ಕಾಸರಗೋಡು: ಭಾನುವಾರ ರಾತ್ರಿ ಶಬರಿಮಲೆ ಕ್ಷೇತ್ರದಲ್ಲಿ ನಾಮಜಪ ಪ್ರತಿಭಟನೆ ನಡೆಸಿ ಬಳಿಕ ಬಂಧಿತರಾದ 68 ಮಂದಿಯನ್ನು ಪತ್ತನಂತಿಟ್ಟ ಮುನ್ಸಿಫಲ್ ನ್ಯಾಯಾಲಯ ರಿಮಾಡರ್್ ಗೊಳಪಡಿಸಿದೆ.ಇವರ ಜಾಮೀನು ಅಜರ್ಿಯನ್ನು ಬುಧವಾರ ನ್ಯಾಯಾಲಯ ಪರಿಶೀಲಿಸಲಿದೆ ಎಮದು ತಿಳಿದುಬಂದಿದೆ.ಬಂಧಿತರಾದವರನ್ನು ಮಣಿಯಾರ್ ಪೋಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಬಳಿಕ ನ್ಯಾಯಾಲಯದಲ್ಲಿ ಹಾಜರುಪಡಿಸಲಾಯಿತು.
ಬಂಧಿತ 68 ಮಂದಿ ಅಯ್ಯಪ್ಪ ವ್ರತಧಾರಿಗಳನ್ನು 14 ದಿನಗಳ ಕಾಲದ ರಿಮಾಂಡ್ ವಿಧಿಸಲಾಗಿದೆ. ಬಳಿಕ ಸೋಮವಾರ ಸಂಜೆ ತಿರುವನಂತಪುರ ಕೇಂದ್ರ ಕಾರಾಗೃಹಕ್ಕೆ ಇವರನ್ನು ಕರೆದೊಯ್ಯಲಾಯಿತು. ಶಬರಿಮಲೆ ಸನ್ನಿಧಾನದ ನಿಷೇಧಾಜ್ಞೆ ಉಲ್ಲಂಘಿಸಿದ್ದರ ಹೆಸರಲ್ಲಿ ಜಾಮೀನು ರಹಿತ ದೂರುಗಳನ್ನು ದಾಖಲಿಸಲಾಗಿದೆ.
ಕೊಟ್ಟರಕ್ಕರ ಉಪ ಕಾರಾಗೃಹಕ್ಕೆ ಇವರನ್ನು ಕರೆದೊಯ್ಯಬಹುದಾಗಿದ್ದರೂ 68 ಮಂದಿಗೆ ಅಲ್ಲಿ ಸ್ಥಳಾವಕಾಶದ ಕೊರತೆಯ ಕಾರಣ ನೀಡಿ ತಿರುವನಂತಪುರದ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ಯಲಾಯಿತೆಂದು ಪೋಲೀಸ್ ಮೂಲಗಳು ತಿಳಿಸಿವೆ.




