರೀ ಭಾವನೆಯನ್ನು ದೂರೀಕರಿಸಿ ತಾಯಿತಂದೆಯರಲ್ಲಿ ಗುರು ಹಿರಿಯರಲ್ಲಿ ಭಕ್ತಿ ಭಾವನೆಯನ್ನು ಮೂಡಿಸಿ ಸ್ನೇಹ ವಿಶ್ವಾಸದ ಮೌಲ್ಯವನ್ನು ತಿಳಿಯಪಡಿಸುವುದೇ ಈ ಶುಭ ದಿನದ ಉದ್ದೇಶ.
ಈ ವಿಶೇಷ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾತಾಜಿ ಶ್ರೀ ಕಾಳಿಕಾನಂದಜಿ ನವರಾತ್ರಿಯ ಸಂದರ್ಭದಲ್ಲಿ ದೇವಿಯನ್ನು ಕಾಳಿಯಾಗಿ, ಲಕ್ಷ್ಮಿಯಾಗಿ, ಸರಸ್ವತಿಯಾಗಿ ಆರಾಧಿಸುತ್ತೇವೆ. ಮಕ್ಕಳು ತಮ್ಮ ತಮ್ಮ ತಾಯಂದಿರಲ್ಲಿ ಈ ಮೂರ್ತಭಾವವನ್ನು ಕಲ್ಪಿಸಬೇಕು. ಮಕ್ಕಳ ತಪ್ಪನ್ನು ತಿದ್ದಲು ತಾಯಿ ಕಾಳಿಯಾಗುತ್ತಾಳೆ. ಅವರ ಇಚ್ಛೆಯನ್ನು ಪೂರೈಸುವ ಲಕ್ಷ್ಮಿಯಾಗುತ್ತಾಳೆ. ಅವರಿಗೆ ವಿದ್ಯಾಬುದ್ಧಿಯನ್ನು ಕರುಣಿಸುವ ಸರಸ್ವತಿಯಾಗುತ್ತಾಳೆ. ತಾಯಿಯನ್ನು ದೇವತೆಯೆಂದು ತಿಳಿದ ಮಕ್ಕಳ ಮೇಲೆ ಆಕೆಯ ಆಶೀವರ್ಾದ ಸದಾ ಹರಿಯಲ್ಪಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ನೂರಾರು ಪುಟಾಣಿಗಳು ಮಾತೆಯರ ಪಾದಪೂಜೆ ನೆರವೇರಿಸಿ ತಾಯಂದಿರ ಆಶೀವರ್ಾದವನ್ನು ಪಡೆದು ಧನ್ಯರಾದರು. ವಿದ್ಯಾಲಯದ ಪ್ರಾಂಶುಪಾಲ ಬಿ.ಪುಷ್ಪರಾಜ, ಉಪ ಪ್ರಾಂಶುಪಾಲೆ ಸಂಗೀತ ಪ್ರಭಾಕರ್, ಮುಖ್ಯೋಪಾಧ್ಯಾಯಿನಿಯರಾದ ಸಿಂಧು ಶಶೀಂದ್ರನ್, ಪೂಣರ್ಿಮ ಹಾಗೂ ಇತರ ಗಣ್ಯ ವ್ಯಕ್ತಿಗಳು ಪಾಲ್ಗೊಂಡರು. ಪ್ರಸಾದ ವಿತರಣೆಯೊಂದಿಎಗ ಕಾರ್ಯಕ್ರಮ ಸಂಪನ್ನಗೊಂಡಿತು.