HEALTH TIPS

"ನಿಮ್ಮ ಎಚ್ಐವಿ ಪ್ರಮಾಣ ತಿಳಿಯಿರಿ" ಎಂಬುದು ಈ ಬಾರಿಯ ಏಡ್ಸ್ವಿರುದ್ಧ ದಿನ ಸಂದೇಶ : ಜಿಲ್ಲಾಧಿಕಾರಿ ಏಡ್ಸ್ ವಿರುದ್ಧ ದಿನಾಚರಣೆಗೆ ಸಿದ್ಧತೆ : 30ರಂದು ಮೆರವಣಿಗೆ, ಡಿ.1ರಂದು ಗಾಳಿಪಟ ಉತ್ಸವ ಮೂಲಕ ಜನಜಗೃತಿ




            ಕಾಸರಗೋಡು :   ಡಿಸೆಂಬರ್ ಒಂದರಂದು ವಿಶ್ವ ಏಡ್ಸ್ ವಿರುದ್ಧ ದಿನಾಚರಣೆ ನಡೆಯಲಿದ್ದು, ಜಿಲ್ಲೆಯಲ್ಲಿ ಮಾರಕರೋಗ ಏಡ್ಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಅಂದು ವಿವಿಧ ಸಮಾರಂಭಗಳೊಂದಿಗೆ ಸಮಾರಂಭ ನಡೆಯಲಿದೆ.


"ನಿಮ್ಮ ಎಚ್ಐವಿ ಪ್ರಮಾಣ ತಿಳಿಯಿರಿ( ನೋ ಯುವರ್ ಎಚ್ಐವಿ ಸ್ಟೇಟಸ್)" ಎಂಬ ಸಂದೇಶದೊಂದಿಗೆ ಬಾರಿಯ ಏಡ್ಸ್ ವಿರುದ್ಧ ದಿನ ಆಚರಣೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಡಾ.ಸಜಿತ್ಬಾಬು ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ವಿಚಾರ ತಿಳಿಸಿದರು.ಜನಜಾಗೃತಿಯಿಂದ ಮಾತ್ರ ಘೋರರೋಗದ ನಿಯಂತ್ರಣ ಸಾಧ್ಯ ಎಂಬ ಹಿನ್ನೆಲೆಯಲ್ಲಿ ಸೋಂಕಿನ ಲಕ್ಷಣ ಪತ್ತೆಯಾದಲ್ಲಿ ತಕ್ಷಣ ಚಿಕಿತ್ಸೆ ಆರಂಭಿಸಿ, ಸುಧಾರಿತ ಆರೋಗ್ಯ ಜೀವನ ಪಡೆಯುವ ಉದ್ದೇಶದಿಂದ ಸಂದೇಶದೊಂದಿಗೆ ಬಾರಿಯ ಕಾರ್ಯಕ್ರಮ ನಡೆಯಲಿದೆ ಎಂದವರು ನುಡಿದರು.     
ತಪಾಸಣೆ ಬಗ್ಗೆ ಜಾಗೃತಿ ಬೇಕು : ಜಿಲ್ಲೆಯಲ್ಲಿ ಸರಕಾರಿ ಮಟ್ಟದಲ್ಲಿ ಸಂಬಂಧ ಅನೇಕ ಸುಧಾರಿತ ಚಿಕಿತ್ಸಾ ಕೇಂದ್ರಗಳು ಇವೆ. ಆದರೆ ಜಿಲ್ಲೆಯಲ್ಲಿರುವ 15 ಲಕ್ಷ ಜನಸಂಖ್ಯೆಯಲ್ಲಿ ಕೇವಲ  ಒಂದೂಕಾಲು ಲಕ್ಷ ಮಂದಿ ಮಾತ್ರ ರೋಗತಪಾಸಣೆಗೆ ಒಳಗಾಗುತ್ತಿದ್ದಾರೆ ಎಂಬ ಸರಕಾರಿ ಗಣನೆ ಆತಂಕಕ್ಕೆ ಕಾರಣವಾಗಿದೆ ಎಂದವರು ಹೇಳಿದರು.
ವಿವಿಧ ಕಾರ್ಯಕ್ರಮಗಳು: ಸಮಾರಂಭ ಅಂಗವಾಗಿ .30ರಂದು ಸಂಜೆ 5 ಗಂಟೆಗೆ ನಗರದಲ್ಲಿ ಜನಜಾಗೃತಿ ಮೂಡಿಸುವ ಮೆರವಣಿಗೆ ನಡೆಯಲಿದೆ. ಸರಕಾರಿ, ಸರಕಾರಿಯೇತರ ಸಂಘಟನೆಗಳ ಇತ್ಯಾದಿಗಳ ಸದಸ್ಯರು ಭಾಗವಹಿಸುವರು. ಕಂದೀಲು ಹಿಡಿದುಕೊಂಡು ವೃತ್ತಾಕಾರದಲ್ಲಿ ಏಡ್ಸ್ ವಿರುದ್ಧ ಸಂದೇಶ ಸಾರುವ ವಿಶಿಷ್ಟ ಕಾರ್ಯಕ್ರಮವೂ ಇರುವುದು. ರಾಜ್ಯಸರಕಾರದ "ಉಜ್ವಲಬಾಲ್ಯ" ಯೋಜನೆ ಮುಖಾಂತರ ಆಯ್ಕೆ ಮಾಡಲಾದ ಮಕ್ಕಳಾದ ಹಸನ್ ಮತ್ತು ಮಧುರಿಮಾ ಅವರಿಂದ ಚಿತ್ರರಚನೆ ಸಂದರ್ಭ ಹೊಸಬಸ್ ನಿಲ್ದಾಣ ಬಳಿಯಲ್ಲಿ ನಡೆಯಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ .ಜಿ.ಸಿ.ಬಶೀರ್ ಸಮಾರಂಭ ಉದ್ಘಾಟಿಸುವರು. ಡಿ.1ರಂದು ಬೆಳಗ್ಗೆ 10 ಗಂಟಗೆ ಕಾಞಂಗಾಡು ಕಡಲಕಿನಾರೆಯಲ್ಲಿಕೃಷಿಕಾಲೇಜು ವಿದ್ಯಾಥರ್ಿಗಳ ನೇತೃತ್ವದಲ್ಲಿ ಗಾಳಿಪಟ ಉತ್ಸವ ಜರುಗಲಿದೆ. ಕಾಞಂಗಾಡು ನಗರಸಭೆ ಅಧ್ಯಕ್ಷ ರಮೇಶನ್ ಉದ್ಘಾಟಿಸುವರು ಎಂದವರು ಹೇಳಿದರು.         
ಇಳಿಮುಖವಾದ ರೋಗಬಾಧೆ : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ..ಪಿ.ದಿನೇಶ್ಕುಮಾರ್ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಜಾಗೃತಿ ಕಾರ್ಯಕ್ರಮಗಳ ಪರಿಣಾಮ ಏಡ್ಸ್ ಬಾಧಿತರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಿಳಿಸಿದರು.
                 ಸರಕಾರಿ ಗಣನೆ ಪ್ರಕಾರ 2016-17ರಲ್ಲಿ 54 ರೋಗಿಗಳ ಪತ್ತೆಯಾದರೆ, 17-18ರಲ್ಲಿ 30 ರೋಗಿಗಳು ಕಂಡುಬಂದಿದ್ದರು. 18-19ರಲ್ಲಿ ( ವರೆಗೆ) 20 ಮಂದಿ ಪತ್ತೆಯಾಗಿದ್ದಾರೆ ಎಂದು ತಿಳಿಸಿದರು. 
ಪುಟ್ಟಮಕ್ಕಳಲ್ಲಿ ಕಂಡುಬರುವ ರೋಗದ ಸೋಂಕು ನಿಜವಾದ ದುರಂತ ಎಂದ              
                  ಅವರು ಇದನ್ನು ತಡೆಯುವಲ್ಲಿ ಸರ್ವಯತ್ನ ನಡೆಯುತ್ತಿದೆ ಎಂದು ಹೇಳಿದರು. ಗಭರ್ಿಣಿಯರಲ್ಲಿ ರೋಗ ಪತ್ತೆಯಾದಲ್ಲಿಆರಂಭದ ಹಂತವಾಗಿದ್ದರೆ, ತಕ್ಷಣ ಚಿಕಿತ್ಸೆ ನಡೆಸಿದರೆ ಮಗುವನ್ನು ರೋಗದಿಂದ ರಕ್ಷಿಸುವ ಸೌಲರ್ಭಯಗಳೂ ಇವೆ. ವೈದ್ಯಕೀಯ ತಪಾಸಣೆಯೊಂದೇ ದಾರಿ ಎಂದು ತಿಳಿಸಿದ ಅವರು, ಇತರ ವ್ಯಕ್ತಿಗಳಲ್ಲೂ ರೋಗ ತಗುಲುವಿಕೆಯ 24 ತಾಸುಗಳೊಳಗೆ ಔಷಧ ಮೂಲಕ ನಿಯಂತ್ರಣ ಸಾಧ್ಯವಿದೆ. ಆದರೆ ರೋಗಕ್ಕೆ ಆರಂಭಿಕ ಲಕ್ಷಣಗಳು ಇಲ್ಲದೇ ಇರುವುದು ಮತ್ತು ಉಲ್ಭಣಾವಸ್ಥೆಯಲ್ಲಿ ಮಾತ್ರ ಪತ್ತೆಯಾಗುವುದು ದುರಂತ. ಆದುದರಿಂದ ಪ್ರತಿ ವ್ಯಕ್ತಿಯೂ ಎಚ್ಐವಿ ಇದೆಯೇ ಎಂಬ ತಪಾಸಣೆಗೆ ಒಳಗಾಗಬೇಕಾದುದು ಅನಿವಾರ್ಯ ಎಂದರು.  
ಕೇರಳದ ಅತ್ಯುತ್ತಮ ಎಆರ್ಟಿ ಸೆಂಟರ್ : ಏಡ್ಸ್ ಸೋಂಕಿನ ಪತ್ತೆಮಾಡುವಲ್ಲಿ ಮತ್ತು ಚಿಕಿತ್ಸೆ ನೀಡುವಲ್ಲಿ ಸ್ಥಳೀಯ ಎಆರ್ಟಿ ಸೆಂಟರ್ ನೀಡುತ್ತಿರುವ ಯೋಗದಾನ ದೊಡ್ಡದು. ಇಡೀ ರಾಜ್ಯದಲ್ಲಿ ಅತ್ಯುತ್ತಮ ಎಆರ್ಟಿ ಕಾಸರಗೋಡಿನದು ಎಂದು ಜಿಲ್ಲಾ ಏಡ್ಸ್ ನೋಡೆಲ್ ಅಧಿಕಾರಿ ಡಾ. ಆಮಿನಾ ಮುಂಡೋಳ್ ತಿಳಿದರು.
ಹಿಂದೆ ನಿರೀಕ್ಷಿತ ವರ್ಗದ ಮಂದಿಯಲ್ಲಿ(ಟ್ರಕ್ ಚಾಲಕರು, ಲೈಂಗಿಕ ಕಾಮರ್ಿಕರು ಇತ್ಯಾದಿ) ಎಚ್ಐವಿ ಸೋಂಕು ಕಂಡುಬರುತ್ತಿದ್ದರೆ, ಇಂದು ಸಾರ್ವಜನಿಕ ವಲಯದಲ್ಲೂ ಅದು ಗಣನೀಯವಾಗಿ ಪತ್ತೆಯಾಗುತ್ತಿರುವುದು ಆತಂಕಕಾರಿ ವಿಚಾರ ಎಂದವರು ನುಡಿದರು. 
    



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries